ಬಳ್ಳಾರಿ:
ಸಿರುಗುಪ್ಪ ಕಾನೂನು ಸೇವಾ ಸಮಿತಿ, ತಾಲೂಕಿ ವಕೀಲರ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡವಿ ಗ್ರಾಪಂ ಆವರಣದಲ್ಲಿ ಕಾನೂನು ಸಾಕ್ಷರತಾ ರಥ ಭಾನುವಾರ ಆಯೋಜಿಸಲಾಗಿತ್ತು.
ಈ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾ.ಎಸ್.ಬಿ.ಹಂದ್ರಾಳ್ ಅವರು ಪ್ರತಿಯೊಬ್ಬ ಪ್ರಜೆ ಕಾನೂನು ಅರಿವು ಹಾಗೂ ರಕ್ಞಣೆ ಪಡೆಯಲು ಅರ್ಹರಿತ್ತಾರೆ. ಇದರಿಂದ ವಚಿಂತರಾಗದೆ ಉಚಿತ ಕಾನೂನು ಸೇವೆ ಪಡೆಯಬೇಕೆಂದು ಹೇಳಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಬಾಲ ಕಾರ್ಮಿಕತೆ, ಬಾಲ್ಯವಿವಾಹ, ಜೀತಪದ್ದತಿ ಸೇರಿದಂತೆ ನಾನಾ ಹಿಂಸ್ಮಾತಕ ಕೈತ್ಯಗಳನ್ನು ಹಿಂದಿಗೂ ಜಿವಂತವಾಗಿರುವುದು ದುರಂತದ ಸಂಗತಿ ಇದು ಸಮಾಜಕ್ಕೆ ಅಂಟಿತ ಪಿಡುಗು ಆಗಿದೆ ಎಂದು ಹೇಳಿದ ನ್ಯಾ.ಹಂದ್ರಾಳ್ ಅವರು, ಮಕ್ಕಳ ಹಾಗೂ ಬಡವರ ಸಹಾಯಕ್ಕಾಗಿ ಕಾನೂನು ಪ್ರಾಧಿಕಾರದಿಂದ ಉಚಿತ ಸೇವೆ ದೊರೆಯಲ್ಲಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಇದೇ ಸಂದರ್ಭದಲ್ಲಿ ನರೇಗಾ ಕಟ್ಟಡ ಕಾರ್ಮಿಕರಿಗೆ ಸ್ಮಾರ್ಟ ಕಾರ್ಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ನ್ಯಾಯಾಲಯದ ಸಿವಿಲ್ ನ್ಯಾಯದೀಶ ದಾನೇಶ ಶಿವಪ್ಪ ಎಂ, ಜಿಪಂ ಸದಸ್ಯೆ ರಾಧಾ ಧರಪ್ಪ ನಾಯಕ್, ಸಿಡಿಪಿಒ ಉಷಾ, ಗ್ರೇಡ್-2 ತಹಶಿಲ್ದಾರ್ ಮಲ್ಲೇಶಪ್ಪ, ವಕೀಲರ ಸಂಘದ ಅದ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಕೆ.ವಿ. ನಿರ್ಮಲಾ, ಕಾರ್ಮಿಕ ಇಲಾಖೆ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ,ಪಿಡಿಒ ಅನ್ನಪೂರ್ಣ, ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರುಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ