ಹರಿಹರ :
ನಗರದ ಹಿರಿಯ ಸಿವಿಲ್ ನ್ಯಾಯಾಲಯ ದಿಂದ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಸುಗಳನ್ನು ನಿಗದಿತ ಸಮಯಕ್ಕೆ ಪರಿಹಾರದ ಹಣ ಪಾವತಿಸದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿದೆ.ಗುರುವಾರದಂದು ನಗರದ ಬಸ್ ನಿಲ್ದಾಣದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದ ಆದೇಶ ಸಂಖ್ಯೆ; 71/2019 ರ ಅನ್ವಯ ನ್ಯಾಯಾಲಯದ ಸಿಬ್ಬಂದಿಗಳು ವಕೀಲ ಬಸವರಾಜ್ ಓಂಕಾರಿ ಯವರ ಸಮಕ್ಷಮದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ ಗಳನ್ನು ಜಪ್ತು ಮಾಡಿದ್ದಾರೆ.
ಹೊಸಪೇಟೆ ವಿಭಾಗಕ್ಕೆ ಸೇರಿದ ಹೊಸಪೇಟೆ ಘಟಕದ ಬಸ್ ಸಂಖ್ಯೆ ಏಂ 35 ಈ 415 ಮತ್ತು ಏಂ 35 ಈ 340 ಯ ಬಸ್ಸುಗಳನ್ನು ರೂ, 2958456/-ಪರಿಹಾರದ ಮೊತ್ತವನ್ನು ನಿಗದಿತ ಸಮಯಕ್ಕೆ ಪಾವತಿಸಲು ತಪ್ಪಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ವಶಕ್ಕೆ ಪಡೆಯಲಾಗಿದೆ.
ನಗರದ ಹಳೆ ಪಿ.ಬಿ.ರಸ್ತೆಯ ಕೀರ್ತಿ ಹೋಟೆಲ್ ಮುಂಭಾಗ ತಾ.18.05.2018 ರಂದು ಅಪಘಾತ ನಡೆದು ಶ್ರೀಪತಿ ಎನ್ನುವವರು ಮರಣ ಹೊಂದಿದ್ದ ಹಿನ್ನೆಲೆಯಲ್ಲಿ ಮೃತರ ಸಂಬಂಧಿಗಳಾದ ಪತ್ನಿ ನಯನಾ, ಮಗಳು ಸನ್ನಿಧಿ ಮತ್ತು ತಾಯಿ ಮೀನಾಕ್ಷಿ ಯವರು ಪ್ರಕರಣವನ್ನು ವಕೀಲ ಬಸವರಾಜ್ ಓಂಕಾರಿ ಅವರ ಮೂಲಕ ದಾಖಲಿಸಿದ್ದರು.
ಪ್ರಕರಣವನ್ನು ಸಂಪೂರ್ಣವಾಗಿ ನ್ಯಾಯಾಲಯ ವು ತಾ.22.04.2019 ರಂದು ರೂ,2958456/-ಗಳನ್ನು ಪರಿಹಾರವನ್ನು ನೀಡಲು ಸಂಬಂಧಿಸಿದ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿತ್ತು.ಆದರೆ ಇದು ವರೆಗೆ ಸಾರಿಗೆ ಸಂಸ್ಥೆಯವರು ಪರಿಹಾರವನ್ನು ಪಾವತಿಸಿದ ಹಿನ್ನೆಲೆಯಲ್ಲಿ ಬಸ್ಸುಗಳನ್ನು ಜಪ್ತು ಮಾಡಲಾಗಿದೆ ಎಂದು ವಕೀಲ ಬಸವರಾಜ್ ಓಂಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಈ ಸಮಯದಲ್ಲಿ ನ್ಯಾಯಾಲಯದ ಅಮೀನರು ಗಳಾದ ಬಸಪ್ಪಾಜಿ, ಸಿದ್ದಬಸವಯ್ಯ,ಮಲ್ಲಿಕಾರ್ಜುನ, ಶಿವಕುಮಾರ್ ಮತ್ತು ಶಿವಬಸು ಮುಂತಾದವರು ಉಪಸ್ಥಿತರಿದ್ದರು.