ಮಧುಗಿರಿ:
ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಆಕಸ್ಮಿಕವಾಗಿ ರಸ್ತೆಯಲ್ಲಿ ಉರುಳಿ ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭಂವಿಸಿಲ್ಲ.
ತಾಲ್ಲೂಕಿನ ಕೋಡಿಗೇನಹಳ್ಳಿ ಹೋಬಳಿಯ ಯಾಕ್ಲಾರಹಳ್ಳಿ- ಕಡಗತ್ತೂರು ಸಮೀಪ ಘಟನೆ ನಡೆದಿದ್ದು ಗೌರಿಬಿದನೂರಿನಿಂದ-ಹಿಂದೂಪುರಕ್ಕೆ ಹೋಗುತ್ತಿದ್ದಾಗ ಮಾರ್ಗ ಬದಲಾಗಿ ಆಕಸ್ಮಿಕವಾಗಿ ರಸ್ತೆಯಲ್ಲಿಯೇ ಟ್ಯಾಂಕರ್ ಉರುಳಿದೆ ಎನ್ನಲಾಗುತ್ತಿದೆ.
ಸುಮಾರು ಒಂದು ಸಾವಿರ ಲೀಟರ್ ನಷ್ಟು ಪೆಟ್ರೋಲ್ ಟ್ಯಾಂಕರ್ ನಲ್ಲಿದ್ದು ನಂತರ ಸ್ಥಳೀಯ ಗ್ರಾಪಂ ಹಾಗೂ ಆಗ್ನಿಶಾಮಕ ದಳ ಮತ್ತು ಸ್ಥಳೀಯ ಪೋಲೀಸರ ನೆರವಿನಿಂದ ಜೆಸಿಬಿ ಬಳಸಿ ಟ್ಯಾಂಕರ್‍ನ್ನು ರಸ್ತೆಯಿಂದ ಮೇಲಕ್ಕೇತ್ತಲಾಗಿದೆ. ಆದರೆ ಗ್ರಾಮಸ್ಥರು ಎಂದಿನಂತೆ ಸುಮಾರು 200-300 ಲೀಟರ್ ನಷ್ಟು ಪ್ರೆಟೋಲ್‍ನ್ನು ಘಟನಾ ಸ್ಥಳದಿಂದ ತುಂಬಿಕೊಂಡು ಹೋಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಕೋಡಿಗೇನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.