ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹ

ಬಳ್ಳಾರಿ:

     ಕೇಂದ್ರ, ರಾಜ್ಯ ಸರ್ಕಾರಗಳು ಕಳೆದ ಜೂನ್ ತಿಂಗಳಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ಭೂ ಸುಧಾರಣೆ, ಎಪಿಎಂಸಿ, ವಿದ್ಯುತ್ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕ ಸಂಘಟನೆಯು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

    ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳ ರೈತರು, ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ನಂತರ ರೈತ ವಿರೋಧಿ ಕಾಯ್ದೆಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಒಂದುದೇಶ, ಒಂದು ಮಾರುಕಟ್ಟೆ’ ಘೋಷಣೆಯಡಿ ರೈತರಿಗೆ ‘ಆಜಾದಿ’ ಮತ್ತು ‘ರಕ್ಷಾಕವಚ್’ ನೀಡುತ್ತೇವೆ ಎಂಬುದು ಕೇಂದ್ರ ಸರ್ಕಾರದ ಕೇವಲ ಘೋಷಣೆಗಳಾಗಿವೆ.

     ರೈತರ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದ ಪ್ರತಿಭಟನಾನಿರತರು ಕೊರೊನಾ ಲಾಕ್‍ಡೌನ್‍ನಲ್ಲಿ ಹಿಂದೆಂದೂ ಕಾಣದಂತಹ ಕೆಟ್ಟ ಪರಿಸ್ಥಿತಿಯಲ್ಲಿ ರೈತರು ಮತ್ತು ನೊಂದ ಜನರು ಕಂಗೆಟ್ಟಿರುವಾಗ, ಕುಟಿಲ ತಂತ್ರದ ಸುಗ್ರೀವಾಜ್ಞೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸುವ ವಿಧಿವಿಧಾನಗಳನ್ನು ಪೂರೈಸಿ ಕಾನೂನಿನ ರೂಪುಕೊಡಲಾಗಿದೆ. ಇದಕ್ಕೆ ರಾಷ್ಟ್ರಪತಿಗಳು ಸಹ ಅಂಕಿತ ಪಡೆಯಲಾಗಿದೆ; ಈ ಹೀನ ನಡೆಯನ್ನು ಆಲ್ ಇಂಡಿಯಾ ಕಿಸಾನ್ ಖೆತ್ ಮಜ್ದೂರ್ ಸಂಘಟನೆ-ಕರ್ನಾಟಕ, ರೈತ-ಕೃಷಿಕಾರ್ಮಿಕರ ಸಮಘಟನೆ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

   ಕಾರ್ಪೋರೇಟ್ ಕಂಪನಿಗಳಿಂದ ಬೆಳೆಯನ್ನು ಖರೀದಿ ಮಾಡಿದ ಕೂಡಲೇ ಮೊದಲು ಸಾಲ ಮತ್ತು ಇತರ ಸೇವೆಗಳ ಖರ್ಚನ್ನು ಜಮಾ ಮಾಡಿಕೊಳ್ಳಲಾಗುತ್ತದೆ. ರೈತನ ಕೈಗೆ ಎಷ್ಟು ಬರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ನ್ಯಾಯಾಲದ ಮೊರೆ ಹೋಗುವುದಕ್ಕೂ ನಿಷೇಧವಿದೆ. ಇಂಡಿಗೊ ಬೆಳೆ ಬೆಳೆಯಲು ಬ್ರಿಟೀಷರು ಉಪಯೋಗಿಸಿದ ದಮನ ಕಾರಿ ರೀತಿಯ ಬದಲಿಗೆ ಒಪ್ಪಂದ ಕೃಷಿ ಪದ್ಧತಿಯಡಿ ಬಹಳ ಸುಲಭವಾಗಿ ಮಾಡುತ್ತಾರೆ.

     ಒಂದುಕಡೆ, ಎರಡು, ಎರಡೂವರೆ ಎಕರೆಯ ಸಣ್ಣ ರೈತರಿದ್ದರೆ, ಇನ್ನೊಂದೆಡೆ ಈ ರಾಕ್ಷಸ ಕಂಪೆನಿಗಳಿರುತ್ತವೆ. ಅವರಿಗೆ ಯಾವುದೇ ನಿಬರ್ಂಧಗಳಿರುವುದಿಲ್ಲ, ಬದಲಿಗೆ ಸರ್ಕಾರಿ ಕಾನೂನುಗಳ ಬಲ ಅವರಿಗಿರುತ್ತದೆ. ಸಣ್ಣರೈತರು ಕ್ರಮೇಣವಾಗಿ ಕಂಪೆನಿಗಳ ಕಪಿ ಮುಷ್ಠಿಗೆ ಸಿಕ್ಕಿಕೊಳ್ಳುತ್ತಾರೆ. ಇಲ್ಲಿಯವರೆಗಿನ ಅನುಭವಗಳು ಇದನ್ನೇ ಹೇಳುತ್ತವೆ ಅದಕ್ಕಾಗಿ ಕಾಯ್ದೆಗಳ ತಿದ್ದುಪಡಿ ನಿರ್ಧಾರವನ್ನು ಹಿಂತೆಗೆದುಕೊಂಡು, ರಾಕ್ಷಸ ಕಂಪನಿಗಳ ಹಿಡಿತವಿರುವ ಶೋಷಕ ವ್ಯವಸ್ಥೆಯಿಂದ ರಕ್ಷಣೆ ನೀಡಲು ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ರೈತಪರ, ಜನಪರವಾದ ನೀತಿಗಳನ್ನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

     ಪ್ರತಿಭಟನೆಯಲ್ಲಿ ಆರ್‍ಕೆಎಸ್ ಸಂಘಟನೆಯ ಮುಖಂಡರಾದ ಕೆ.ಬಸಣ್ಣ, ಎ.ಪಂಪಾಪತಿ, ರೈತ ಮುಖಂಡರಾದ ಶೇಖಣ್ಣ, ರಾಮಪ್ಪ, ದುರ್ಗೇಶ, ಮೆಹಬೂಬ್ ಬಾಷಾ, ಶೇಕ್ಷಾವಲಿ, ಪ್ರಕಾಶ್, ರವಿಚಂದ್ರ, ದೊಡ್ಡಬಸಪ್ಪ, ಶಂಕ್ರಮ್ಮ, ಲಿಂಗಮ್ಮ, ಯಂಕಪ್ಪ, ತಿಪ್ಪೇಸ್ವಾಮಿ, ವೀರೇಶ್, ಆನಂದ್ ಸೇರಿದಂತೆ ವಿವಿಧ ಗ್ರಾಮಗಳ ಹಲವಾರು ರೈತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link