ತಿಪಟೂರು:
ಪ್ರವಾಸೋಧ್ಯಮದಲ್ಲಿ ಸಾಕಷ್ಟು ಕನಸಿದೆ ಆದರೆ ಸಾಕಷ್ಟು ಕಾಸಿಲ್ಲ ಪ್ರವಾಸೋದ್ಯಮ, ಯುವಜನ ಸಬಲೀಕರಣ ಮತ್ತುಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದರು
ನಗರದಅಮಾನಿಕೆರೆ ಸೌಂದರ್ಯಅಭಿವೃದ್ಧಿಕಾಮಗಾರಿಗೆ ಹಾಗೂ ನರಸಿಂಹರಾಜು ಭವನದಕಾಮಗಾರಿಗೆತಲಾ 2 ಕೋಟಿಅನುದಾನ ನೀಡಿದ್ದುಇದಕ್ಕೆ ಚಾಲನೆ ನೀಡಿ ಮಾತನಾಡಿದಅವರು ನಾನೊಬ್ಬ ಸರಳ ಸಜ್ಜನಿಕೆಯ ಶಾಸಕ ಎಂದುಎಲ್ಲಿಯೂಕೂಡ ಹೇಳಿಕೊಂಡಿಲ್ಲ, ನಾನೊಬ್ಬಏರುಧ್ವನಿಯಲ್ಲಿ ಮಾತನಾಡಿತಮ್ಮ ಕೆಲಸ ಕಾರ್ಯಗಳನ್ನು ಸಾಧಿಸುವಂತಹ ವ್ಯಕ್ತಿ, ರಾಜ್ಯ ಪ್ರವಾಸೋದ್ಯಮಇಲಾಖೆಯು ಪಶು ಸಂಗೋಪನಾ ಇಲಾಖೆ ಇದರ ಸಹಯೋಗದಲ್ಲಿಜಂಟಿಯಾಗಿಅಗ್ರಿಟೂರಿಸಂ ನ್ನು ಪ್ರಾರಂಭ ಮಾಡುತ್ತಿದ್ದೇವೆಎಂದುಇದೇ ವೇಳೆ ಅವರು ತಿಳಿಸಿದ ಅವರು ಈಗಿನ ರಾಜಕಾರಣಿಗಳು ಸೋಷಿಯಲ್ ಸರ್ವೀಸ್‍ಎಂದು ಬಂದು ಸೇವೀಂಗ್‍ಮಾಡಿಕೊಳ್ಳುತ್ತಿದ್ದಾರೆ. ಆದರೆಇದಕ್ಕಿಇಲ್ಲಿನ ಶಾಸಕರು ಹೊರತಾಗಿದ್ದಲ್ಲೆ ನಮ್ಮನ್ನು ಹೊಗಳಿ ಅರಳಿಸಿ ತಮ್ಮ ಕೆಲಸವನ್ನು ಮಾಡಿಸಿಕೊಲ್ಳುವ ಚತುರರಾಗಿದ್ದಾರೆಂದರು.
ಕೊರೊನಾ ಬಂದಆರು ತಿಂಗಳಿನಿಂದ ಪ್ರವಾಸೋದ್ಯಮಇಲಾಖೆಯೂತೀರಾ ಸಂಕಷ್ಟದಲ್ಲಿದ್ದುಅದುಇನ್ನೂಆರು ತಿಂಗಳಲ್ಲಿ ಸರಿದಾರಿಗೆ ಬಂದಲ್ಲಿತಾಲ್ಲೂಕಿಗೆಇನ್ನಷ್ಟು ಹಣವನ್ನು ಮಂಜೂರು ಮಾಡಲಾಗುವುದುಎಂದುಇದೇವೇಳೆ ಅವರು ಭರವಸೆ ನೀಡಿದಅವರುತಾಲ್ಲೂಕಿನ ಶ್ರೀ ಹತ್ಯಾಳು ನರಸಿಂಹಸ್ವಾಮಿ ಬೆಟ್ಟವನ್ನು ಪ್ರವಾಸೋದ್ಯಮಇಲಾಖೆಯಿಂದ ಈಗಾಗಲೇ ಅಭಿವೃದ್ಧಿಪಡಿಸುತ್ತಿದ್ದುಅದರ ಮುಂದಿನ ಭಾಗವಾಗಿತಿಪಟೂರಿನ ಹೃದಯ ಭಾಗದಲ್ಲಿಖ್ಯಾತ ಹಾಸ್ಯ ನಟ ದಿವಂಗತ ನರಸಿಂಹರಾಜು ಅವರ ಸವಿನೆನಪಿಗಾಗಿ ಕಲಾಭವನವನ್ನು ಪ್ರಾರಂಭಿಸಲಾಗುತ್ತಿದ್ದು ಅದಕ್ಕೆ ಈಗಾಗಲೇ ಸುಮಾರು ನಾಲ್ಕು ಕೋಟಿಅನುದಾನವನ್ನು ನೀಡಲಾಗಿದೆಅವಶ್ಯವಿದ್ದಲ್ಲಿ ಮುಂದೆಯೂಕೂಡಅದಕ್ಕೆಅನುದಾನ ನೀಡುತ್ತೇನೆಎಂದುಇದೇ ವೇಳೆ ಅವರು ತಿಳಿಸಿ, ಉದ್ಯಾನವನದದ ಮಾದರಿಯನ್ನು ನೋಡಿದಅವರುಇದರಲ್ಲಿ ಪ್ರಾದೇಶಿಕತೆಗೆ ಮಹತ್ವವಿಲ್ಲ ಅದನ್ನು ಬದಲಾಯಿಸಿ ಎಂದು ಸೂಚಿಸಿ ಕನ್ನಡ ನಾಡು ನುಡಿಗೆ ಮತ್ತು ಪ್ರಾದೇಶಿಕ ಭಾಗಗಳಲ್ಲಿ ತನ್ನದೇಆದ ವೈಶಿಷ್ಠ್ಯವಿದೆ ಅದನ್ನು ನಿರೂಪಿಸುವಂತ ಮಾದರಿಯಲ್ಲಿಉದ್ಯಾನವನ್ನು ನಿರ್ಮಿಸಿ ಎಂದರು.
ಈ ತಿಪಟೂರು ನಗರದಅಮಾನಿಕೆರೆಯನ್ನು ಸುಂದರೀಕರಣ ಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡುವಕಾಮಗಾರಿಯನ್ನು 200 ಲಕ್ಷರೂಗಳಲ್ಲಿ ಹಮ್ಮಿಕೊಂಡಿದ್ದುಇದರಲ್ಲಿ ಶೌಚಾಲಯ, ಪರಗೋಲು ನಿರ್ಮಾಣ ಮತ್ತುಅಮಾನಿಕೆರೆ ಪ್ರಮುಖದ್ವಾರ, ಮಕ್ಕಳ ಆಟದ ಮೈದಾನ ಹಾಗೂ ಹೊರಾಂಗಣಜಿಮ್‍ಅಭಿವೃದ್ಧಿ ಪಡಿಸಿಲಾಗುವುದು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ನಮ್ಮತಾಲ್ಲೂನ್ನು ನಂಜುಂಡಪ್ಪವರದಿಯಲ್ಲಿ ಮುಂದುವರೆದತಾಲ್ಲೂಕೆಂದು ಪರಿಗಣಿಸಿದ್ದಾರೆ ಇದಕ್ಕೆಕಾರಣವೆಂದರೆ ನಮ್ಮತಾಲ್ಲೂಕು ವಿದ್ಯಾಭ್ಯಾಸದಲ್ಲಿ ಮುಂದಿದೆ ಪುಣ್ಯಾತ್ಮರಾದಅಡವಪ್ಪನವರೊಂದಿಗೆಇನ್ನು ಕೆಲವರುಕಲ್ಪತರು ಎಂಬ ವಿದ್ಯಾಸಂಸ್ಥೆಯನ್ನುಕಟ್ಟಿದ್ದರಿಂದ ಈ ಭಾಗ್ಯದೊರೆತಿದ್ದುಇಲ್ಲಿ ಶಿಕ್ಷಣವನ್ನು ಪಡೆಯಲು ನಿಮ್ಮಜಿಲ್ಲೆಯಾದ ಚಿಕ್ಕಮಗಳೂರಿಂದಲು ವಿದ್ಯಾಭ್ಯಾಸಮಾಡಲು ಬರುತ್ತಿದರೆಂದು ಸಚಿವರಿಗೆ ತಿಳಿಸಿದ ಅವರು ಕೆಳದ ಜೆ.ಸಿ.ಎಸ್ ಮತ್ತುಕಾಂಗ್ರೇಸ್ ಸಮ್ಮಿಶ್ರ್ರಸರ್ಕಾರಇದೆಯೋಇಲ್ಲವೋ ಎಂಬ ಗೊಂದಲದಲ್ಲಿದ್ದ ಸಂದರ್ಭದಲ್ಲಿ ಬಂದ ಬಿ.ಜೆ.ಪಿ ಸರ್ಕಾರಎಲ್ಲಾಅಭಿವೃದ್ಧಿಯನ್ನು ಮಾಡುತ್ತಿದೆ ಈಗ ಕೆರೆಅಭಿವೃದ್ಧಿಗಾಗಿ 2 ಕೋಟಿ ರೂಗಳನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನಗಳನ್ನು ತಂದುತಾಲ್ಲೂಕನ್ನುಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿತಹಸೀಲ್ದಾರ್ ಚಂದ್ರಶೇಖರ್, ಪೌರಾಯುಕ್ತರಾದಉಮಾಕಾಂತ್, ನಗರಸಭಾ ಸದಸ್ಯರುಗಳು ಮೊದಲಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ