ಬೆಳಗಾವಿ
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಏರುತ್ತಿರುವಾಗ ಬೆಳಗಾವಿಯಲ್ಲಿ ಕಲ್ಲಂಗಡಿ ಹಣ್ಣನ್ನು ಚರಂಡಿ ನೀರಿನಲ್ಲಿ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಹಣ್ಣಿನ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿಪ್ಪಾಣಿ ಪಟ್ಟಣದ ಭೋಪಳೆ ಗಲ್ಲಿಯ ಶಾಬಾಜ್ ಮುನ್ನಾ ಸತಾರಿ (20) ಹಾಗೂ ರಿಯಾನ್ ಆಯಾಜ್ ಮಡ್ಡೆ (19) ಎಂಬ ಯುವಕರೇ ಬಂಧಿತರು. ಈ ಯುವಕರು ಕಲ್ಲಂಗಡಿ ಹಣ್ಣುಗಳನ್ನು ಚರಂಡಿಯಲ್ಲಿ ತೊಳೆದು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋವನ್ನು ನೋಡಿದ್ದ ನಿಪ್ಪಾಣಿಯ ಸಾರ್ವಜನಿಕರು ಆರೋಪಿಗಳನ್ನು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ನಿಪ್ಪಾಣಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳು ಈ ಕೃತ್ಯವನ್ನು ಮಾರ್ಚ್ 28 ರಂದು ಎಸಗಿದ್ದು, ವಿಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








