ಮಕ್ಕಳ ಸಾಹಿತ್ಯವನ್ನೇ ಕೈಬಿಟ್ಟ ಇಂದಿನ ಹಿರಿಯ ಸಾಹಿತಿಗಳು : ಡಾ.ಸಿದ್ದಲಿಂಗಯ್ಯ

ಬೆಂಗಳೂರು

   ಆಧ್ಯಾತ್ಮ, ಯೋಗ, ಜ್ಞಾನ ವಿಷಯಾಧಾರಿತ ಸಾಹಿತ್ಯವೂ ಮಕ್ಕಳಿಗೆ ಅರ್ಥವಾಗುವುದು ಕಷ್ಟವಾಗಿರುವುದರಿಂದ ಅವರಿಗೆ ಆಸಕ್ತಿಯುಳ್ಳ ಸಾಹಿತ್ಯ ಕಲಿಸುವ ಅಗತ್ಯ ಇದೆ ಎಂದು ಖ್ಯಾತ ಸಾಹಿತಿ ಕವಿ ಡಾ.ಸಿದ್ದಲಿಂಗಯ್ಯ ಅವರು ಪ್ರತಿಪಾದಿಸಿದ್ದಾರೆ.ನಗರದ ಅರಮನೆ ರಸ್ತೆಯ ಜೈನ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ, ಮಕ್ಕಳ ಜನಪ್ರಿಯ ಪುಸ್ತಕಗಳ ಮರು ಓದು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ ಮಕ್ಕಳ ಆಸಕ್ತಿಯ ಸಾಹಿತ್ಯ ಕಲಿಸಿದರೆ ಯಾವುದೇ ರೀತಿಯ ಗೊಂದಲ ಉಂಟಾಗುವುದಿಲ್ಲ ಎಂದರು.

   ಅರ್ಥವಾಗದ ಯೋಗ, ಆಧ್ಯಾತ್ಮ ವಿಷಯಗಳ ಬದಲು ಮಕ್ಕಳಿಗೆ ಕೈಗೆಟುಕುವ ಸಾಹಿತ್ಯ ರಚನೆಗೆ ಮುಂದಾಗಬೇಕು ಇಂದಿನ ಕೆಲ ಹಿರಿಯ ಸಾಹಿತಿಗಳು ಮಕ್ಕಳ ಸಾಹಿತ್ಯ ರಚನೆಯನ್ನು ಕೈಬಿಟ್ಟಿದ್ದಾರೆ.ಆದರೆ, ಕನ್ನಡ ಸಾಹಿತ್ಯ ಪ್ರಾರಂಭದ ದಿನದಿಂದಲೂ, ಮಕ್ಕಳ ಸಾಹಿತ್ಯಕ್ಕೆ ನಾವು ಆದ್ಯತೆ ನೀಡಿದ್ದೇವೆ ಮಕ್ಕಳಿಗೆ ಸಾಕು ಪ್ರಾಣಿಗಳ ಮೇಲೆ ತುಂಬಾ ಪ್ರೀತಿ ಇದೆ.ಇದೇ ವಿಷಯ ಸಾಹಿತ್ಯ ಇನ್ನೂ ಜೀವಂತವಾಗಿದೆ ಎಂದು ತಿಳಿಸಿದರು.

   ಶಿಶು ಸಾಹಿತ್ಯ ಎಲ್ಲ ಸಾಹಿತ್ಯಕ್ಕಿಂತ ಭಿನ್ನ ಹಾಗೂ ಕಠಿಣ. ಎಚ್.ಎಸ್. ವೆಂಕಟೇಶ್‍ಮೂರ್ತಿ ಸೇರಿದಂತೆ ಮೊದಲಾದವರ ಕೊಡುಗೆಗಳ ಹೊರತಾಗಿ ಈ ದಿನಗಳಲ್ಲಿ ಮಕ್ಕಳ ಸಾಹಿತ್ಯದ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ಭಾಷೆಯ ಉಳಿವಿನ ಪ್ರಶ್ನೆ ಬಂದಾಗ ಮಕ್ಕಳ ಸಾಹಿತ್ಯದೆಡೆಗೆ ಒಲವು ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಸಿದ್ದಲಿಂಗಯ್ಯ ನುಡಿದರು.

   ಕವಿತೆ, ಕತೆ, ನಾಟಕ, ರೂಪಕ, ಲೇಖನ, ಕಾದಂಬರಿ ಎಲ್ಲವೂ ಮಕ್ಕಳಿಗೆ ಬೇಕು. ಬಾಲ್ಯದಲ್ಲಿ ಸುಲಲಿತವಾಗಿ ಮಕ್ಕಳನ್ನು ಮುಟ್ಟುವ ಪದ್ಯಗಳು ಪರಿಣಾಮಕಾರಿ. ಈ ಮೂಲಕವೇ ಮಕ್ಕಳನ್ನು ಸಾಹಿತ್ಯ ಪ್ರಪಂಚಕ್ಕೆ ಸೆಳೆಯಬೇಕು. ನಂತರದ ಹಂತದಲ್ಲಿ ಮಕ್ಕಳ ಮನಸ್ಸನ್ನು ತಣಿಸಿ, ಆಸಕ್ತಿ ಕೆರಳಿಸಿ, ಕಲ್ಪನೆಯನ್ನು ವಿಸ್ತರಿಸುವ ಪುಟ್ಟಪಟ್ಟ ಕತೆಗಳು ಬೇಕು. ದೃಶ್ಯವಾಗಿ ಕಟ್ಟಿಕೊಡುವ ನಾಟಕ, ರೂಪಕಗಳು ಮಕ್ಕಳಲ್ಲಿ ವಿಚಾರವನ್ನು ವಿಸ್ತರಿಸಬಲ್ಲವು ಎಂದು ಹೇಳಿದರು.

   ಈ ಸಂದರ್ಭದಲ್ಲಿ ಶಬ್ದನಾ ಭಾಷಾಂತರ ಕೇಂದ್ರದ ಗೌರವ ನಿರ್ದೇಶಕ ಎಸ್.ಆರ್.ವಿಜಯಶಂಕರ್, ಪ್ರಥಮ ಬುಕ್ಸ್ ಹಿರಿಯ ಸಂಪಾದಕ ಸಂಧ್ಯಾ ಟಾಕ್ಸಾಳೆ, ಅಧ್ಯಕ್ಷ ಸುಝೇನ್ ಸಿಂಗ್, ಮೈಥಿಲಿ ಪಿ.ರಾವ್ ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap