ಡಿ ಆರ್ ಡಿ ಓ ವಿಜ್ಞಾನಿ ಮನಯಲ್ಲಿ ಕಳ್ಳತನ..!!!

ಬೆಂಗಳೂರು

       ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ವಿಜ್ಞಾನಿಯೊಬ್ಬರ ಮನೆಯಲ್ಲಿದ್ದ 6 ಲಕ್ಷ 20 ಸಾವಿರ ನಗದನ್ನು ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿರುವ ದುರ್ಘಟನೆ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

       ಡಿಆರ್‍ಡಿಒ ವಿಜ್ಞಾನಿ ನಾಗಮಹೇಶ್ವರ ತಮ್ಮ ಕಿಡ್ನಿ ಶಸ್ತ್ರಚಿಕಿತ್ಸೆಗೆಂದು 10 ಲಕ್ಷರೂ ಡ್ರಾ ಮಾಡಿಕೊಂಡು ಬಂದು ಮನೆಯ ಕಬೋರ್ಡ್ ನಲ್ಲಿಟ್ಟಿದ್ದರು.ಆದರೆ ಅದರಲ್ಲಿನ 6 ಲಕ್ಷ 20 ಸಾವಿರ ಕಳ್ಳತನವಾಗಿದೆ. ವಿಜ್ಞಾನಿ ಮನೆ ಕೆಲಸದವಳು ಈ ಹಣ ಕಳವು ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

        ಕಳೆದ ಮಾ.16ರಂದು ನಾಗಮಹೇಶ್ವರ್ ಶಸ್ತ್ರಚಿಕಿತ್ಸೆಗಾಗಿ ಕಬೋರ್ಡ್‍ನಲ್ಲಿಟ್ಟಿದ್ದ ಹಣವನ್ನು ಎಣಿಸಿದಾಗ 6 ಲಕ್ಷ 20 ಸಾವಿರ ನಾಪತ್ತೆಯಾಗಿರುವುದು ಗೊತ್ತಾಗಿದೆ. ತಕ್ಷಣ ಮನೆಕೆಲಸದವರಾದ ಧನಲಕ್ಷಿ ಹಾಗೂ ರಾಜಲಕ್ಷ್ಮಿ ಇಬ್ಬರನ್ನೂ ವಿಚಾರಿಸಿದ್ದಾರೆ. ಆದರೆ ಅವರು ತಾವು ಹಣ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

        ಆದಾಗ್ಯೂ ಮನೆ ಕೆಲಸದವರ ಮೇಲೆ ಅನುಮಾನ ಹೊಂದಿರುವ ಹಿನ್ನಲೆಯಲ್ಲಿ ನಾಗಮಹೇಶ್ವರ್, ಮನೆ ಕೆಲಸದವರ ವಿರುದ್ಧ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಮುಂದುವರೆಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link