ಬ್ಯಾಡಗಿ:
ಇತ್ತೀಚೆಗೆ ಟಂಟಂ ವಾಹನ ದುರಂತಕ್ಕೀಡಾಗಿ 8 ಜನ ದುರ್ಮಕ್ಕೀಡಾದ ಸುದ್ದಿ ಜನಮಾನಸದಿಂದ ದೂರ ಸರಿಯುವ ಮುನ್ನವೇ, ಮತ್ತೊಂದು ಟಂಟಂ ವಾಹನ ಪಲ್ಟಿಯಾಗಿ ಓರ್ವ ಮಹಿಳೆಯನ್ನು ಬಲಿ ತೆಗೆದುಕೊಂಡ ಘಟನೆ ಪಟ್ಟಣದ ಕಾಕೋಳ ರಸ್ತೆಯಲ್ಲಿರುವ ತಾಲ್ಲೂಕ ಪಂಚಾಯತ್ ಕಾರ್ಯಾಲಯದ ಎದುರಿಗೆ ಗುರುವಾರ ಬೆಳಿಗ್ಗೆ ನಡೆದಿದ್ದು ಘಟನೆಯಲ್ಲಿ 12 ಕ್ಕೂ ಹೆಚ್ಚು ಸಹ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಮೃತಳನ್ನು ತಾಲೂಕಿನ ಬುಡಪನಹಳ್ಳಿ ಗ್ರಾಮದ ನಿವಾಸಿ ಮಾಳಮ್ಮ ಪರಸಪ್ಪ ಪೂಜಾರ (30) ಎಂದು ಗುರ್ತಿಸಲಾಗಿದ್ದು, ಗಾಯಗೊಂಡ 12 ಜನ ಮಹಿಳೆಯರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಇವರೆಲ್ಲರೂ ಪಟ್ಟಣದ ಮೆನಸಿನಕಾಯಿ ಮಾರುಕಟ್ಟೆಗೆ ಕೂಲಿ ಕೆಲಸಕ್ಕೆ ಬರುತ್ತಿರುವುದಾಗಿ ತಿಳಿದು ಬಂದಿದೆ.
ಎತ್ತು ಮಾಡಿದ ಯಡವಟ್ಟು:ಎಂದಿನಂತೆ ಕಾಕೋಳದಿಂದ ಬ್ಯಾಡಗಿ ಕಡೆಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟಂಟಂ ಬ್ಯಾಡಗಿ ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ ಎದುರಿಗೆ ಬಂದಂತಹ ಎತ್ತೊಂದು ಟಂಟಂಗೆ ಅಡ್ಡ ಬಂದ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಹೋದ ಚಾಲಕ ವಾಹನ ನಿಯಂತ್ರಿಸಲಾಗದೇ ರಸ್ತೆ ಪಕ್ಕದ ಗುಂಡಿಗೆ ಮಗು ಚಿದೆ.
ಆಸ್ಪತ್ರೆಯಲ್ಲಿ ಮಹಿಳೆಯ ಸಾವು:ಅಪಘಾತದಲ್ಲಿ ತೀವ್ರರಕ್ತಸ್ರಾವದಿಂದ ಬಳಲುತ್ತಿದ್ದ ಮಾಳಮ್ಮನನ್ನು ಅಕ್ಕಪಕ್ಕದ ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಳಕಾರಿಯಾಗದೇ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಡಿಎಸ್‍ಪಿ ಎಲ್.ಕುಮಾರಪ್ಪ ಸಿಪಿಐ ಚಿದಾನಂದ ಹಾಗೂ ಪಿಎಸ್‍ಐ ಮಹಾಂತೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
