ಟ್ರ್ಯಾಕ್ಟರ್ ಟ್ರೈಲರ್ ಕಳ್ಳರ ಬಂಧನ..!!

ಹರಿಹರ :
     
       ಗ್ರಾಮಾಂತರ ಪ್ರದೇಶದಲ್ಲಿ ಟ್ರ್ಯಾಕ್ಟರ್ಗಳ ಟ್ರೈಲರ್ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 15 ಲಕ್ಷ ರೂ, ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೈಲರ್ ವಶಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.
   
     ಇತ್ತೀಚೆಗೆ ಹರಿಹರ, ಹೊನ್ನಾಳಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಊರಿನ ಹೊರಗಡೆ,  ಹೊಲದ ಬದಿ, ಇತರೆ ನಿರ್ಜನ ಪ್ರದೇಶಗಳಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೈಲರ್ಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದುದನ್ನು ಗಮನಿಸಿ ಪೊಲೀಸ್ ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಲಾಗಿತ್ತು.
     
     ಈ ತಂಡದವರು ಕಳೆದ ಸೋಮವಾರದಂದು ಅನುಮಾನಾಸ್ಪದ ವ್ಯಕ್ತಿಗಳನ್ನು ಅನುಮಾನಿಸಿ ದಾಖಲೆಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿರುತ್ತದೆ.ಶಿಕಾರಿಪುರ ತಾಲ್ಲೂಕಿನ ಹರಗವಳ್ಳಿ ಗ್ರಾಮದ ಡ್ರೈವರ್ ಬಸವರಾಜ್ ಬಿನ್ ನಾಗಪ್ಪ (30)ಮತ್ತು ಅದೇ ಗ್ರಾಮದ ರವಿಕುಮಾರ್ ಬಿನ್ ತಿಪ್ಪೇಶಪ್ಪ (34) ಇವರನ್ನು ವಿಚಾರಣೆ ನಡೆಸಿದಾಗ ಟ್ರ್ಯಾಕ್ಟರ್ ನ ಟ್ರೈಲರ್ಗಳನ್ನು ಕದ್ದು ಬಡ ರೈತರುಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ.
     
    ಆರೋಪಿಗಳು ಮಲೆಬೆನ್ನೂರು ಠಾಣಾ ವ್ಯಾಪ್ತಿ ಯಲ್ಲಿ-3, ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿ ಯಲ್ಲಿ-1, ಹೊನ್ನಾಳಿ ಠಾಣಾ ವ್ಯಾಪ್ತಿಯಲ್ಲಿ-1, ಬಸವ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ-1 ಹೀಗೆ ಒಟ್ಟು 6 ಟ್ರೈಲರ್ಗಳನ್ನು ಮತ್ತು ಕಳವು ಮಾಡಲು ಉಪ ಯೋಗಿಸಿದ ಮಹೀಂದ್ರಾ ಟ್ರ್ಯಾಕ್ಟರನ್ನು ಅಮಾನತು ಪಡಿಸಿಕೊಂಡಿರುವುದಾಗಿ ತಿಳಿಸಿ,ಇವುಗಳ ಮೌಲ್ಯ ಸುಮಾರು ಲಕ್ಷ 15 ರೂ,ಗಳಾಗಿದೆ ಎಂದರು. 
   
     ದಾಖಲೆ ಇಲ್ಲದ ವಾಹನ ಖರೀದಿಸಬೇಡಿ:-ಸರಿಯಾದ ದಾಖಲೆ ಇಲ್ಲದ ಹಳೆಯ ಯಾವುದೇ ವಾಹನಗಳನ್ನು ಖರೀದಿಸಬಾರದು,ದಾಖಲೆಗಳನ್ನು ಸಂಪೂರ್ಣವಾಗಿ ಪರೀಕ್ಷಿಸಿ ಖರೀದಿಸಬೇಕೆಂದು ಸಾರ್ವಜನಿಕರಿಗೆ ಎಸ್ಪಿ. ಚೇತನ್ ರವರು ಮನವಿ ಮಾಡಿಕೊಂಡಿದ್ದಾರೆ.
     
      ಮುಂಬರುವ ನಗರಸಭೆ ಚುನಾವಣೆಯ ಸಿದ್ಧತೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚೇತನ್ ರವರು 3 ದಿನಗಳ ಹಿಂದೆ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆಯಲಾಗಿದೆ, ಈ ಸಾರಿಯ ರಂಜಾನ್ ಮತ್ತು ಚುನಾವಣೆ ಇರುವುದರಿಂದ ಪಿಕೆಟಿಂಗ್ ಪಾಯಿಂಟ್ ಗುರುತಿಸಿ ಸಿಬ್ಬಂದಿ ನೇಮಿಸಲಾಗುವುದು.
     
     ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಪ್ರಚಾರದ ಸಂದರ್ಭದಲ್ಲಿ ಗಲಾಟೆ ಗಳಾಗದಂತೆ ತಡೆಯಲು  ಪೊಲೀಸ್ ಸಿಬ್ಬಂದಿ ಗಳನ್ನು ಜೊತೆಯಲ್ಲಿ ಕರೆಹಿಸಿಕೊಳ್ಳಲು ತಿಳಿಸಿದರು.ನಗರದ ಮುಖ್ಯ ವೃತ್ತದ ಬಳಿಯ ಸಿಗ್ನಲ್ ದೀಪಗಳು ಸರಿಯಾದ  ಕಾರ್ಯ ನಿರ್ವಹಣೆಯ ಬಗ್ಗೆ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಬಿಚ್ಚಿಟ್ಟ ಬ್ಯಾಟರಿಗಳು ತಿಂಗಳುಗಟ್ಟಲೆ ಉಪ ಯೋಗಿಸದೇ ಇರುವ ಕಾರಣ ಅವುಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ, ಸದ್ಯದಲ್ಲಿಯೇ ಸರಿಪಡಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.
    ಟ್ರೈಲರ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಸಿಪಿಐ ಈರಪ್ಪ.ಎಸ್.ಗುರುನಾಥ, ಪಿಎಸ್ಐ ಪ್ರಭು ಕೆಳಗಿನ ಮನಿ,ಸಿಬ್ಬಂದಿಗಳಾದ ಪ್ರಕಾಶ್,ಲಿಂಗರಾಜ್, ಮಂಜುನಾಥ್,ರಾಘವೇಂದ್ರ,ನಟರಾಜ್, ನೀಲ ಮೂರ್ತಿ, ದ್ವಾರಕೀಶ್,ರಾಜಶೇಖರ್, ದಿಳ್ಳೆಪ್ಪ ಸಿರಿಗೇರಿ, ರಿಜ್ವಾನ್ ನಾಸೂರ,ಫಕೃದ್ದೀನ್ ಅಲಿ, ಕನ್ನಪ್ಪ ಇದುರುಮನಿ,ಸುಶೀಲಾ, ಶಿವಪದ್ಮಾ ಇವರುಗಳಿಗೆ ಬಹುಮಾನ ಘೋಷಿಸಿ, ಪ್ರಶಂಸೆ ವ್ಯಕ್ತಪಡಿಸಿದರು.
     ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್, ಸಿಪಿಐ ಈರಪ್ಪ.ಎಸ್.ಗುರುನಾಥ್, ಪಿಎಸ್ಐ ಪ್ರಭು ಕೆಳಗಿನ ಮನಿ ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap