ಹಾವೇರಿ :
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ ಸಾಧಿಸಿದ ಶಿವಕುಮಾರ ಉದಾಸಿಯವರು ನಗರದ ಹುಕ್ಕೇರಿಮಠಕ್ಕೆ ಭೇಟಿ ನೀಡಿದರು.ಬಿಜೆಪಿ ಪಕ್ಷದ ಅಪಾರ ಜನಸಮೂಹದೊಂದಿಗೆ ಹುಕ್ಕೇರಿಮಠದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆಯಲ್ಲಿ ಪಾಲ್ಗೊಂಡು ಜಯಶಾಲಿಯಾಗಲು ಕಾರಣರಾದ ಮತದಾರ ಪ್ರಭುಗಳಿಗೆ ಕೃತಜ್ಞೆತೆ ಸಲ್ಲಿಸಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ, ಕಟಾಕಿ ಸಿಡಿಸಿ, ಬಣ್ಣ ಹಚ್ಚಿಕೊಂಡ ಸಂಭ್ರವಿಸಿದರು.ವಿಜಯೋತ್ಸವ ಮರೆವಣೆಗೆಯು ಶ್ರೀ ವೀರಭದ್ರೇಶ್ವರ ದೇವಸ್ಥಾನದವರಿಗೆ ಸಂಚರಿತು. ಈ ಸಂದರ್ಭದಲ್ಲಿ ಶಾಸಕ ಬಸವರಜ ಬೊಮ್ಮಾಯಿ.ನೆಹರೂ ಓಲೇಕಾರ.ಸಿದ್ದರಾಜ ಕಲಕೋಟಿ ಸೇರಿದಂತೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.