ಬೆಂಗಳೂರು
ಆಯತಪ್ಪಿ ಬಿದ್ದ ಕೆಟಿಎಂ ಬೈಕ್ ಮೇಲೆ ಕೆಎಸ್‌ಆರ್‌ಟಿಯ ಐರಾವತ ಬಸ್ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿ ಗೇಟ್ ಬಳಿ ಸಂಭವಿಸಿದೆ.ಕೆ.ಆರ್.ಪುರಂನ ಎ.ನಾರಾಯಣಪುರದ ನಿವಾಸಿಗಳಾದ ನಾಗೇಶ್ (೨೩) ಹಾಗೂ ತೇಜಸ್ (೨೨)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ನಾಗೇಶ್ ಹಾಗೂ ತೇಜಸ್ ಕೆಟಿಎಂ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಾಣಮಾಕನಹಳ್ಳಿ ಗೇಟ್ ಬಳಿ ಬೈಕ್ ಏಕಾಏಕಿ ಆಯತಪ್ಪಿ ಬಿದ್ದಿದೆ.
ಆದರೆ ಹಿಂದೆ ಬರುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿದ ಐರಾವತ ಬಸ್, ಓರ್ವ ಸವಾರನ ತಲೆ ಹಾಗೂ ಮತ್ತೊಬ್ಬನ ಸೊಂಟದ ಮೇಲೆ ಹರಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ನಂದಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
