ಚಿತ್ರದುರ್ಗ
ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷರ ಆಯ್ಕೆಗೆ ಏಪ್ರಿಲ್ 25 ರಂದು ನಡೆದ ಚುನಾವಣೆಯಲ್ಲಿ ಆರ್.ರಾಮರೆಡ್ಡಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಯ ರಿಟರ್ನಿಂಗ್ ಆಫೀಸರ್ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಯೂನಿಯನ್ ಉಪಾಧ್ಯಕ್ಷ ಕೆ.ಸಿ.ಸಿದ್ದಪ್ಪ, ಮಾಜಿ ಅಧ್ಯಕ್ಷ ಜಿಂಕಲು ಬಸವರಾಜ್, ಮಾಜಿ ಉಪಾದ್ಯಕ್ಷ ಎಸ್.ಪರಮೇಶ್, ನಿರ್ದೇಶಕರುಗಳಾದ ಕೆ.ಜೆ.ಶ್ರೀಧರ್, ಹೆಚ್.ಆಂಜನೇಯ, ಬಿ.ಕರಿಯಪ್ಪ, ಜಿ.ರಂಗಸ್ವಾಮಿ, ಎಂ.ಭಾರತಿ, ಸಹಕಾರ ಸಂಘಗಳ ಉಪನಿಬಂಧಕರು, ಯೂನಿಯನ್ ಸಿಬ್ಬಂದಿಗಳು ಹಾಜರಿದ್ದರು.