ಕೊಟ್ಟೂರು
ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ರಾಜ್ಯ ಮಾದ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಉಜ್ಜಿನಿ ರುದ್ರಪ್ಪ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಗನ್ಮೂನ ರೆಡ್ಡಿ ಅಧ್ಯಕ್ಷತೆ ನಡೆದ ಸಭೆಯಲ್ಲಿ ಉಜ್ಜಿನಿ ರುದ್ರಪ್ಪ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪತ್ರಕರ್ತ ದೇವರಮನಿ ಸುರೇಶ ಸೂಚನೆಗೆ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ದೇವರಮನಿ ಸುರೇಶ, ಉಪಾಧ್ಯಕ್ಷರಾಗಿ ತೆಗ್ಗಿನಕೆರೆ ಹುಲುಗೇಶ, ಖಜಾಂಚಿಯಾಗಿ ಡಿ. ಸಿದ್ದಪ್ಪ ಅವರನ್ನು ಸದಸ್ಯರು ಆಯ್ಕೆ ಮಾಡಿದರು.ಸಂಘದ ಗೌರವ ಅಧ್ಯಕ್ಷರಾಗಿ ಜಿ. ಸೋಮಶೇಖರ್ ಮುಂದುವರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಉಜ್ಜಿನಿ ರುದ್ರಪ್ಪ, ಪತ್ರಕರ್ತರು ಸದಾ ಅಧ್ಯಯನಶೀಲರಾಗಿರಬೇಕು. ಹೊಸವಿಷಯದ ಬಗ್ಗೆ ಲೇಖನಗಳನ್ನು ಬರೆಯಬೇಕು. ಮುಖ್ಯವಾಗಿ ಪತ್ರಿಕಾಧರ್ಮವನ್ನು ಪಾಲಿಸಬೇಕೆಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯಕಾರಿ ಮಂಡಳಿ ಸದಸ್ಯ ಬಂಗ್ಲಿಮಲ್ಲಿಕಾರ್ಜುನ, ಜ್ಯೋಷಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.ನಂತರ ಪತ್ರಕರ್ತರ ಗುರುತಿನ ಕಾರ್ಡಗಳನ್ನು ಬಂಗ್ಲಿಮಲ್ಲಿಕಾರ್ಜುನ ವಿತರಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ದೇವರಮನಿ ಸುರೇಶ ವಂದಿಸಿದರು.