ಇದು ದೇವರು ಮತ್ತು ಭಕ್ತರ ನಡುವಿನ ವಿಶೇಷ ನಂಟು : ಬಸವರಾಜ ಬೊಮ್ಮಾಯಿ

ಶಿಗ್ಗಾವಿ :

      ಕಷ್ಟ ಪಟ್ಟು ಪಡೆಯುವ ದೇವರ ದರ್ಶನಕ್ಕೆ ಭಕ್ತರು ಬಹಳ, ಇದು ದೇವರು ಮತ್ತು ಭಕ್ತರ ನಡುವಿನ ವಿಶೇಷ ನಂಟು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

        ಪಟ್ಟಣದ ಸಿಲ್ಕ್ ಬೋರ್ಡ ಕಾಲೋನಿಯಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮೀತಿ ಶಿಗ್ಗಾವಿ ವತಿಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಗಣಪತಿ ಶ್ರೀ ಅಯ್ಯಪ್ಪಸ್ವಾಮಿ, ಸುಭ್ರಮಣ್ಯಸ್ವಾಮಿ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಟಾಪನಾ ಹಾಗೂ ಕಳಸಾರೋಹಣ ಕಾರ್ಯಕ್ರಮದ ನಂತರ ನಡೆದ ಧರ್ಮಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವರು ಎಂದರೇ ದೂರದ ಶಕ್ತಿ, ಆ ಶಕ್ತಿಯಲ್ಲಿಯೇ ವಿಶೇಷ ಭಕ್ತಿ ಅಡಗಿದೆ, ಭಕ್ತಿ ಭಾವ ಅಪೂರ್ಣವಾಗಬಾರದು ಅದು ಸಂಪೂರ್ಣವಾಗಬೇಕು ಅಂದಾಗ ಭಗವಂತನ ಒಲಿಸಿಕೊಳ್ಳಲು ಸಾದ್ಯವಿದೆ, ಭಕ್ತಿ ಎಂದರೆ ಉತ್ಕøಷ್ಟ ಪ್ರೀತಿ, ಭಕ್ತಿಯಲ್ಲಿಯೇ ದೈವಿ ಶಕ್ತಿ ಅಡಗಿದೆ ಎಂದರು.

        ಶಬರಿಮಲೈಯಲ್ಲಿ ಮಹಿಳೆಯರಿಗೆ ನಿಷೇದದ ವಿಷಯ ಕುರಿತು ಮಾತನಾಡಿದ ಅವರು, ಇಂದು ಭಕ್ತಿ ಮತ್ತು ಕಾನೂನಿನ ನಡುವೆ ಸಂಘರ್ಷ ಕಂಡು ಬಂದಿದೆ, ಈ ರೀತಿಯ ಸಂಘರ್ಷಗಳು ಹೊಸ ವಿಧಾನಗಳು ಗಟ್ಟಿಗೊಳ್ಳಲು ಪ್ರೇರಣೆ ಮತ್ತು ನಾಂಧಿಯಾಗಬಲ್ಲವು ಎಂದರು.

        ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು, ಬಂಕಾಪೂರ ಅರಳೆಲೆಮಠದ ರೇವಣಶಿದ್ದೇಶ್ವರ ಶಿವಾಚಾರ್ಯರು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ಎಸ್ ಎನ್ ಕೃಷ್ಣಯ್ಯಸ್ವಾಮಿ, ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜದ ಪಿ ಎಮ್ ರಾಜಗುರುಸ್ವಾಮಿ ಮಾತನಾಡಿದರು.

       ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ನೀಡಿದ ತನುಮನದ ದಾನಿಗಳನ್ನು ಸಮೀತಿ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶಿವಾನಂದ ಬಾರ್ಕಿ, ಮಾರುತಿ ಹರಿಹರ, ಆರ್ ಎ ನವೀನಕುಮಾರ, ಅಯ್ಯಪ್ಪ ಸ್ವಾಮಿ ಸೇವಾ ಸಮೀತಿ ಅದ್ಯಕ್ಷ ರಾಮು ಪೂಜಾರ, ಉಪಾದ್ಯಕ್ಷ ಮಂಜುನಾಥ ಬಾಣದ, ಗೌರವಾದ್ಯಕ್ಷ ನಾಗರಾಜ ಬ್ರಹ್ಮಾವರ, ಕಾರ್ಯದರ್ಶಿ ರಾಜು ಅಂಗಡಿ, ಖಜಾಂಚಿ ಚಂದ್ರಶೇಖರ ಗುಂಡಣ್ಣವರ, ನಾಗೇಂದ್ರ ಅಗಡಿ, ರಾಘು ಪಾಲಂಕರ, ರವಿ ಭಜಂತ್ರಿ, ನಾರಾಯಣ ಭಟ್ಟರು, ಮಂಜುನಾಥ ಗಣಪ್ಪನವರ, ಬೀಮಣ್ಣ ಗುರುಸ್ವಾಮಿ ಸೇರಿದಂತೆ ಸಮೀತಿಯ ಸರ್ವ ಸದಸ್ಯರು ಹಾಜರಿದ್ದರು, , ಪ್ರೋ. ಎಸ್ ವಿ ಪೂಜಾರ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link