ಹಳೆ ನೋಟು ಚಲಾವಣೆ : ಇಬ್ಬರ ಬಂಧನ..!

ಬೆಂಗಳೂರು

    ಕೋಟಿ ರೂ. ಮೌಲ್ಯದ ನಿಷೇಧಿತ ನೋಟುಗಳನ್ನು ಕಮಿಷನ್ ಆಸೆಗಾಗಿ ವಿನಿಮಯ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುದಾಸೀರ್ ನಜೀರ್ ( 32), ಶೇಕ್‍ತುಪೆಲ್ ಅಲಿ ಬಂಧಿತ ಆರೋಪಿಗಳು.

    ಬಂಧಿತ ಮುದಾಸಿರ್ ಮನೆಯನ್ನು ಪರಿಶೀಲಿಸಿದಾಗ ಬ್ಯಾಗ್‍ನಲ್ಲಿ ನಿಷೇಧಿಸಿದ್ದ 1000 ರೂ. ಮುಖಬೆಲೆಯ 80 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್.ಟಿ.ನಗರ ಪೊಲೀಸರು ತಿಳಿಸಿದ್ದಾರೆ.ಇನ್ನು, ಶೇಕ್‍ತುಪೆಲ್ ಅಲಿ ಬಳಿಯಿಂದ ಕೇಂದ್ರ ಸರ್ಕಾರ ನಿಷೇಧಿಸಿದ್ದ 1000 ರೂ. ಮುಖ ಬೆಲೆಯ 20 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1000 ರೂ. ಮುಖ ಬೆಲೆಯ 1 ಕೋಟಿ ರೂ. ಮೌಲ್ಯದ ನಿಷೇಧಿಸಿದ್ದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಿಎಸ್‍ಐ ಸುಭಾಷ್ ಚಂದ್ರ ಪಟ್ಟಣ ಅವರಿಗೆ ಸುಲ್ತಾನ್ ಪಾಳ್ಯದ ಭುವನೇಶ್ವರಿ ನಗರದ ಮುದಾಸೀರ್ ನಜೀರ್ ಅವರ ಮನೆಯಲ್ಲಿ ನಿಷೇಧಿತ 1000 ರೂ. ಮುಖ ಬೆಲೆಯ ಹಳೆ ನೋಟುಗಳನ್ನು ತಂದು ಕಮಿಷನ್‍ಗಾಗಿ ಸಾರ್ವಜನಿಕರಿಗೆ ಚಲಾವಣೆ ಮಾಡಲು ಇಟ್ಟುಕೊಂಡಿರುವುದಾಗಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ವ್ಯಕ್ತಿ ಓರ್ವನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಆತನ ಮಾಹಿತಿ ಮೇರೆಗೆ ಮುದಾಸೀರ್ ಬಳಿ ಇದ್ದ ಹಣ ವಶಕ್ಕೆ ಪಡೆದುಕೊಂಡರು.

     ಮತ್ತೋರ್ವ ಆರೋಪಿ ಶೇಕ್‍ತುಪೆಲ್ ಅಲಿ ಬಳಿ ಇದ್ದ ಹಣವನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದುಕೊಂಡರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಇವರು ಬೆಂಗಳೂರು ನಿವಾಸಿ ರೆಹಮಾನ್ ಎಂಬುವರಿಂದ ಚಲಾವಣೆಯಲ್ಲಿರುವ 2.5 ಲಕ್ಷ ರೂ.ಗಳನ್ನು ಹಣ ಕೊಟ್ಟು ಖರೀದಿಸಿರುವುದಾಗಿ ಮುದಾಸೀರ್ ನಜೀರ್ ತಿಳಿಸಿದ್ದನು. ಈ ಪ್ರಕರಣದ ಮತ್ತೊರ್ವ ಆರೋಪಿ ಶೇಕ್ ತುಪೆಲ್ ಎಂಬಾತ ಮೂಲತಃ ಓಡಿಸ್ಸಾ ರಾಜ್ಯದವನಾಗಿದ್ದು, ಈತನು ಮುದಾಸೀರ್ ತಜೀರ್‍ಗೆ ಭಾರತದಲ್ಲಿ ನಿಷೇಧಿತ ನೋಟುಗಳನ್ನು ನೇಪಾಳ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಬದಲಾವಣೆ ಮಾಡಿಕೊಡುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಆರ್ ಟಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್ ಟಿ ನಗರ ಪೊಲೀಸ್ ಇನ್‍ಸ್ಪೆಕ್ಟರ್ ವಿ.ಜೆ. ವಿಥುನ್ ಶಿಲ್ಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap