ತಿಪಟೂರು :
2019ನೇ ಸಾಲಿನ ಮೇ 29ರಂದು ನಗರಸಭೆಯ 31 ವಾರ್ಡ್‍ಗಳ ಚುನಾವಣೆಯ ಫಲಿತಾಂಶ ಮೇ31ರಂದು ಬಂದ ಫಲಿತಾಂಶದಲ್ಲಿಬಿಜೆಪಿ-11,ಕಾಂಗ್ರೆಸ್-9 ಜೆ.ಡಿ.ಎಸ್-5 ಮತ್ತುಪಕ್ಷೇತರರು6 ವಿಜಯಶಾಲಿಯಾಗಿದ್ದು ಫಲಿತಾಂಶ ಬಂದ ಸಂದರ್ಭದಲ್ಲಿ ಪಕ್ಷೇತರರುಯಾರಿಗೆ ಬೆಂಬಲ ಸೂಚಿಸುತ್ತಾರೋಅವರಿಗೆಅಧಿಕಾರದಗದ್ದುಗೆಯನ್ನು ಹಿಡಿಯುವ ವಿಶ್ವಾಸ ಹೆಚ್ಚಾಗಿತ್ತು.
ಮೀಸಲಾತಿಯ ಗೊಂದಲದಲ್ಲಿ 18 ತಿಂಗಳ ನಂತರ ಹೆಚ್ಚು ಕಡಿಮೆ ಗಜ ಪ್ರಸವದಂತೆ ಮೀಸಲಾತಿಯು ಹೊರಬಂದಿದ್ದು ಈ ಬಾರಿಯಾದರು ನಗರಸಭೆಯ ಸದಸ್ಯರುಗಳಿಗೆ ಅಧಿಕಾರವನ್ನು ದೊರಕಿಸಿಕೊಡುತ್ತಾ ಎಂದು ಸದಸ್ಯರಾಧಿಯಾಗಿ ಸಾರ್ವಜನಿಕರು ಕಾಯುತ್ತಿದ್ದಾರೆ. ಇಷ್ಟುದಿನ ಎಲ್ಲಾ ಸದಸ್ಯರು ಅಧಿಕಾರವಿಲ್ಲದಿದ್ದರು ಸಹ ತಮ್ಮ ಮತದಾರರು ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೋಸ್ಕರ ಹೇಳಿದ ಕೆಲಸವನ್ನು ಮಾಡುತ್ತಿದ್ದರು ಇನ್ನು ಕೆಲವು ಸಹೃದಯ ಸದಸ್ಯರುಗಳು ಕೊರೊನಾ ಸಮಯದಲ್ಲಿ ಆಹಾರದ ಕಿಟ್‍ಗಳು, ಮಾಸ್ಕ್ ಗಳನ್ನು ವಿತರಿಸಿ ನೆಚ್ಚಿನ ಜನ ನಾಯಕರಾಗಿದ್ದಾರೆ.
ಪಕ್ಷಾಂತರದಿಂದ ಬಿ.ಜೆ.ಪಿಗೆ ಅನುಕೂಲ :ಚುನಾವಣೆ ನಡೆದ ಸಂದರ್ಭದಲ್ಲಿಜೆ.ಡಿ.ಎಸ್ ನಲ್ಲಿದ್ದ ಲೋಕೇಶ್ವರ್ ಈಗ ಬಿ.ಜೆ.ಪಿ ಮುಖಂಡರಾಗಿದ್ದಾರೆ. ಮೊನ್ನೆ ನಡೆದ ಎ.ಪಿ.ಎಂ.ಸಿ ಅಧ್ಯಕ್ಷರಚುನಾವಣೆಯಲ್ಲಿಯು ಬಿ.ಜೆ.ಪಿ ಮತ್ತುಜೆ.ಡಿ.ಎಸ್ ಮೈತ್ರಿಇಂದ ಬಿ.ಜೆ.ಪಿಯ ದಿವಾಕರ್‍ಅಧ್ಯಕ್ಷರಾದರೆಜೆ.ಡಿ.ಎಸ್‍ತಾಲ್ಲೂಕುಅಧ್ಯಕ್ಷ ನಾಗರಾಜುಉಪಾಧ್ಯಕ್ಷರಾಗಿದ್ದಾರೆ.ಇಂತಹ ಪರಿಸ್ಥಿಯಲ್ಲಿ ಲೋಕೇಶ್ವರ್‍ರ ಪ್ರಭಾವದಿಂದ ಮತ್ತುಜೆ.ಡಿ.ಎಸ್ ನಿಂದಗೆದ್ದ 5ಜನ ಸದಸ್ಯರಲ್ಲಿ ವಾರ್ಡ್‍ನಂಬರ್ 31ರ ಸರೋಜಮ್ಮ ಅಧಿಕಾರಸಿಗುವ ಮೊದಲೇ ಅಕಾಲಿಕ ಮರಣಕ್ಕೆತುತ್ತಾಗಿದ್ದಾರೆ ಇನ್ನುಳಿದ 4ಜನರು ಸಹ ಲೋಕೇಶ್ವರರ್ ಮಾತುಕೇಳಿದರೆ ನಗರಸಭೆಯ ಅಧಿಕಾರವನ್ನು ಬಿ.ಜೆ.ಪಿ ಹಿಡಿಯಬಹುದು.
ಇನ್ನುಅಧಿಕಾರರದಲ್ಲಿ ಒಳ ಒಪ್ಪಂದವಾದರೆಇಲ್ಲ ಎ.ಪಿ.ಎಂ.ಸಿಯಲ್ಲಿ ಅಧ್ಯಕ್ಷಸ್ಥಾನವನ್ನು ಬಿ.ಜೆ.ಪಿಗೆ ಬಿಟ್ಟುಕೊಟ್ಟಿದ್ದೇವೆ ಈಗ ನಗರಸಭೆಯಅಧ್ಯಕ್ಷ ಪದವಿಯನ್ನುತಮ್ಮ ಅನುಯಾಯಿಗಳಿಗೆ ನೀಡಿಎಂದು ಪಟ್ಟುಹಿಡಿಯಲು ಬಹುದುಇಲ್ಲ ಬಿ.ಜೆ.ಪಿಯ ಹೈಕಾಮಾಂಡ್ ಹೇಳುವಂತೆ ಕೇಳಿದರೆ ಮೂಲ ಬಿ.ಜೆ.ಪಿಗೆ ಅಧಕ್ಷಪಟ್ಟಕಟ್ಟಿಟ್ಟ ಬುತ್ತಿಯಾಗುತ್ತದೆ.
ಕಾಂಗ್ರೇಸ್‍ಗೆ ಸೂತಕ ಕಾಡುತ್ತಿದೆಯೇ!!! :
ನಗರಸಭೆಯ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಮೈತ್ರಿಯಾಗಿ ಇಲ್ಲಿಯವರೆಗೆ ಅಧಿಕಾರವನ್ನು ಮಾಡಬಹುದಾಗಿತ್ತು ಆದರೆ ಈಗ ಮೀಸಲಾತಿ ಬದಲಾದಂತೆ ನಾಯಕರುಗಳು ಪಕ್ಷಾಂತರವಾಗಿದ್ದು ಕಾಂಗ್ರೆಸ್‍ಗೆ ತೀವ್ರವಾದ ಹಿನ್ನಡೆಯಾಗಿದೆ. ಚುನಾವಣೆ ಫಲಿತಾಂಶ ಬಂದಾಗ ಮೀಸಲಾತಿ ತೀರ್ಮಾನವಾಗಿದ್ದರೆ ಜೆ.ಡಿ.ಎಸ್ ಮತ್ತು ಕಾಂಗ್ರೇಸ್ ಮೈತ್ರಿಯ ಬಗ್ಗೆ ಲೋಕೇಶ್ವರ್ ಮತ್ತು ಕೆ.ಷಡಾಕ್ಷರಿಯವರ ಬೆಂಬಲದಿಂದ ಅಧಿಕಾರದ ಗದ್ದುಗೆಯನ್ನು ಏರಬಹುದಾಗಿತ್ತು.ಆದರೆ ಈಗ ಮೊನ್ನೆ ಎ.ಪಿ.ಎಂ.ಸಿಯಲ್ಲಿ ಅಧಿಕಾರವಹಿಸಿಕೊಂಡಿದ್ದ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಮಡೆನೂರು ಕಾಂತರಾಜು ಮರಣದಿಂದ ತೆರವಾದ ಸ್ಥಾನಕ್ಕೆ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಮೈತ್ರಿಯಿಂದ ಎ.ಪಿ.ಎಂ.ಸಿಯ ಅಧಿಕಾರವನ್ನು ಕಾಂಗ್ರೇಸ್ ಕಳೆದುಕೊಂಡಿತು ಈಗ ನಗರಸಭೆಯ ಗದ್ದುಗೆಯು ಕೈತಪ್ಪುವ ಹಾದಿಯಲ್ಲಿರುವಂತೆ ಕಾಣುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
