ಸಹಕಾರಿ ಸಂಘ ಉಳಿಸಲು ನೌಕರರ ಇಚ್ಛಾಶಕ್ತಿ ಅತ್ಯಂತ ಮುಖ್ಯ

ಹಾನಗಲ್ಲ :

        ಸಹಕಾರಿ ಸಂಘ ಉಳಿಸಲು ನೌಕರರ ಇಚ್ಛಾಶಕ್ತಿ ಅತ್ಯಂತ ಮುಖ್ಯವಾಗಿದ್ದು, ಸಹಕಾರಿಗಳು ಸಂಕಷ್ಟಗಳಿಗೆ ಸ್ಪಂಧಿಸುವುದಕ್ಕೆ ಆದ್ಯತೆ ನೀಡಿಬೇಕು ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ತಿಳಿಸಿದರು.

      ಮಂಗಳವಾರ ಹಾನಗಲ್ಲಿನ ಗ್ರಾಮದೇವಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಹಾವೇರಿ ಜಿಲ್ಲಾ ಸಹಕಾರಿ ಯುನಿಯನ್, ಸಹಕಾರ ಇಲಾಖೆ, ಕೆಸಿಸಿ ಬ್ಯಾಂಕ್, ಕೆಎಂಎಫ್ ಹಾಗೂ ಹಾನಗಲ್ಲ ತಾಲೂಕಿನ ಪಿಕೆಪಿಎಸ್ ಸಂಘ, ಕೋಆಪ್ ಕ್ರೆಡಿಟ್ ಸೊಸಾಯಿಟಿ, ಸೌಹಾರ್ದ ಸಹಕಾರಿ ಸಂಘಗಳು ಸಂಯಕ್ತವಾಗಿ ಆಯೋಜಿಸಿದ 65 ನೇ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಹಕಾರಿ ಸಂಘ ಉಳಿಸಲು ನೌಕರರ ಇಚ್ಛಾಶಕ್ತಿಯ ಜೊತೆಗೆ ಕಾಲಕ್ಕನುಗುಣವಾಗಿ ತಾಂತ್ರಿಕ ಮತ್ತು ಕೌಶಾಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುಬೇಕು. ಸಕಾರಾತ್ಮಕ ಚಿಂತನೆಯೂ ಬೇಕು. ವಾರ್ಷಿಕ ಕ್ರಿಯಾ ಯೋಜನೆಯೂ ಬೇಕು. ಎಲ್ಲರೂ ಒಟ್ಟಾಗಿ ಈ ಸಂಘಟನೆಗಳನ್ನು ಬೆಳೆಸಬೇಕಾಗಿದೆ. ಮಾಹಾತ್ಮಾ ಗಾಂಧೀಯವರ ಸಹಕಾರ ಯೋಜನೆ ಸಾಕಾರಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.

         ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಎಸ್.ಬಳ್ಳಾರಿ, ಒಂದು ಕಾಲದಲ್ಲಿ ಪಡಿತರ ಧಾನ್ಯ ಹಂಚಲು ಸೀಮಿತವಾಗಿದ್ದ ಸಹಕಾರಿ ಸಂಘಗಳು ಈಗ ಬ್ಯಾಂಕುಗಳಾಗಿ ಅಭಿವೃದ್ಧಿ ಹೊಂದಿರುವುದು ಅತ್ಯುತ್ತಮ ಬೆಳವಣಿಗೆ. ಗ್ರಾಮೀಣ ಅಭಿವೃಧ್ಧಿಯಲ್ಲಿ ಇವುಗಳ ಪಾತ್ರ ಅತ್ಯಂತ ಪ್ರಮುಖ. ರಾಜ್ಯದ ಹಾಲು ಒಕ್ಕೂಟ ಅತ್ಯುತ್ತಮ ಹೆಸರು ಪಡೆದಿದೆ. ಆದರೆ ಸಹಕಾರಿ ಸಂಘಗಳ ನೌಕರರಿಗೆ ಉತ್ತಮ ತರಬೇತಿ ನೀಡುವ ಅಗತ್ಯವೂ ಇದೆ ಎಂದ ಅವರು, ರಾಜ್ಯ ಸರಕಾರಗಳು ಸಂಘಗಳ ಅಭಿವೃದ್ಧಿಗೆ ಸಕಾರಾತ್ಮಕ ಬೆಂಬಲ ನೀಡುತ್ತಿರುಬೇಕು ಎಂದರು.

         ಜಿಲ್ಲಾ ಪಂಚಾಯತ್ ಸದಸ್ಯ ಮಾಲತೇಶ ಸೊಪ್ಪಿನ ಮಾತನಾಡಿ, ತಾಲೂಕಿನಲ್ಲಿ 36 ಸಂಘಗಳಿಗೆ ಸಹಕಾರಿ ಸಂಘದಿಂದ ಅಭವೃದ್ಧಿ ಸಾಲಗಳನ್ನು ನೀಡಿಲಾಗುತ್ತಿದೆ. ಮಹಿಳಾ ಸಂಘಗಳ ಮೂಲಕ ಹೆಚ್ಚು ಸಾಲ ನೀಡಿ ಸಂಘಗಳನ್ನು ಬೆಳೆಸುವುದರ ಜೊತೆಗೆ ಉತ್ತಮ ಮರುಪಾವತಿಯೂ ಸಾಧ್ಯವಾಗಿದೆ. ಹೀಗಾಗಿ ಸಹಕಾರಿ ಸಂಘಗಳು ಉಳಿದರೆ ಗ್ರಾಮೀಣ ಅಭಿವೃದ್ಧಿಗೆ ಸಹಕಾರಿ ಎಂದರು.

          ಧಾರವಾಡ ಕೆಸಿಸಿ ಬ್ಯಾಂಕ ನಿರ್ದೇಶಕ ಮನೋಜ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಆದಿಶಕ್ತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ.ಕಲಾಲ ಸಹಕಾರಿ ಸಂಘದ ಧ್ವಜಾರೋಹಣ ನೆರವೇರಿಸಿದರು. ರಾಜೇಶ ಯಾವಗಲ್ಲ ಉಪನ್ಯಾಸ ನೀಡಿದರು. ವಿವಿಧ ಸಂಘಗಳ ಪಧಾಧಿಕಾರ ಗಣ್ಯರಾದ ಸಿದ್ದನಗೌಡ ಪಾಟೀಲ, ವಿಜೇಂದ್ರ ಕನವಳ್ಳಿ, ಹನುಮಂತಪ್ಪ ಗೊಂದಿ, ಬಸವರಾಜ ಸೂರಗೊಂಡರ, ಪಿ.ವಾಯ್.ಗುಡಗುಡಿ, ಅಕ್ಕಮ್ಮ ರೊಟ್ಟಿ, ಜಯಶ್ರೀ ಜಳಕಿ, ರಾಘವೇಂದ್ರ ಗುಡಿಕೇರಿ, ಎಸ್.ಜಿ.ಗೌಡರ, ಕೆ.ಬಿ.ಹೊನ್ನತ್ತೇರ, ಚನ್ನಮ್ಮ ತುರಮುರಿ, ಈರಣ್ಣ ಮಳ್ಳೂರ, ಬಸಣ್ಣ ಸಂಸಿ, ಸಿದ್ದಣ್ಣ, ಮಾಲತೇಶ್ ಮಲಗುಂದ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link