ಹಾವೇರಿ :
ನಗರದ ಗುತ್ತಲ ರೋಡಿನ ಶಿವಲಿಂಗ ನಗರದ 26-27 ನೇ ವಾಡಿ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಹದಿಗೆಟ್ಟು ಹಾಳಾಗಿ ಹೋಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳು ಹರಸಾಹಸ ಪಟ್ಟು ಸಂಚರಿಸುವ ಪ್ರಮೇಯ ಬಂದೊದಗಿದೆ. ಇಲ್ಲಿಯೇ ಲಾರಿಯೊಂದು ಸಂಚರಿಸುವಾಗ ರಸ್ತೆ ಕುಸಿದು ರಸ್ತೆಯ ಒಳಗೆ ಲಾರಿ ಸಿಕ್ಕಾಕ್ಕಿಕೊಂಡು ಕ್ರೇನ್ ಮೂಲಕ ಎತ್ತಲಾಯಿತು.
ಶಿವಲಿಂಗ ನಗರದ ರಸ್ತೆ ಸರಿ ಪಡಿಸುವಂತೆ ಹಲವಾರು ಬಾರಿ ಪ್ರತಿಭಟನೆ ಕೈಗೊಂಡರೂ ಈವರಿಗೆ ಸರಿಪಡಿಸುವ ಕೆಲಸವಾಗಿಲ್ಲ ಬೇಗನೇ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
