ಬೆಂಗಳೂರು ನಗರದ ಸಂಚಾರ ದಟ್ಟಣೆ ತಡೆಗಟ್ಟಲು ಸೂಕ್ತ ಕ್ರಮ : ಯಡಿಯೂರಪ್ಪ

ಬೆಂಗಳೂರು

     ರಾಜಧಾನಿ ಬೆಂಗಳೂರನ್ನು ವಿಶ್ವದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ನಗರ ಸಂಚಾರ ಮತ್ತು ಸಾಗಣೆಯನ್ನು ಸುಗಮಗೊಳಿಸಲು ಸಬರ್ಬನ್ ರೈಲು,ಐಸ್ಪೀಡ್ ರೈಲು ಸಂಪರ್ಕ ಕಲ್ಪಿಸಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ

    ಬೆಂಗಳೂರು ಮಹಾನಗರಕ್ಕೆ ವಿಶ್ವದರ್ಜೆ ಸೌಲಭ್ಯಗಳನ್ನು ಒದಗಿಸುವುದರ ಜೊತೆಜೊತೆಗೆ, ರಾಜ್ಯದ ಉಳಿದ ಎಲ್ಲಾ ನಗರಗಳ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವುದು ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದರು.ನಗರದ ಅರಮನೆ ಮೈದಾನದಲ್ಲಿ ನಗರಾಭಿವೃದ್ಧಿ ಇಲಾಖೆಯು ಗುಡ್ ಗವರ್ನೆನ್ಸ್ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿರುವ ಮುನ್ಸಿಪಾಲಿಕಾ 16ನೇ ಅಂತಾರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಬೆಂಗಳೂರು ಮಾದರಿಯಲ್ಲಿ ರಾಜ್ಯದ ಉಳಿದ ನಗರಗಳ ಬೆಳವಣಿಗೆ ಕೂಡ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.

     ಬೆಂಗಳೂರಿನ ಮೂಲ ಸೌಕರ್ಯವನ್ನು ವಿಶ್ವದರ್ಜೆಗೆ ಏರಿಸಲಾಗುವುದು ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳನ್ನು ಪ್ರವಾಹ, ಭೂಕುಸಿತ, ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಸಂರಕ್ಷಿತ ನಗರಗಳನ್ನಾಗಿ ಯೋಜಿತ ರೀತಿಯಲ್ಲಿ ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದರು.

      ನಗರೀಕರಣ ದೊಡ್ಡಸವಾಲಾಗಿದ್ದು, ನಗರೀಕರಣದ ಜ್ವಲಂತ ಸಮಸ್ಯೆಗಳನ್ನು ಮತ್ತು ನಗರಗಳ ಯೋಜಿತ ಬೆಳವಣಿಗೆ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಠಿಯೊಂದಿಗೆ ಪ್ರಧಾನಿ ಮೋದಿಯವರು 100 ಸ್ಮಾರ್ಟ್‌ಸಿಟಿ ಮಿಷನ್, 500 ಅಮೃತ್ ನಗರಗಳ ಮಿಷನ್, ಸ್ವಚ್ಚ ಭಾರತ ಮಿಷನ್, ಪ್ರಧಾನ ಮಂತ್ರಿ ಅವಾಜ್ ಯೋಜನೆ, ಹೃದಯ್ ಡಿಜಿಟಲ್ ಇಂಡಿಯಾ, ಇತ್ಯಾದಿ ಮಹತ್ವಾಕಾಂಕ್ಷಿ ಅಭಿಯಾನಗಳನ್ನು ಆರಂಭಿಸಿದ್ದಾರೆ ಎಂದರು.

      ಬೆಂಗಳೂರು ನಗರವೂ ಸೇರಿದಂತೆ, ರಾಜ್ಯದ 7 ಮಹಾನಗರ ಪಾಲಿಕೆಗಳು ಸ್ಮಾರ್ಟ್‌ಸಿಟಿ ಅಭಿಯಾನದಲ್ಲಿ, 27 ನಗರಗಳು ಅಮೃತ್ ಅಭಿಯಾನದಲ್ಲಿ ಹಾಗೂ ಸ್ವಚ್ಚ ಭಾರತ ಅಭಿಯಾನದಲ್ಲಿ ರಾಜ್ಯದ ಎಲ್ಲಾ ಪಟ್ಟಣಗಳು ಆಯ್ಕೆಯಾಗಿ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿರುವುದು ಸಂತಸದ ವಿಚಾರ ಎಂದರು.

ಸಮತೋಲನ ದೃಷ್ಠಿ

  ಬೆಂಗಳೂರಿನಷ್ಟೇ ರಾಜ್ಯದ ಇತರ ಬೆಳವಣಿಗೆಯೂ ಸರ್ಕಾರದ ಆದ್ಯತೆಯ ವಿಚಾರವಾಗಿದೆ. ರಾಜ್ಯದ ಅಭಿವೃದ್ದಿಯ ಸಮತೋಲನದ ದೃಷ್ಠಿಯಿಂದ ಬೆಂಗಳೂರು ಜತೆಗೆ, ಇತರ ನಗರಗಳ ಬೆಳವಣಿಗೆಯೂ ಆಗಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಹೊರತುಪಡಿಸಿ, ಬೇರೆ ನಗರಗಳ ಅಭಿವೃದ್ಧಿಗೂ ಕಾರ್ಯಕ್ರಮ ರೂಪಿಸಿದೆ ಎಂದರು.

   ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಉತ್ಪಾದನೆ ಮತ್ತು ವಾಣಿಜ್ಯ ದೃಷ್ಠಿಯಿಂದ ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಗಳು ಮುಂಚೂಣಿ ಜಿಲ್ಲೆಗಳಾಗಿವೆ ಎಂದರು.

   ಕ್ಷೀಣಿಸುತ್ತಿರುವ ಜಲ ಹಾಗೂ ಇಂಧನ ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಬಳಕೆಯಲ್ಲಿ ಮಿತವ್ಯಯ ಮತ್ತು ಸಂರಕ್ಷಣೆಯ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಘನತ್ಯಾಜ್ಯ ನಿರ್ವಹಣೆ, ಜಲಮೂಲಗಳು ಹಾಗೂ ಪರಿಸರ ಸಂರಕ್ಷಣೆ, ತ್ಯಾಜ್ಯ ನೀರಿನ ಸಂರಕ್ಷಣೆ, ಸೌರ ವಿದ್ಯುತ್ ಬಳಕೆ, ಮಳೆ ನೀರಿನ ಕೊಯ್ಲು, ಇವು ನಗರ ಸ್ಥಳೀಯ ಸಂಸ್ಥೆಗಳ ಆದ್ಯತಾ ವಿಷಯವಾಗಬೇಕಿದೆ ಎಂದು ಅವರು ಹೇಳಿದರು.

4ನೇ ಸ್ಥಾನ

    ಕರ್ನಾಟಕ ದೇಶದಲ್ಲೇ ತ್ವರಿತವಾಗಿ ನಗರೀಕರಣ ಹೊಂದುತ್ತಿರುವ ರಾಜ್ಯವಾಗಿದ್ದು, ದೇಶದಲ್ಲೇ ಅತಿಹೆಚ್ಚು ನಗರೀಕರಣವಾಗಿರುವ ರಾಜ್ಯಗಳಲ್ಲಿ 4ನೇ ಸ್ಥಾನದಲ್ಲಿದೆ. ಹಾಗಾಗಿ ನಗರೀಕರಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಸಮಾವೇಶವೂ ಸರ್ಕಾರಕ್ಕೆ ಪೂರಕವಾದ ವರದಿಗಳನ್ನು ನೀಡುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

    ಈ ಸಮಾವೇಶದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಮೇಯರ್ ಗೌತಮ್ ಕುಮಾರ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಗುಡ್ ಗೌಱ್ನೆನ್ಸ್ ಅಧ್ಯಕ್ಷ ವಿ. ಸುರೇಶ್, ಕೆನಡಾದ ಸೀನಿಯರ್ ಟ್ರೇಡ್ ಕಮೀಷನರ್ ಮಾರ್ಕ್ ಶೋಟರ್, ಬ್ರಿಟನ್‌ನ ಉಪ ರಾಯಭಾರಿ ಜರೆಮಿ ಫಿಲ್ಮೋರೆ ಬೆಡ್ಬೋರ್ಡ್, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap