ಇಂಫಾಲ:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಡ್ರೋನ್ ದಾಳಿಯಲ್ಲಿ 23 ವರ್ಷದ ಮಹಿಳೆ ಸೇರಿ ಮೂವರಿಗೆ ಗಾಯಗಳಾಗಿವೆ.ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಡ್ರೋನ್ ಬಳಸಿ ಹೊಸ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.”ಸೋಮವಾರ ಸಂಜೆ 6. 20 ರ ವೇಳೆಗೆ ವಸತಿ ಪ್ರದೇಶದಲ್ಲಿ ಡ್ರೋನ್‌ನಿಂದ ಕನಿಷ್ಠ ಎರಡು ಸ್ಫೋಟಕಗಳನ್ನು ಚದುರಿಸಲಾಯಿತು.
ಇದರಲ್ಲಿ ಮಹಿಳೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ” ಎಂದು ಅಧಿಕಾರಿಗಳು ಹೇಳಿದ್ದಾರೆ. ಮಹಿಳೆ ಸೆಂಜಮ್ ಚಿರಾಂಗ್ ಪ್ರದೇಶದ ತನ್ನ ನಿವಾಸದಲ್ಲಿದ್ದಾಗ ಬಾಂಬ್ ತನ್ನ ಮನೆಯ ಕಬ್ಬಿಣದ ಮೇಲ್ಛಾವಣಿಯ ಶೀಟ್‌ಗಳ ಮೂಲಕ ತೂರಿಕೊಂಡು ಸ್ಫೋಟಗೊಂಡಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್‌ಪೊಕ್ಪಿ ಜಿಲ್ಲೆಯ ಬೆಟ್ಟದ ಮೇಲಿನ ಪ್ರದೇಶಗಳಿಂದ ತಗ್ಗು ಪ್ರದೇಶದ ಸೆಜಮ್ ಚಿರಾಂಗ್ ಗ್ರಾಮದ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸ್ಥಳವು ಕೌಟ್ರುಕ್‌ನಿಂದ ಕೇವಲ 3 ಕಿಮೀ ದೂರದಲ್ಲಿದೆ, ಭಾನುವಾರದಂದು ಇದೇ ರೀತಿಯ ಡ್ರೋನ್ ಬಾಂಬ್ ಮತ್ತು ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದರು.ಏತನ್ಮಧ್ಯೆ, ಮಣಿಪುರ ಪೊಲೀಸರ ಹೇಳಿಕೆಯ ಪ್ರಕಾರ, ಶೋಧ ಕಾರ್ಯಾಚರಣೆಯ ಸಮಯದಲ್ಲಿ ಕಾಂಗ್‌ಪೋಕ್ಪಿ ಜಿಲ್ಲೆಯ ಸಮೀಪದ ಖರಂ ವೈಫೇಯ್ ಗ್ರಾಮದಿಂದ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.