ಭದ್ರಾ ಮೇಲ್ದಂಡೆಯೋಜನೆ; ಭೂ ಸ್ವಾಧೀನಕ್ಕೆ ಸಾರ್ವಜನಿಕ ಕುಂದುಕೊರತೆ ಸಭೆ

ಚಿತ್ರದುರ್ಗ

       ಭದ್ರಾ ಮೇಲ್ದಂಡೆಯೋಜನೆಯಡಿಚಿತ್ರದುರ್ಗ ಶಾಖಾ ಕಾಲುವೆಯಕಾಮಗಾರಿ ನಡೆಯುತ್ತಿದ್ದು ಪ್ಯಾಕೇಜ್ 8 ರಡಿ ಬರುವ ದೊಡ್ಡಕಿಟ್ಟದಹಳ್ಳಿಯಿಂದ ಕೆಂಚೀನಹಳ್ಳಿಯವರೆಗೆ ಕಾಲುವೆ ಕಾಮಗಾರಿಗೆ ಬೇಕಾದ ಭೂ ಸ್ವಾಧೀನಕ್ಕೆಇತ್ತೀಚೆಗೆ ದೊಡ್ಡಕಿಟ್ಟದಹಳ್ಳಿಯ ಆಂಜನೇಯಸ್ವಾಮಿದೇವಸ್ಥಾನದ ಬಳಿ ಭೂ ಸ್ವಾಧೀನಕಾಯಿದೆಯಡಿಪುನರ್ ವಸತಿ ಹಾಗೂ ಪುನರ್ ವ್ಯವಸ್ಥೆಕಲ್ಪಿಸಲು ಸಾರ್ವಜನಿಕಕುಂದುಕೊರತೆ ಸಭೆಯನ್ನುಅಪರಜಿಲ್ಲಾಧಿಕಾರಿ ಸಂಗಪ್ಪನವರಅಧ್ಯಕ್ಷತೆಯಲ್ಲಿ ನಡೆಯಿತು.

      ದೊಡ್ಡಕಿಟ್ಟದಹಳ್ಳಿಯಿಂದ ಕೆಂಚೀಹಳ್ಳಿಯವರೆಗೆ 4 ಕಿ.ಮೀ ವರೆಗಿನ ಕಾಲುವೆ ನಿರ್ಮಾಣ ಮಾಡಲುಭೂ ಸ್ವಾಧೀನ ಕೈಗೊಳ್ಳ ಬೇಕಾಗಿರುವುದರಿಂದ ಜಮೀನಿನ ಮಾಲಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಈ ವೇಳೆ ನೀರಾವರಿ ಸೌಲಭ್ಯಕ್ಕಾಗಿಜಮೀನು ನೀಡುತ್ತಿದ್ದು ಪರಿಹಾರವನ್ನು ಸೂಕ್ತ ರೀತಿಯಲ್ಲಿ ನೀಡಬೇಕುಎಂದುರೈತರು ಮನವಿ ಮಾಡಿದರು.ನಿಯಮಾವಳಿ ರೀತ್ಯ ಭೂ ಸ್ವಾಧೀನ ಮಾಡುವಾಗರೈತರಿಗೆ ನೀಡಬೇಕಾದ ಪರಿಹಾರವನ್ನುಒದಗಿಸಲಾಗುತ್ತದೆಎಂದುಅಪರಜಿಲ್ಲಾಧಿಕಾರಿಯವರು ತಿಳಿಸಿದರು.

     ಸಭೆಯಲ್ಲಿ ಹೊಸದುರ್ಗ ತಹಶೀಲ್ದಾರ್ ಕವಿರಾಜ್, ವಿಶೇಷ ಭೂಸ್ವಾಧೀನಾಧಿಕಾರಿ ಶ್ರೀಧರ್, ಹಿರಿಯೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶಿವಕುಮಾರ್, ಸಹಾಯಕಕಾರ್ಯಪಾಲಕಇಂಜಿನಿಯರ್ ಬಸವರಾಜ್, ಗ್ರಾಮ ಪಂಚಾಯಿತಿಅಧ್ಯಕ್ಷೆಕರಿಯಮ್ಮ ಹಾಗೂ ಪಂಚಾಯಿತಿ ಸದಸ್ಯರು, ಗ್ರಾಮ ಮುಖಂಡರು, ರೈತರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap