ಎಟಿಎಂ ರಿಪೇರಿ ಹೆಸರಿನಲ್ಲಿ ಕಳ್ಳತನ ಮಾಡಿದವರ ಬಂಧನ!!

0
4

ಬೆಂಗಳೂರು

     ರೆಸಿಡೆನ್ಸಿ ರಸ್ತೆಯ ಆರ್‍ಬಿಎಲ್ ಬ್ಯಾಂಕ್ ಹಾಗೂ ಶಾಂತಿನಗರದ ಲ್ಯಾಂಗ್‍ಫೆÇೀರ್ಡ್ ರಸ್ತೆಯ ಐಸಿಐಸಿ ಬ್ಯಾಂಕ್‍ನ ಎಟಿಎಂ ಕೇಂದ್ರಕ್ಕೆ ರಿಪೇರಿ ಮಾಡುವ ನೆಪದಲ್ಲಿ ಒಳ ಹೋಗಿ 99 ಲಕ್ಷ 13 ಸಾವಿರ ರೂ.ಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಆಗ್ನೇಯ ವಿಭಾಗದ ಪೆÇಲೀಸರು ಸೆಕ್ಯೂರ್‍ವ್ಯಾಲ್ಯೂ ಕಂಪನಿಯ ಕಸ್ಟೋಡಿಯನ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

     ಆಡುಗೋಡಿಯ ಚಂದ್ರಪ್ಪ ನಗರದ ಸೆಕ್ಯೂರ್‍ವ್ಯಾಲ್ಯೂ (ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಮತ್ತು ಯಂತ್ರ ಸರಿಪಡಿಸುವ)ಕಂಪನಿಯ ಕಸ್ಟೋಡಿಯನ್ ಕಿರಣ್‍ಕುಮಾರ್ (28) ಹಾಗೂ ಆತನ ಸ್ನೇಹಿತ ಕಾರು ಚಾಲಕನಾಗಿದ್ದ ಬೇಗೂರಿನ ವಿಶ್ವಪ್ರಿಯ ನಗರದ ರಾಕೇಶ್ (37) ಬಂಧಿತ ಆರೋಪಿಗಳಾಗಿದ್ದಾರೆ.

ಬಚ್ಚಿಟ್ಟಿದ್ದ ಹಣ ವಶ

       ಬಂಧಿತರಲ್ಲಿ ಕಿಶೋರ್ ರೂಪೇನ ಅಗ್ರಹಾರದ ಬೊಮ್ಮನಹಳ್ಳಿಯ ತನ್ನ ಕೊಠಡಿಯಲ್ಲಿ ಬಚ್ಚಿಟ್ಟಿದ್ದ 47 ಲಕ್ಷ 83 ಸಾವಿರ ಹಾಗೂ ಮತ್ತೊಬ್ಬ ಆರೋಪಿ ರಾಕೇಶ್ ಬೇಗೂರಿನ ಮನೆಯಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ಹಾಗೂ ಬೊಮ್ಮನಹಳ್ಳಿಯ ವಿರಾಟ್ ನಗರದ ಮನೆಯಲ್ಲಿಟ್ಟಿದ್ದ 17 ಲಕ್ಷದ 17 ಸಾವಿರ ಸೇರಿ 95 ಲಕ್ಷ ಹಣವನ್ನು ವಶಪಡಿಸಿಕೊಂಡು ಉಳಿದ ಹಣದ ಜಪ್ತಿಗಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

       ಕಳೆದ 6 ವರ್ಷಗಳಿಂದ ಸೆಕ್ಯೂರ್‍ವ್ಯಾಲ್ಯೂ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ ಕಿಶೋರ್‍ಗೆ ಸುಲಭವಾಗಿ ಹಣಗಳಿಸುವ ಆಸೆಯುಂಟಾಗಿದೆ. ತನಗೆ ಕಂಪನಿಯು ನೀಡಿದ್ದ ಎಟಿಎಂ ಯಂತ್ರಗಳ ಪಾಸ್‍ವರ್ಡ್ ಉಪಯೋಗಿಸಿ ಕಳವು ಮಾಡಲು ಸಂಚು ರೂಪಿಸಿದ್ದನು.

      ಬೇಗೂರಿನಲ್ಲಿದ್ದ ಸ್ನೇಹಿತ ರಾಕೇಶ್ ವ್ಯಾಪಾರದಲ್ಲಿ ಸುಮಾರು 30 ಲಕ್ಷದವರೆಗೆ ನಷ್ಟವುಂಟುಮಾಡಿಕೊಂಡು ಹಣಕಾಸಿನ ತೊಂದರೆಯಲ್ಲಿ ಸಿಲುಕಿದ್ದ. ಕಾರು ಚಾಲಕ ವೃತ್ತಿಯಿಂದ ಅದನ್ನು ತೀರಿಸಲಾಗದೆ ಒದ್ದಾಡುತ್ತಿದ್ದ. ಇದನ್ನು ತಿಳಿದ ಕಿಶೋರ್ ಆತನ ಜತೆ ಸೇರಿ ಹಣ ದೋಚಲು ಮುಂದಾದರು.

       ಅದರಂತೆ ಕಳೆದ ಮೇ 1 ರಂದು ಶಾಂತಿನಗರದ ಲ್ಯಾಂಗ್‍ಫೋರ್ಡ್ ರಸ್ತೆಯ ಐಸಿಐಸಿ ಬ್ಯಾಂಕ್‍ನ ಎಟಿಎಂ ಹಾಗೂ ರೆಸಿಡೆನ್ಸಿ ರಸ್ತೆಯ ಆರ್‍ಬಿಎಲ್ ಬ್ಯಾಂಕ್‍ನ ಎಟಿಎಂ ಕೇಂದ್ರಕ್ಕೆ ಸೆಕ್ಯೂರಿಟಿಗಾರ್ಡ್‍ಗಳಿಗೆ ರಿಪೇರಿ ಮಾಡುವುದಾಗಿ ಹೇಳಿ ಒಳ ನುಗ್ಗಿದ್ದರು.

ಸಾಲಕ್ಕಾಗಿ ಕೃತ್ಯ

      ಐಸಿಐಸಿ ಬ್ಯಾಂಕ್‍ನ ಎಟಿಎಂನಲ್ಲಿ 47 ಲಕ್ಷ 83 ಸಾವಿರ, ಆರ್‍ಬಿಎಲ್ ಬ್ಯಾಂಕ್‍ನ ಎಟಿಎಂ ಕೇಂದ್ರದಲ್ಲಿ 51 ಲಕ್ಷ 30 ಸಾವಿರ ನಗದು ದೋಚಿ ಪರಾರಿಯಾಗಿದ್ದರು.

        ಈ ಸಂಬಂಧ ತನಿಖೆ ಕೈಗೊಂಡ ಆಡುಗೋಡಿ ಪೊಲೀಸರು ಕಸ್ಟೋಡಿಯನ್ ಕಿಶೋರ್ ಕೃತ್ಯ ನಡೆದ 2 ದಿನಗಳವರೆಗೆ ಕೆಲಸಕ್ಕೆ ಹಾಜರಾಗದಿದ್ದ ಅನುಮಾನದ ಮೇಲೆ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

      ಆರೋಪಿಗಳನ್ನು ಆಡುಗೋಡಿ ಪೊಲೀಸ್ ಇನ್ಸ್‍ಪೆಕ್ಟರ್ ಚೆಲುವೇಗೌಡ ನೇತೃತ್ವದ ಸಿಬ್ಬಂದಿ ಬಂಧಿಸಿದ್ದಾರೆ. ಇದರ ಜತೆಗೆ ಸುದ್ದಗುಂಟೆಪಾಳ್ಯ ಪೊಲೀಸರು ಮೂವರು ಪದವಿವಿದ್ಯಾರ್ಥಿಗಳನ್ನು ಬಂಧಿಸಿ 23 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ಇವೆರೆಡೂ ಪೊಲೀಸ್ ತಂಡಗಳಿಗೆ 1 ಲಕ್ಷ ನಗದು ಬಹುಮಾನ ಘೋಷಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೆÇಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಇಶಾಪಂತ್ ಅವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here