ತಾ.ಪಂ.ಅಧ್ಯಕ್ಷರಾಗಿ ಕೆ.ಶಾರದಮ್ಮ ಅವಿರೋಧ ಆಯ್ಕೆ

ಹೂವಿನಹಡಗಲಿ:

     ಸೋಗಿ ಹಾಲಪ್ಪ ಇವರ ರಾಜೀನಾಮೆಯಿಂದ ತೆರವುಗೊಂಡಿದ್ದ ತಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಹಿರೇಹಡಗಲಿ ತಾ.ಪಂ.ಕ್ಷೇತ್ರದ ಸದಸ್ಯರಾದ ಕೆ.ಶಾರದಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ ಎಂದು ಹೊಸಪೇಟೆ ಸಹಾಯಕ ಆಯುಕ್ತರಾದ ಲೋಕೇಶರವರು ಘೋಷಿಸಿದರು.

      ಅದೇ ರೀತಿ ಕಣವಿ ಹೊನ್ನಪ್ಪನವರ ನಿಧನದಿಂದ ಖಾಲಿ ಉಳಿದಿದ್ದ ಉಪಾಧ್ಯಕ್ಷ ಸ್ಥಾನಕ್ಕೂ ಕೂಡಾ ಚುನಾವಣೆ ನಡೆದು ಬನ್ನಿಮಟ್ಟಿ ತಾ.ಪಂ.ಕ್ಷೇತ್ರದ ಪುಷ್ಪಾವತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಕೂಡಾ ಅವಿರೋಧವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಲಾಯಿತು.

      ನೂತನ ತಾ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸಹಾಯಕ ಆಯುಕ್ತರಾದ ಲೋಕೇಶ, ತಹಶೀಲ್ದಾರ ಕೆ.ರಾಘವೇಂದ್ರರಾವ್, ಇ.ಓ. ಸೋಮಶೇಖರ್, ಸದಸ್ಯರಾದ ಕೆ.ವೀರಣ್ಣ, ಜೆ.ಶಿವರಾಜ, ನಿಕಟ ಪೂರ್ವ ಅಧ್ಯಕ್ಷ ಎಸ್.ಹಾಲೇಶ, ಶಾರದಮ್ಮ, ನಾರಾಯಣಸ್ವಾಮಿ ,ಶ್ವೇತಾಬಾಯಿ, ಕಾಂಗ್ರೇಸ್ ಜಿಲ್ಲಾ ಉಪಾಧ್ಯಕ್ಷ ವಾರದ ಗೌಸ್‍ಮೊಹಿದ್ದೀನ್, ಬ್ಲಾಕ್ ಅಧ್ಯಕ್ಷ ಐಗೋಳ್ ಚಿದಾನಂದ, ಮುಖಂಡರಾದ ಅಟವಾಳಗಿ ಕೊಟ್ರೇಶ, ಜ್ಯೋತಿ ಮಲ್ಲಣ್ಣ, ಕೆ.ಪತ್ರೇಶ, ಜಿ.ವಸಂತ, ಗುಂಡಿ ಚರಣ್, ಶಿವಯೋಗಿ, ಈಡಿಗರ ಗುರುಮೂರ್ತಿ, ಸೊಪ್ಪಿನ ಪ್ರಕಾಶ್, ಬ್ಯಾಲಹುಣ್ಸಿ ಬಸವನಗೌಡ, ಸೇರಿದಂತೆ ಹಲವರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link