ಹುಬ್ಬಳ್ಳಿ
ಕಾಂಗ್ರೆಸ್‍ನವರು ವಿನಾಕಾರಣ ಅವರ ಮೇಲೆ ಸಂಶಯ ಪಟ್ಟರು. ಇದರಿಂದ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿದ್ದಾರೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿರುವ ಒಳ ಜಗಳದಿಂದ ಉಮೇಶ್ ಜಾಧವ್ ಇವತ್ತು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನವರು ಅವರಿಗೆ ಸ್ಥಳೀಯವಾಗಿ ಬಹಳಷ್ಟು ಅಗೌರವ ತೋರಿದ್ದಾರೆ. ಅವರು ರಾಜೀನಾಮೆ ನೀಡಿದ ಒಂದು ಗಂಟೆಯ ಒಳಗಡೆಯೇ ರಾಜೀನಾಮೆ ಅಂಗೀಕಾರ ಆಗಬೇಕು. ಸ್ಪೀಕರ್ ರಮೇಶ್‍ಕುಮಾರ್ ತಕ್ಷಣ ಉಮೇಶ್ ಜಾಧವ್‍ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು ಎಂದರು.
ನಮ್ಮ ಪಕ್ಷದ ಸಿದ್ಧಾಂತಗಳು, ತತ್ವಗಳನ್ನ ಒಪ್ಪಿಕೊಂಡು ಯಾವುದೇ ಶಾಸಕರು ಬಂದ್ರು ನಾವು ಅವರಿಗೆ ಸ್ವಾಗತ ನೀಡುತ್ತೇವೆ. ಈ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಗೊಂದಲಗಳಿವೆ. ಒತ್ತಾಯದ ಮದುವೆ ಮಾಡಿಕೊಂಡು ಈಗ ಸರಿಯಾದ ಸಂಸಾರ ನಡೆಯುತ್ತಿಲ್ಲ. ಇದರಿಂದ ಅನೇಕ ಶಾಸಕರು ಬೇಸರಗೊಂಡಿದ್ದಾರೆ. ಈಗ ಒಬ್ಬ ಒಬ್ಬೊಬರೇ ಶಾಸಕರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದರು.
ಸುಮಲತಾ ಅವರು ಕಾಂಗ್ರೆಸ್‍ನಿಂದ ಟಿಕೆಟ್ ಬೇಕು ಎನ್ನುತ್ತಿದ್ದಾರೆ.ನಾವು ಅವರನ್ನ ಪಕ್ಷಕ್ಕೆ ಕರೆದುಕೊಂಡು ಬರುವುದಿಲ್ಲ.ಒಂದು ವೇಳೆ ಸುಮಲತಾ ಅವರು ತಾವಾಗಿಯೇ ಬಿಜೆಪಿಗೆ ಬರ್ತೀನಿ ಅಂದ್ರೆ ನಾವು ಅವರನ್ನ ಸ್ವಾಗತ ಮಾಡುತ್ತೇವೆ ಎಂದರು.