ಜಗಳೂರು :
ವಿಶಿಷ್ಠ ಚೇತನರನ್ನು ದೇವರಂತೆ ಕಾಣ ಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು ಪಟ್ಟಣದ ಹಳೇ ಬಿಇಓ ಆಫಿಸ್ ಸಮೀಪ ವಿರುವ ಸ.ಹಿ.ಪ್ರಾ. ಬಾಲಕೀಯರ ಶಾಲಾ ಆವರಣದಲ್ಲಿ ಶುಕ್ರವಾರ ಸಮಗ್ರ ಶಿಕ್ಷಣ ಅಬಿಯಾನ , ಕೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿ ,ಕ್ಷೇತ್ರ ಸಂಪನ್ಮೂಲ ಕೇಂದ್ರ ದ ಸಹಯೋಗದಲ್ಲಿ 2018-19 ಸಾಲಿನ ಉಚಿತ ವೈದ್ಯಕೀಯ ಶಿಭಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶಿಷ್ಠ ಚೇತನರ ಮಕ್ಕಳನ್ನು ಪೋಷಕರು ದೇವರೆಂದು ತಿಳಿದು ನೊಡಿಕೊಳ್ಳ ಬೇಕು. ಇಂತ ಮಕ್ಕಳ ಸೇವೆ ಮಾಡುವುದರಿಂದ ಪ್ರತಿಯೊಬ್ಬರಿಗೂ ಪುಣ್ಯ ದೊರೆಯುತ್ತದೆ ಎಂದರು. ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿಯೊಬ್ಬ ಮಕ್ಕಳಿಗೂ ಸರಕಾರವು ಉಚಿತವಾಗಿ ಇಂತ ಶಿಬಿರವನ್ನು ಆಯೋಜಿಸಿ ಚಿಕಿತ್ಸೆ ಕೊಡಿಸಿ ಇವರಿಗೆ ಬೇಕಾಗುವಂತ ಪರಿಕರಳನ್ನು ಉಚಿತವಾಗಿ ನೀಡುತ್ತಿದ್ದು ಪ್ರತಿಯೊಬ್ಬರು ಸದ್ವಿನಿಯೋಗ ಪಡೆದು ಕೊಳ್ಳ ಬೇಕು ಎಂದು ಹೇಳಿದರು.
ಈ ಶಿಬಿರದಲ್ಲಿ 47 ಶ್ರವಣ ದೋಷ ಉಳ್ಳವರು , 26 ದೃಷ್ಟಿ ನ್ಯೂನತೆ ಉಳ್ಳವರು, 76 ದೈಹಿಕ ನ್ಯೂನತೆಉಳ್ಳವರು 93 ಬುದ್ದಿಮಾಂದ್ಯ ತೆಉಳ್ಳವರು ಸೇರಿದಂತೆ 239 ವಿದ್ಯಾರ್ಥಿಗಳು ಚಿಕಿತ್ಸೆ ನೀಡಲಾಯಿತು ಈ ಸಮಧರ್ಭದಲ್ಲಿ ಬಿಓ. ಈಶ್ವರ ಚಂದ್ರ , ಪಟ್ಟಣ ಪಂಚಾಯಿತಿ ಸದಸ್ಯರಾದ ಪಾಪಲಿಂಗ, ಸಿದ್ದಪ್ಪ, ಬಿ ಆರ್ ಸಿ ಗಿರಿಶ್ , ತಾಲೂಕು ನೌಕರರ ಸಂಘದ ಗೌರವ ಅಧ್ಯಕ್ಷ ಇ. ಸತೀಶ್, ಶಿಕ್ಷಕರಾದ ಹಾಲನಾಯ್ಕ, ರಂಗಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








