ಹಾನಗಲ್ಲ :
ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಹಾನಗಲ್ಲ ತಾಲೂಕ ಮಟ್ಟದ ತಂಬಾಕು ನಿಯಂತ್ರಣ ತನಿಖಾಧಿಕಾರಿಗಳಿಂದ ಶನಿವಾರ ಹಾನಗಲ್ಲ ಪಟ್ಟಣದಲ್ಲಿ ತಂಬಾಕು ಮಾರುತ್ತಿರುವ ಬೀಡಿ ಅಂಗಡಿಗಳು ಸೇರಿದಂತೆ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ತಂಬಾಕು ಚೀಟಿಗಳನ್ನು ವಶಪಡಿಸಿಕೊಂಡಿದ್ದಲ್ಲದೆ 11 ಅಂಗಡಿಗಳ ಮಾಲಿಕರಿಗೆ ದಂಢವಿಧಿಸಲಾಯಿತು.
ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಾರ್ಯಾಲಯದ ಡಾ.ಸಂತೋಷ ದಡ್ಡಿ, ದಾದಾಫೀರ ಹುಲಿಕಟ್ಟಿ, ತಾಲೂಕ ಅಧಿಕಾರಿಗಳಾದ ಮಹೇಶ ತ್ರಿಕಾಣಿ, ತಾಲೂಕ ಆರೋಗ್ಯಧಿಕಾರಿ ರವೀಂದ್ರಗೌಡ ಪಾಟೀಲ, ಕಸ್ತೂರಮ್ಮ ಬೊಮ್ಮನಹಳ್ಳಿ ಸಂತೋಷ ಲೊಂಡೆ, ಸಿ.ಎಚ್. ಮದ್ರಾಸಿ, ಡಿ.ಮೊಹನಕುಮಾರ, ಪೋಲಿಸ್ ಇಲಾಖೆಯ ಅಧಿಕಾರಿ ಎಸ್‍ಐ ಕನವಳ್ಳಿ. ಪಾಗದ. ಪಾಲ್ಗೋಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
