ಶಿರಾ:
ಕರುನಾಡಿನ ನಾಡು ನುಡಿ ಸಂರಕ್ಷಣೆಯಲ್ಲಿ ಟಿಪ್ಪು ಸುಲ್ತಾನ್ ಪಾತ್ರಾವೂ ಹಿರಿದಾಗಿದ್ದು ನಾಡನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಆತನ ಸ್ವಾಭಿಮಾನ ನಿಜಕ್ಕೂ ಮೆಚ್ಚುವಂತಾದ್ದು ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ಹಜರತ್ ಮಲ್ಲಿಕ್ ರಿಹಾನ್ ದರ್ಗಾ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಶಷೀದ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಶನಿವಾರ ಕೈಗೊಳ್ಳಲಾಗಿದ್ದ 269ನೇ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಡಿಗೆ ಕಂಠಕ ಪ್ರಾಯವಾಗಿದ್ದ ಬ್ರಿಟೀಷರನ್ನು ಹೊಡೆದೋಡಿಸಿ ದೇಶವನ್ನು ಸ್ವತಂತ್ರಗೊಳಿಸಬೇಕೆಂಬ ನಿಟ್ಟಿನಲ್ಲಿ ದೇಶ ರಕ್ಷಣೆಯಲ್ಲಿಯೇ ಟಿಪ್ಪು ಹುತಾತ್ಮರಾದರು. ಟಿಪ್ಪು ಸುಲ್ತಾನ್ ಕುರಿತಂದ ಪ್ರಾಥಮಿಕ ಶಾಲಾ ಹಂತದಲ್ಲಿಯೇ ನಾವುಗಳ ಆತನ ಸಾಧನೆಗಳನ್ನು ಅರಿತಿದ್ದೇವೆ. ದೇಶದ ಜನರ ಅನುಕೂಲತೆಗಾಗಿ ಅನೇಕ ಬೃಹತ್ ಯೋಜನೆಗಳನ್ನೂ ರೂಪಿಸಿದ್ದರು ಎಂದರು.
ವಿಶೇಷ ಉಪನ್ಯಾಸ ನೀಡಿದ ಡಾ||ಚಿಕ್ಕಣ್ಣ ಯಣ್ಣೇಕಟ್ಟೆ ಮಾತನಾಡಿ ನಾಡಿನ ಆಳ್ವಿಕೆಯ ಸಂದರ್ಬದಲ್ಲಿ ಟಿಪ್ಪು ಸುಲ್ತಾನ್ ಹಿಂದೂ-ಮುಸ್ಲೀಮರ ನಡುವೆ ಅತ್ಯಂತ ಸುಮಧುರ ಭಾಂಧವ್ಯ ಮೂಡಿಸಿದ್ದರು. ಅವರೊಬ್ಬ ಕನ್ನಡ ಪ್ರೇಮಿಯೂ ಆಗಿದ್ದರು ಎಂಬುದಕ್ಕೆ ಅವರ ಆಡಳಿತ ಭಾಷೆ ಕನ್ನಡವೇ ಆಗಿತ್ತು ಅಂಬುದು ಗಮನಾರ್ಹವಾಗಿದೆ ಎಂದರು.
ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ಜಿ.ಪಂ. ಅಧ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್, ಜೆ.ಎನ್.ರಾಜಸಿಂಹ ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ನಗರಸಭೆಯ ಸದಸ್ಯರಾದ
ಜಿಷಾನ್‍ಪಾಷಾ, ಅಬ್ದುಲ್‍ಖಾದಿರ್, ಏಜಾಜ್ ಬೇಗ್, ಮಾಜಿ ಅಧ್ಯಕ್ಷ ಆರ್.ರಾಮು, ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ತಾ|| ಅಧ್ಯಕ್ಷ ಮುಷೀರ್ ಖುರೇಷಿ, ಉಪಾಧ್ಯಕ್ಷ ಇನಾಯತ್, ಜಾಫರ್, ಕರವೇ ಅಧ್ಯಕ್ಷ ಕಿಶೋರ್, ದಾದು, ಬಿಲಾಲ್, ಹನೀಫ್‍ಖಾನ್, ಶಿರಾ ರವಿ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








