ರಾಣೇಬೆನ್ನೂರು
ಸರಗಳ್ಳತನ ಮತ್ತು ಮನೆಗಳ್ಳತನ ಮಾಡುತ್ತಿದ್ದ ನಾಲ್ಕು ಜನ ಕಳ್ಳರನ್ನು ಬಂಧಿಸಿ ಅವರಿಂದ ಅಂದಾಜು 5 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 2 ಮೋಟಾರ್ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಾವೇರಿ ಜಿಲ್ಲಾ ಎಸ್ಪಿ. ಕೆ.ಸಿ.ದೇವರಾಜು ಹೇಳಿದರು.
ನಗರದ ಶಹರ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಣೇಬೆನ್ನೂರಿನ ಗೌರಿಶಂಕರ ನಗರ, ವಿಕಾಸ ನಗರ, ಮಾರುತಿ ನಗರ, ಶ್ರೀರಾಮ ನಗರ ಹಾಗೂ ಹರಿಹರದಲ್ಲಿ ಸರಗಳ್ಳತನ ಮಾಡಿದ್ದ ಈ ನಾಲ್ವರು ಕಳ್ಳರಿಂದ 170 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಈ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು, ವಿವರವಾದ ಮಾಹಿತಿಯೊಂದಿಗೆ ಪೊಲೀಸರು ತನಿಖೆ ಕೈಗೊಂಡಾಗ ಈ ಆರೋಪಿಗಳು ಬಲೆಗೆ ಬಿದ್ದಿದ್ದು, 5 ಕಡೆ ಸರಗಳ್ಳತನ ಮಾಡಿದ್ದು ನಾವೇ ಎಂದು ತಪ್ಪೊಪ್ಪಿಕೊಂಡಿರುವುದಾಗಿ ಹೇಳಿದ್ದಾರೆ ಎಂದರು.
ಈ ಕಳ್ಳತನದ ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದರು. ಸಾರ್ವಜನಿಕರೂ ಸಹ ಅದರಲ್ಲೂ ವಿಶೇಷವಾಗಿ ಮಹಿಳೆಯರು ಮೈ ಮೇಲೆ ಆಭರಣಗಳನ್ನು ಧರಿಸಿಕೊಂಡಾಗ ಜಾಗೃಕತೆಯಿಂದೆ ಇರಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಎ.ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‍ಪಿ ಟಿ.ವಿ.ಸುರೇಶ, ಶಹರ ಸಿಪಿಐ ಲಿಂಗನಗೌಡ ನೆಗಳೂರ, ಪಿಎಸ್‍ಐ ಪ್ರಭು ಕೆಳಗಿನಮನಿ, ಎನ್.ಎಂ.ಉದಗಟ್ಟಿ, ಎಎಸ್‍ಐ ಕೋಮಲಾಚಾರ್ಯ, ಪೊಲೀಸರಾದ ಕೆ.ಎಚ್. ಸವೂರ , ವಿಶ್ವನಾಥ, ಎಚ್.ಎನ್.ನಡುವಿನಮನಿ, ಮಂಜುನಾಥ ಕುಂಟಗೌಡ್ರ, ಹೆಚ್ ಶಿವರಾಜ, ಎಚ್.ವೈ ಮಂಜುನಾಥ, ರಾಜು ವಡ್ಡರ, ಕೆ.ಎಫ್ ಕೆಂಗೊಂಡ, ರಮೇಶ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ