ವಿಶ್ವ ವಿದ್ಯಾಲಯಗಳು ಜ್ಞಾನ ದೇಗುಲಗಳಿದಂತೆ : ಎಸ್ ನಾಗಣ್ಣ

ತುಮಕೂರು

     ಕಲಿಸುವ ಮತ್ತು ಕಲಿಯುವ ಇಬ್ಬರಲ್ಲೂ ಉತ್ಸುಕತೆ ಇದ್ದರೆ ಕಲಿಕೆ ಸಾರ್ಥಕವಾಗುತ್ತದೆ. ಸಂಶೋಧಕನಿಗೆ ಅತ್ಯಂತ ನಿರಂತರ ಪರಿಶ್ರಮ ಬಹಳ ಮುಖ್ಯವಾಗುತ್ತದೆ. ಜೀವನದಲ್ಲಿ ಕಷ್ಟ ಪಟ್ಟರೆ, ಕಠಿಣ ಪರಿಶ್ರಮವಿದ್ದರೆ ಸಂಶೋಧನೆ ಯಶಸ್ಸಾಗುತ್ತದೆ ಎಂದು ರಾಮಕೃಷ್ಣ ಮಠಾಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿ ತಿಳಿಸಿದರು.

     ವಿಶ್ವವಿದ್ಯಾನಿಲಯದ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಿದ್ದ 21ನೇ ಶತಮಾನದ ಭಾರತ: ಸಂಶೋಧನಾ ಜ್ಞಾನದ ಅಗತ್ಯತೆ ಎಂಬ ವಿಚಾರ ಸಂಕಿರಣ ಹಾಗೂ ಕುಲಪತಿ ಪ್ರೊ.ವೈ.ಎಸ್ ಸಿದ್ದೇಗೌಡರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿ ನನಗೆ ಹೋಮ್ ಗ್ರೌಂಡ್ ಇದ್ದಂತೆ, ನನಗೆ ತಿಳಿದಷ್ಟು ವಿಚಾರಗಳನ್ನು ಮಕ್ಕಳಿಗೆ ತಿಳಿಸಲು ಸಂತೋಷವಾಗುತ್ತದೆ ಎಂದ ಅವರು, ಇತ್ತೀಚಿನ ದಿನಮಾನಗಳಲ್ಲಿ ಸಂಶೋಧನ ವಿದ್ಯಾರ್ಥಿಗಳಲ್ಲಿ ವಧು ಮತ್ತು ವರರ ಸಂಶೋಧನೆ ಹೆಚ್ಚಾಗಿದೆ. ಇದು ಸಂಶೋಧನೆಯ ದಾರಿಯಲ್ಲ ಎಂದು ವಿಷಾದಿಸಿದರು.

     ಕಲಿಕೆಯಲ್ಲಿ ನಿಖರತೆ ಇರಬೇಕು ವಿವೇಕವಾಣಿಯನ್ನು ಪುನಃ ಉಚ್ಛರಿಸಿದ ಅವರು ಇಂದು ವಿದ್ಯಾರ್ಥಿಗಳಲ್ಲಿ ನಿಖರತೆ ಕಳೆಗುಂದುತ್ತಿದೆ. ಮಕ್ಕಳು ಕ್ರಿಯಾಶೀಲತೆ ಹಾಗೂ ಉತ್ಸಾಹ ಬೆಳೆಸಿಕೊಂಡಾಗ ಮಾತ್ರ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವಾಗುತ್ತದೆ. ಜೀವನದಲ್ಲಿ ಅಚಲವಾದ ವಿಶ್ವಾಸವನ್ನು ಹೊಂದಿ ನಿರಂತರ ಪರಿಶ್ರಮದಿಂದ ಯಶಸ್ಸು ಗಳಿಸಿಕೊಳ್ಳಬೇಕು. ಅನ್ಯ ಮಾತ್ರಗಳಲ್ಲಿ ಪದವಿ ಹಾಗೂ ಪ್ರಶಸ್ತಿ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಮಾರು ಹೋಗದೆ ಕಠಿಣ ಪರಿಶ್ರಮವಂತರಾಗಿ ಎಂದರು.

    ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್ ನಾಗಣ್ಣ ಮಾತನಾಡಿ, ವಿವಿಗಳು ಜ್ಞಾನ ದೇಗುಲಗಳಂತೆ, ಇಂತಹ ವಿವಿಗಳ ಘನತೆ ಎತ್ತಿ ಹಿಡಿಯಬೇಕಾದರೆ ಬೋಧಕ ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ವವಾದದು. ನಗರದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗಿಂತ ಹಳ್ಳಿಯ ಮಕ್ಕಳು ಹೆಚ್ಚು ತಿಳಿದುಕೊಂಡಿರುತ್ತಾರೆ ಎಂದ ಅವರು ಕುಲಪತಿಗಳ ಕುರಿತು ಮಾತನಾಡುತ್ತಾ ವಿವಿಗೆ ಹೊಸತನವನ್ನು ಕಟ್ಟಿಕೊಟ್ಟ ಕುಲಪತಿ ಇವರು, ವಿವಿಯ ಸರ್ವತೋಮುಖ ಬೆಳವಣಿಗೆಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮುಗಿಸಿಕೊಂಡು ಬಂದಿದ್ದಾರೆ. ಮಾತಿನ ಮೌಲ್ಯತೆ ಹಾಗೂ ಸದೃಢತೆ ಅವರಲ್ಲಿ ಹೆಚ್ಚಿದ್ದು, ನೇರ, ನಿಷ್ಠೂರ ವ್ಯಕ್ತಿತ್ವ ಅವರದು ಎಂದರು.

     ಗ್ರಾಮೀಣ ಸೊಗಡಿರುವ ವ್ಯಕ್ತಿ ನಮ್ಮ ಕುಲಪತಿಗಳಲ್ಲಿ ವಿಷಯಾಧಾರಿತ ಮಾತುಗಳೇ ಹೆಚ್ಚು. ತಮ್ಮ ಕಾರ್ಯ ಚಟುವಟಿಕೆಯಲ್ಲಿ ಇತರರನ್ನು ಒಳಗೂಡಿಸಿಕೊಳ್ಳುವ ವಿಶಾಲತೆ ಅವರಲ್ಲಿದ್ದು, ಯೋಜನೆಯ ಒಟ್ಟಾರೆ ಮೌಲ್ಯಮಾಪನವನ್ನು ಕಂಡುಕೊಳ್ಳುವ ವ್ಯಕ್ತತ್ವ ಸ್ಟಷ್ಟತೆ ಅವರಲ್ಲಿದೆ ಎಂದರು.

       ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಂ.ಎನ್ ಚನ್ನಬಸಪ್ಪ ಮಾತನಾಡಿ, ಸಂಶೋಧನಾ ಲೇಖನಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ತಂದು ಹೇಳುವ ಮತ್ತು ತಿಳಿದಿರುವ ವಿಷಯಗಳನ್ನು ಒಟ್ಟುಗೂಡಿಸಿ ವಿದ್ಯೆಯನ್ನು ತಿಳಿಸುವುದು ಕಷ್ಟವಾದರೂ ವಿವಿ ಆ ಕೆಲಸವನ್ನು ಮಾಡಿದೆ. ಸಂಶೋಧಕ ಸಿ.ಎನ್‍ಆರ್ ರಾವ್ ಅವರು ಈ ವಿವಿಯ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿ ಸಂಶೋಧನಾ ಉಪಕರಣಗಳನ್ನು ನೀಡಿರುವುದು ಗಣನೀಯ ಅಂಶ, ಅವುಗಳನ್ನು ಬಳಸಿಕೊಂಡು ಸಂಶೋಧನೆಯಲ್ಲಿ ಸೂಕ್ಷ್ಮತೆಗಳನ್ನು ಅರಿಯಬೇಕಾಗಿದೆ ಎಂದ ಅವರು, ವಿವಿಯ ಉಪಕರಣಗಳು ನಮ್ಮ ಸಂಸ್ಥೆಗೂ ಅನಿವಾರ್ಯವಾಗಿದ್ದು ಅವುಗಳ ಸಹಕಾರವಾಗಿದೆ ಎಂದರು.

       ವಿವಿ ಕುಲಪತಿ ವೈ.ಎಸ್ ಸಿದ್ದೇಗೌಡ ಮಾತನಾಡಿ, ಮಾಡುವ ಕೆಲಸಗಳು ಬಹಳಷ್ಟಿವೆ, ಹೇಳಿಕೊಳ್ಳುವಷ್ಟು ಸಾಧನೆ ತನ್ನದಲ್ಲದಿದ್ದರೂ ಸನ್ಮಾನಗಳು ದೊಡ್ಡ ಜವಾಬ್ದಾರಿಯನ್ನು ಹೊರಿಸುತ್ತದೆ. ಜೀವನ ಅಂದಕೊಂಡಷ್ಟು ಸುಲಭವೂ ಅಲ್ಲ, ಹಗುರವೂ ಅಲ್ಲ. ವಿದ್ಯಾರ್ಥಿಗಳಿಗೆ ದಾರಿ ತೋರಿದರೆ ಅವರ ಜೀವನ ಯಶಸ್ಸಿನ ನಾಗಾಲೋಟದಲ್ಲಿ ಸಾಗುತ್ತದೆ ಎಂದರು.
ಇಡೀ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಸಾಧನ ವಿಶ್ವವಿದ್ಯಾನಿಲಯಗಳು. ನಾವು ಸನ್ಮಾರ್ಗವಾಗಿ ನಡೆಯದಿದ್ದರೆ ನಮ್ಮ ಇತಿಹಾಸ ನಮ್ಮನ್ನು ಬಿಡದೇ ಕಾಡುತ್ತದೆ. ಇವತ್ತಿನ ಸಮಾಜದಲ್ಲಿ ಗಿಮಿಕ್‍ಗಳು ನಡೆಯುವುದಿಲ್ಲ. ನೇರ ಹಾಗೂ ಸ್ಪಷ್ಟತೆ ಮಾತ್ರ ಜೀವನವನ್ನು ಬೆಳಗಲು ಸಾಧ್ಯ. ವಿದ್ಯಾರ್ಥಿಗಳು ಒಳ್ಳೆಯ ಸಂಶೋಧಕರಾಗಬೇಕಾದರೆ ನೇರ ನಿಖರತೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

     ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಹಣಕಾಸು ಅಧಿಕಾರಿಗಳಾದ ಪ್ರೊ.ಪಿ ಪರಮಶಿವಯ್ಯ, ಐಕ್ಯೂಎಸಿ ನಿರ್ದೇಶಕ ಪ್ರೊ ಪರಶುರಾಮ, ಪ್ರಾಧ್ಯಾಪಕ ಪ್ರೊ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

      ಕಲಿಕೆಯಲ್ಲಿ ನಿಖರತೆ ಇರಬೇಕು ವಿವೇಕವಾಣಿಯನ್ನು ಪುನಃ ಉಚ್ಛರಿಸಿದ ಅವರು ಇಂದು ವಿದ್ಯಾರ್ಥಿಗಳಲ್ಲಿ ನಿಖರತೆ ಕಳೆಗುಂದುತ್ತಿದೆ. ಮಕ್ಕಳು ಕ್ರಿಯಾಶೀಲತೆ ಹಾಗೂ ಉತ್ಸಾಹ ಬೆಳೆಸಿಕೊಂಡಾಗ ಮಾತ್ರ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವಾಗುತ್ತದೆ. ಜೀವನದಲ್ಲಿ ಅಚಲವಾದ ವಿಶ್ವಾಸವನ್ನು ಹೊಂದಿ ನಿರಂತರ ಪರಿಶ್ರಮದಿಂದ ಯಶಸ್ಸು ಗಳಿಸಿಕೊಳ್ಳಬೇಕು. ಅನ್ಯ ಮಾತ್ರಗಳಲ್ಲಿ ಪದವಿ ಹಾಗೂ ಪ್ರಶಸ್ತಿ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಮಾರು ಹೋಗದೆ ಕಠಿಣ ಪರಿಶ್ರಮವಂತರಾಗಿ.

 ಸ್ವಾಮಿ ವೀರೇಶಾನಂದ ಸರಸ್ವತಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap