ಹಾನಗಲ್ಲ :
ಪರಿಸರ ಸಂರಕ್ಷಣೆ ಮಾಡುವಂತ ಜವಾಬ್ದಾರಿ, ಹಿಂದೆಂದಿಗಿಂತಲೂ ಇಂದು ಪ್ರತಿಯೊಬ್ಬರಿಗೂ ಪರಿಸರ ಕಾಪಾಡುವುದು ಅತಿ ಅವಶ್ಯಯಿದೆ ಎಂಬುದನ್ನು ಈಗ ನಾವು ಅರಿತಿದ್ದೇವೆ. ಇಂದು ಸೃಷ್ಠಿಯ ವೈಪರಿತ್ಯದಿಂದ ಹವಾಮಾನ ಏರುಪೇರಿನಿಂದಾಗಿ ಮಳೆಯಾಗದೆ ಬಿರುಗಾಳಿ ಮಹಾಪೂರಗಳು ಹೆಚ್ಚಾಗುವುದಕ್ಕೆ ಪರಿಸರ ಸಂರಕ್ಷಣೆ ಕಾಪಾಡದೇಯಿರುವುದು ಮುಖ್ಯ ಕಾರಣವಾಗಿದ್ದು, ಅವುಗಳ ಸಂರಕ್ಷಣೆ ಎಲ್ಲರಲ್ಲೂ ಬರಬೇಕಿದೆ ಎಂದು ಜನತಾ ಶಿಕ್ಷಣ ಸೌಹಾರ್ದ ಸಂಸ್ಥೆಯ ಅದ್ಯಕ್ಷ ಎ.ಎಸ್.ಬಳ್ಳಾರಿ ತಿಳಿಸಿದರು.
ಮಂಗಳವಾರ ಪಟ್ಟಣದ ಹಳೆಕೋಟಿ ಜನತಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆಗಾಗಿ ಒಂದ ನೂರು ಗೀಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದೋಂದು ದಿನ ನಮ್ಮ ಸುತ್ತ ಮುತ್ತಲಿನ ಪರಿಸರ ಗೀಡ ಮರಗಳನ್ನು ಸಂರಕ್ಷಣೆ ಮಾಡದೇ ಹೋದರೆ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ ಎಂದ ಅವರು, ಇಂದು ಪರಿಸರ ರಕ್ಷಣೆಯನ್ನು ಸಣ್ಣ ಮಕ್ಕಳಯಾದಿಯಾಗಿ ಎಲ್ಲರಿಗೂ ಪಾಠ ಕಲಿಸುವಂತ ಕೆಲಸವಾಗುವ ಜೊತೆಗೆ ತರಬೇತಿಯನ್ನು ನೀಡುವಂತಾಗಬೇಕಿದೆ. ಅಂತಹ ಪರಿಸರ ಸಂರಕ್ಷಣೆ ಜಾಗೃತಿಯ ಮೂಡಿಸುವ ಕೆಲಸವನ್ನುಅರಣ್ಯ ಇಲಾಖೆಯವರು ಮಾಡುತ್ತಿರುವುದು ಶ್ಲಾಘನೀಯ ವಿಷಯ ಎಂದರು.
ಅರಣ್ಯ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಬಿ.ಪಿ.ದುಡ್ಡಗಿ ಮಾತನಾಡಿ, ಪ್ರತಿಯೊಂದು ಜೀವ, ಜಲ, ಮನುಷ್ಯ, ಪ್ರಾಣಿ, ಪಕ್ಷಿ ಉಸಿರಾಡಬೇಕಾದರೆ ಪರಿಸರ ಅಷ್ಟೆ ಅತ್ತವಶ್ಯಕತೆಯಿದೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೀಡ ಮರಗಳ ನೆಡುವುದರೊಂದಿಗೆ ಸಂರಕ್ಷಣೆ ಮಾಡಬೇಕಿದೆ. ಇಂದಿನಿಂದಲೇ ಪ್ರತಿಯೊಬ್ಬರು ತಮ್ಮ ಸುತ್ತ ಮೂತ್ತಲಿನ ಪರಿಸರವನ್ನು ಕಾಪಾಡುವ ಸಂರಕ್ಷೀಸುವ ಪಣ ತೊಡಬೇಕು ಹಿಗಿದ್ದಾಗ ಮಾತ್ರ ಪರಿಸರ ಉಳಿಸಿಕೊಳ್ಳಲು ಸಾದ್ಯವಾಗುತ್ತದೆ ಎಂದರು.
ಈಗಾಗಲೆ ಪೂರ್ವಾಜಿತವಾಗಿ ಇಲಾಖೆ ವತಿಯಿಂದ ಶಾಲಾ-ಕಾಲೇಜು ಹಾಗೂ ಸರಕಾರಿ ಕಚೇರಿಗಳಲ್ಲಿ ನೇರಳೆ, ಮಹಾಗನಿ, ಗೋಣಿ, ನೆಲ್ಲಿ, ಅರಳಿ, ಮಾವು, ಅತ್ತಿ, ಹೊಂಗೆ, ನುಗ್ಗೆ, ತಪಸ್ಸಿ, ಕರಿಬೇವು, ಹಲಸು, ಹೆಬ್ಬೇವು ನಿರಲೇ ಸೆರಿದಂತೆ ಹಲವು ವಿವಿಧ ತಳಿಯ ಗಿಡದ ಸಸಿಗಳು ಸೇರಿದಂತೆ ಪಟ್ಟಣದಲ್ಲಿ ಸುಮಾರು 900 ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಜನತಾ ಶಿಕ್ಷಣ ಸಂಸ್ಥೇಯ ಎಮ್.ಎಚ್.ಬಳಿಗಾರ, ಮುಖ್ಯಶಿಕ್ಷಕ ಎಸ್.ಎಸ್.ಸವಣೂರ, ಜಿ.ಬಿ.ದೇಸಾಯಿ, ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಪೇಲನವರ, ವಿ.ಆರ್.ಪಾಟೀಲ, ಎಸ್.ಎಮ್.ತಳವಾರ, ಬಿ.ಎಮ್.ಹೊಸೂರ, ಜಿ.ಜಿ.ಓಲೆಕಾರ, ಹಾಗೂ ಇಲಾಖಾ ಸಿಬ್ಬಂದಿಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
