ಟ್ರಾಫಿಕ್ ಪೊಲೀಸರಿಂದ ಗುಲಾಬಿ ಜಾಥಾ..!

ಹಾವೇರಿ :

     ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಸೋಮವಾರದಂದು ಜಿಲ್ಲಾ ಸಂಚಾರಿ ಪೊಲೀಸರಿಂದ ಬೈಕ ಸವಾರರಿಗೆ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವಂತೆ ಹೇಳಿ ಗುಲಾಬಿ ಹೂವನ್ನು ನೀಡುವ ಮೂಲಕ ಜಾಗೃತಿ ಮೂಡಿಸಿದರು .ನಗರದಲ್ಲಿ ಸಾಕಷ್ಟು ಬೈಕ ಸವಾರರು ಹೆಲ್ಮೆಟ್ ಇದ್ದರೂ ಅದನ್ನು ಬಳಸದೇ ಸಂಚಾರ ಮಾಡುತ್ತಿದ್ದು, ಧರಿಸದಿದ್ದರೇ ಆಗುವ ಅನಾಹುತಗಳನ್ನು ತಿಳಿದಿದ್ದರೂ ಈ ರೀತಿ ತಪ್ಪು ಮಾಡುವುದು ಸರಿಯಲ್ಲ. ಬೈಕ್ ಹೊಂದಿರುವವರೆಲ್ಲರೂ ತಪ್ಪದೇ ಹೆಲ್ಮೆಟ್ ಧರಿಸಬೇಕು.ತಮ್ಮ ಪ್ರಾಣ ಕಾಪಾಡಿಕೊಳ್ಳಬೇಕು ಎಂದು ಬೈಕ್ ಸವಾರರಿಗೆ ತಡೆದು ತಿಳಿ ಹೇಳಿದರು.

     ಬೈಕ್ ಸವಾರರಿಗೆ ಹೆಲ್ಮೆಟ್ ಬಗ್ಗೆ ಮನಮುಟ್ಟುವಂತೆ ತಿಳಿಸಲು ಗಣೇಶ ವೇಷವನ್ನು ಧರಿಸಿ ಸವಾರರಿಗೆ ನಿಲ್ಲಿಸಿ ಗುಲಾಭಿ ಹೂವನ್ನು ನೀಡಿ ಪ್ರೀತಿಯಿಂದ ಅವರನ್ನು ಮಾತನಾಡಿಸಿ ಬೈಕ್ ಸವಾರಿ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ಚಲಾಯಿಸಿ ಎಂದರು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ ಪಿಎಸ್‍ಐ ಪಲ್ಲವಿ ಹಾಗೂ ಸಂಚಾರಿ ಪೊಲೀಸರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link