ಟ್ರಾಫಿಕ್ ಜಾಮಿನಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ.

ರಾಣಿಬೆನ್ನೂರ:

     ರಾಣಿಬೆನ್ನೂರು ನಗರವು ಮಾರುಕಟ್ಟೆ, ಬೀಜೋತ್ಪಾಧನೆ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ನಗರಕ್ಕೆ ಹಳ್ಳಿಗಳಿಂದ ಬರುವ ಜನರು ಏನೂ ಕಮ್ಮಿ ಇಲ್ಲ, ದಿನಬಳಕೆ ವಸ್ತುಗಳು, ಕೃಷಿಗೆ ಸಂಬಂಧಪಟ್ಟ ಸಲಕರಣೆಗಳು, ಬಟ್ಟೆಗಳನ್ನು ಕೊಳ್ಳಲು ಹಾಗೂ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಬರುತ್ತಾರೆ. ದಿನದಿಂದ ದಿನಕ್ಕೆ ನಗರ ಅಭಿವೃದ್ಧಿಯತ್ತ ದಾಪುಗಾಲು ಇಟ್ಟರೂ ಕೂಡ ಕೆಲವೊಂದು ಕಡೆಗಳಲ್ಲಿ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಎನ್ನುವುದಕ್ಕೆ ಸಾಕ್ಷಿ ಇಲ್ಲಿನ ಪೋಸ್ಟ್ ಸರ್ಕಲ್(ಅಂಚೇವೃತ್ತ) ಹಾಗೂ ಎಂ.ಜಿ.ರಸ್ತೆ ಅಕ್ಕಪಕ್ಕದ ಜಾಗ ಸಾಕ್ಷಿಯಾಗಿದೆ.

      ಟ್ರಾಫಿಕ್ ಜಾಮ್ ಸರ್ ಟ್ರಾಫಿಕ್ ಜಾಮ್: ಎಂ.ಜಿ.ರಸ್ತೆ ಸುತ್ತ ಮುತ್ತ ಸಿನಿಮಾ ಮಂದಿರ, ಹೂ-ಹಣ್ಣು ಮಾರುಕಟ್ಟೆ, ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆ ಇದೆ. ಇಲ್ಲಿಗೆ ದಿನವು ತಮ್ಮ ದಿನನಿತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಬರುವ ಜನಸಮಾನ್ಯರ ಸಂಖ್ಯೆ ಹೆಚ್ಚು ಇದೆ. ಅಮವಾಸ್ಯೆ, ಹುಣ್ಣಿಮೆ, ಹಬ್ಬ ಹರಿದಿನ ಹಾಗೂ ರವಿವಾರರದಂದು ಅತೀ ಹೆಚ್ಚು ಆಗಮಿಸುತ್ತಾರೆ. ಬೈಕ್ ಸವಾರರು ಸರಿಯಾಗಿ ಬೈಕ್‍ಗಳನ್ನ ನಿಲ್ಲಿಸದೇ ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ, ಆಟೋಗಳ ಸಂಖ್ಯೆಯು ಹೆಚ್ಚಿರುತ್ತದೆ. ಇದರಿಂದ ವಯೋವೃದ್ಧರು, ಮಕ್ಕಳು ಜನಸಮಾನ್ಯರಂತೂ ಗೋಳು ಹೇಳತೀರದು, ಇದನ್ನು ನಿಯಂತ್ರಿಸಲು ಒಬ್ಬ ಟ್ರಾಫಿಕ್ ಪೋಲಿಸ್‍ರನ್ನು ನೇಮಕಮಾಡಿದ್ದು, ಇವರನ್ನು ನಿಯಂತ್ರಿಸಲು ಅವರು ಹರಸಾಹಸ ಪಡುತ್ತಿದ್ದಾರೆ.

ಉದ್ಘಾಟನೆಗೊಳ್ಳದ ನಗರಸಭೆ ಮಳಿಗೆಗಳು:

      ಈಗಾಗಲೇ ಉದ್ಘಾಟನೆಯಾಗಬೇಕಿದ್ದ ಎಂ.ಜಿ.ರಸ್ತೆಯ ಪಕ್ಕದಲ್ಲಿರುವ ಮಳಿಗೆಗಳು ನಗರಸಭಾ ಚುನಾವಣೆ ಆಗಮನದಿಂದ ಮುಂದೂಡಲಾಗಿತ್ತು. ಅಂದಾಜು 3 ಕೋಟಿ 21 ಲಕ್ಷ ರೂ ಮೊತ್ತ ಖರ್ಚು ಆಗಿದ್ದು ಕೆಳಗಿನ 36 ಮಳಿಗೆಗಳಿಗೆ 1 ಕೋಟಿ 21 ಲಕ್ಷ ರೂ ಮೊತ್ತ ಹಾಗೂ ಮೇಲೆಗಡೆ 37 ಮಳಿಗೆಗಳಿಗೆ 1 ಕೋಟಿ 90 ಲಕ್ಷ ಒಟ್ಟು 73 ಮಳಿಗೆಗಳನ್ನು ಕಟ್ಟಲಾಗಿದೆ. ಮಳಿಗೆಗಳು ಉದ್ಘಾಟನೆಯಾದ ನಂತರ ಟೆಂಟರ್ ಮುಖಾಂತರ ಹರಾಜು ಹಾಕಲಾಗುವುದು ಎನ್ನುತ್ತಾರೆ ನಗರಸಭೆ ಕಿರಿಯ ಅಭಿಯಂತರ ಗುಡಸಲಮನಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link