ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಆಸಕ್ತಿ ಹೆಚ್ಚಿಸಬೇಕು;ಹೆಗಡೆ

ಚಿತ್ರದುರ್ಗ;
    ವಿಜ್ಞಾನವನ್ನು ಮಾಡಿ ಕಲಿಯಬೇಕು ಎಂದು ಚಳ್ಳಕೆರೆ ಪ್ರತಿಭಾ ಅಭಿವೃದ್ಧಿ ಕೇಂದ್ರ, ಐಐಎಸ್ಸಿ ಸಂಚಾಲಕರಾದ ಪ್ರೊ.ಎಂ.ಎಸ್. ಹೆಗಡೆ ತಿಳಿಸಿದರು. ನಗರದ ತ.ರಾ.ಸು. ರಂಗಮಂದಿರದಲ್ಲಿ ಎಸ್.ಜೆ.ಎಸ್. 4ನೇ ಜ್ಞಾನ ಸಂಭ್ರಮದ ಅಂಗವಾಗಿ ಜೀವನದಲ್ಲಿ ಶಿಕ್ಷಣದ ಮಹತ್ವ ಎಂಬ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
 
    ಅನೇಕ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಿ ಅಗತ್ಯವಿರುವ ಪರಿಕರಗಳನ್ನು ಕಂಡು ಹಿಡಿಯಲಾಗಿದೆ. ಮಕ್ಕಳು ವಿಜ್ಞಾನ ಕಲಿಕೆಯಲ್ಲಿ ಪರಿಕರಗಳ ಬಳಕೆಯನ್ನು ಬಳಸಿಕೊಳ್ಳಬೇಕು. ವಿಜ್ಞಾನ ಮತ್ತು ಗಣಿತ ಬೋಧನೆ ಮಾಡುವವರಿಗೆ 10,000 ಕ್ಕಿಂತ ಹೆಚ್ಚು ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು. 
    ಒಳ್ಳೆಯ ಶಿಕ್ಷಕರಿಂದ ಒಳ್ಳೆಯ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಕರನ್ನು ಅವರ ಬೋಧನಾ ವಿಧಾನವನ್ನು ಅರಿತು ತರಬೇತಿಗೊಳಿಸುವ ಕಾರ್ಯ ನಡೆಯುತ್ತಿದ್ದು, ಅಗತ್ಯ ಇದ್ದ ಕಡೆ ನಾವು ಹೋಗಿ ಶಾಲೆಯಲ್ಲಿರುವ ಪರಿಸ್ಥಿತಿಯನ್ನು ಪರಿಶೀಲಿಸ ಅಗತ್ಯ ರೀತಿಯ ತರಬೇತಿಯನ್ನು ನೀಡಿದ್ದೇವೆ ಎಂದು ತಿಳಿಸಿದರು. 
   2019ರ ಬೆಸ್ಟ್ ಕರ್ನಾಟಕ ವಾಗ್ಮಿ ಪ್ರಶಸ್ತಿ ವಿಜೇತೆ, ಬೇಸ್ಟ್ ಸ್ವೀಕರ್ ಕುಮಾರಿ ಮೇಘನಾ ಮಾತನಾಡಿ, ಮಕ್ಕಳು ಟಿ.ವಿ. ಮೊಬೈಲ್, ಲಾಬ್‍ಟ್ಯಾಪ್‍ನ್ನು ಹೆಚ್ಚು ಅವಲಂಭಿಸಿಕೊಂಡಿದ್ದಾರೆ. ಇದನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಮಾನವೀಯ ಗುಣ, ಹಿರಿಯರಿಗೆ ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.
    ವಿದ್ಯಾರ್ಥಿಗಳಲ್ಲಿ ಈ ರೀತಿಯ ಮನೋಭಾವನೆಯ ಕೊರತೆ ಉಂಟಾಗಿದೆ. ಜೀವನ ಹೇಗೆ ನಡೆಸಬೇಕೆಂಬುದನ್ನು ಗುರುಗಳು ಕಲಿಸಿದ್ದಾರೆ. ಮಾನವೀಯ ಮೌಲ್ಯ, ಸಂಪ್ರಾದಯವನ್ನು ಪೋಷಕರು ಕಲಿಸಬೇಕು. ಕೇಳುವ ಮನೋಭಾವವನ್ನು ಯಾರು ಬಳಸಿಕೊಳ್ಳುತ್ತಾರೋ, ಯಾರು ತಾಳ್ಮೆ ಗುಣ ಬೆಳಸಿಕೊಳ್ಳುತ್ತಾರೋ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯವೆಂದು ತಿಳಿಸಿದರು. 
    ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ಮಕ್ಕಳು, ಹೊಸ ಹೊಸ ಪದ್ಧತಿಗಳನ್ನು, ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣವನ್ನು ಹೆಚ್ಚು ಹೆಚ್ಚು ಕಲಿಯುವುದರೊಂದಿಗೆ ಪರಿಸರ ಸೇರಿದಂತೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನ್ನು ಪೋಷಿಸುವ ಮತ್ತು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಾಗ ಭವಿಷ್ಯದಲ್ಲಿ ಏನಾನ್ನದಾರೂ ಸಾಧಿಸುವ ಚಲ ಬೆಳೆಯುತ್ತದೆ.  ಶಿಕ್ಷಣ ಅಭ್ಯಾಸಿಗನ ಸೊತ್ತೆ ವಿನಃ ಸೋಮಾರಿ ಸೊತ್ತಲ್ಲ ಎಂದು ತಿಳಿಸಿದರು. ವೇದಿಕೆಯಲ್ಲಿ ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ, ಎಸ್.ಜೆ.ಎಸ್. ಜ್ಞಾನಪೀಠದ ನಿರ್ದೇಶಕರಾದ ನೇರ್ಲಕುಂಟೆ ರಾಮಪ್ಪ, ಪ್ರಾಂಶುಪಾಲರಾದ ಕನಕದಾಸ್, ರಾಘವೇಂದ್ರ, ದಿನೇಶ್ ಉಪಸ್ಥಿತರಿದ್ದರು. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link