ಬೆಂಗಳೂರು
ಟಿವಿಎಸ್ ಮೋಟಾರ್ ಕಂಪನಿಯ ವಾಹನಗಳ ಮಾರಾಟ ಪ್ರಮಾಣ 2018-19ನೇ ಸಾಲಿನಲ್ಲಿ ಶೇ.12.9ರಷ್ಟು ಹೆಚ್ಚಳವಾಗಿದ್ದು, ಆದಾಯದಲ್ಲಿ ಶೇ.19.3ರಷ್ಟು ಪ್ರಗತಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಸಾಲಿನಲ್ಲಿ ಒಟ್ಟು 39.14 ಲಕ್ಷ ವಾಹನಗಳು ಮಾರಾಟವಾಗಿದ್ದು, ಜಿಎಸ್ ಟಿ ಹಾಗೂ ಇತರ ತೆರಿಗೆಗಳನ್ನೊಳಗೊಂಡ ಒಟ್ಟು ಆದಾಯ 18 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.
ಈ ವರ್ಷ ಕಂಪನಿ ಬಿಡುಗಡೆಗೊಳಿಸಿದ ಹೊಸ ಉತ್ಪನ್ನ ಟಿವಿಎಸ್ ರೇಡಿಯೋನ್ ಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ಆದಾಯದಲ್ಲಿ ಶೇ.9.2ರಷ್ಟು ಪ್ರಗತಿ ದಾಖಲಾಗಿತ್ತು. ತೆರಿಗೆ ಪಾವತಿಗೂ ಮುನ್ನ ಕಂಪನಿ 183.9 ಕೋಟಿ ರೂ. ಹಾಗೂ ತೆರಿಗೆ ಪಾವತಿ ನಂತರ, 134.3 ಕೋಟಿ ರೂ. ಆದಾಯ ದಾಖಲಿಸಿದೆ.
2019ರ ಮಾರ್ಚ್ ಅಂತ್ಯದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಮಾರಾಟ 9.07 ಲಕ್ಷಕ್ಕೇರಿತ್ತು. 2018ರ ಮಾರ್ಚ್ ಅಂತ್ಯದಲ್ಲಿ ಅದು 8.89 ಲಕ್ಷದಷ್ಟಿತ್ತು. ಮಾರ್ಚ್ ಅಂತ್ಯಕ್ಕೆ 3.75 ಲಕ್ಷ ಮೋಟಾರ್ ಸೈಕಲ್ ಮಾರಾಟವಾಗಿದ್ದು, ಪ್ರಮಾಣ ಶೇ.8.4ರಷ್ಟು ಪ್ರಗತಿ ದಾಖಲಿಸಿದೆ. 2018ರಲ್ಲಿ ಇದು 3.46ರಷ್ಟಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








