ಕೊಟ್ಟೂರು
ತಾಲೂಕಿನ ಸಮೀಪದ ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತಗುಂಡು ಕ್ರಾಸ್ ಬಳಿ ಟ್ರಾಕ್ಟರ್ ಬೈಕ್ ಮುಖಾಮುಖಿ ಡಿಕ್ಕಿ ತಾಯಿ ಮಗ ಸಾವನ್ನಪ್ಪಿರುವ ಘಟನೆ ಶನಿವಾರ ಜರುಗಿದೆ.
ಟ್ರಾಕ್ಟರ್ ಹಾಗೂ ಬೈಕ್ ಮದ್ಯ ಮುಖಾಮುಖಿ ಡಿಕ್ಕಿ ಆಗಿ ಹನುಮಕ್ಕ (49) ಹಾಗೂ ಮಂಜುನಾಥ (29) ಮೃತಪಟ್ಟಿದ್ದಾರೆ ಮೃತರು ಸ್ವ ಗ್ರಾಮ ಮಾಡನಾಯಕನಹಳ್ಳಿಯಿಂದ ನೆರೆಯ ಆಂದ್ರಪ್ರದೇಶದ ಹುಡೇಗಳಂ ಗೆ ತನ್ನ ತಾಯಿ ಹಾಗೂ ಇಬಬರ ಮಕ್ಕಳೊಂದಿಗೆ ಸಂಬಂದಿಕರು ಹೋಗುತ್ತಿರುವಾಗ ಚಿರತಗುಂಡು ಕ್ರಾಸ್ ಬಳಿ ಟ್ರಾಕ್ಟರ್ ಬೈಕ್‍ಗೆ ಬಂದು ಗುದ್ದದ್ದು ಸ್ಥಳದಲ್ಲೇ ಹನುಮಕ್ಕ ಮೃತಳಾಗಿದ್ದು ಗಂಭೀರವಾಗಿ ಗಾಯಗೊಂಡ ಮಗ ಮಂಜುನಾಥ ನನ್ನ ಸ್ಥಳೀಯರು ಬಳ್ಳಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯ ಮೃತನಾಗಿದ್ದಾನೆ.
ಈ ಘಟನೆಯ ಸಂಬಂದ ಮೃತರ ಸಂಬಂಧಿ ವೀರಭದ್ರಪ್ಪ ದೂರಿನನ್ವಯ ಕಾನಾಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ