ಸರ್ಕಾರದ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬನ್ನಿ

ಹಗರಿಬೊಮ್ಮನಹಳ್ಳಿ 

    ಸವಿತಾ ಸಮುದಾಯದವರು ಶೈಕ್ಷಣಿಕವಾಗಿ, ಆರ್ಥಿಕ ಮತ್ತು ಸಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಮತ್ತು ಸದೃಢರಾಗಲು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಳ್ಳಿ ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ಕರೆ ನೀಡಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಸವಿತಾ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆಯಲ್ಲಿ ಮಹರ್ಷಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಮುದಾಯದ ವೃತ್ತಿ ಗೌರವ ಕಾಪಾಡುವಂತ ಸಮುದಾಯವಾಗಿದ್ದು, ಸಮಾಜ ಈ ಸಮುದಾಯವನ್ನು ಗೌರವದಿಂದ ಕಾಣಬೇಕು ಎಂದರು.

     ಸವಿತಾ ಸಮುದಾಯದ ತಾಲೂಕು ಅಧ್ಯಕ್ಷ ಕೆ.ವೆಂಕಟ ಕ್ರಿಷ್ಣ ಮಾತನಾಡಿ ಪಟ್ಟಣದಲ್ಲಿರುವ ಸವಿತಾ ಸಮಾಜದ ಸಮುದಾಯ ಭವನವನ್ನು ಸಮುದಾಯದಿಂದಲೇ ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ, ಅದಕ್ಕೆ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು ತಾಲೂಕು ಆಡಳಿತ ಅತ್ತ ಗಮನಹರಿಸಿ, ಕುಡಿಯುವ ನೀರು, ರಸ್ತೆ, ಬೆಳೆಕು ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುವ ಮೂಲಕ ಜಯಂತಿಗೆ ಶುಭಕೋರಿದರು.

     ಟಿಪ್ಪುಸುಲ್ತಾನ್ ಸಂಘದ ತಾಲೂಕು ಅಧ್ಯಕ್ಷ ಸೈಯದ್ ಇರ್ಫಾನ್ ಮಾತನಾಡಿ, ಯಾವುದೇ ಜಯಂತಿಗಳು ಜರುಗಲಿ ಅದರಲ್ಲಿ ಎಲ್ಲಾ ಸಮುದಾಯಗಳ ತಾಲೂಕು ಪದಾಧಿಕಾರಿಗಳು ಪಾಲ್ಗೊಂಡು ನಮ್ಮ ಹಿರಿಯರಿಗೆ ಗೌರವ ಸಲ್ಲಿಸಬೇಕು ಮತ್ತು ಇದರಿಂದ ಎಲ್ಲಾ ಸಮುದಾಯಗಳಲ್ಲಿ ಸೌಹಾರ್ಧತೆ ಕಾಣಲು ಸಾಧ್ಯವೆಂದರು.

     ಪಟ್ಟಣದ ನಾಗದೇವತಾ ಆಂಗ್ಲಮಾದ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಟಿ.ವಿವೇಕಾನಂದ ಉಪನ್ಯಾಸ ನೀಡಿದರು.ಸವಿತಾ ಸಮಾಜ ತಾಲೂಕು ಉಪಾಧ್ಯಕ್ಷ ಕೆ.ಉಮೇಶ, ಕಾರ್ಯದರ್ಶಿ ಬಿ.ಕೆ.ಸಂಜಯ, ಖಜಾಂಚಿ ಎನ್.ವಿಶ್ವನಾಥ, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಕೆ.ರಾಮಕ್ರಿಷ್ಣ, ಎಂ.ಲಿಂಗಮೂರ್ತೆಪ್ಪ, ವೆಂಕಟೇಶ್, ಬಿ.ಕೆ.ಸುರೇಶ ಬಾಬು, ಗಾದಿಲಿಂಗಪ್ಪ, ಸಿ.ಮಂಜುನಾಥ, ಬಿ.ಕೃಷ್ಣ, ರಾಮು ಕೆ.ವೆಂಕಟೇಶ್, ಕೆ.ಪರಮೇಶಪ್ಪ, ಕೆ.ರಾಮಕ್ರಷ್ಣ, ಬಿ.ಸತೀಶ, ಬಿ.ಶ್ರೀನಿವಾಸ, ಕೆ,ರಘು, ಬಿ.ಕುಲ್ಲಾಯಪ್ಪ, ಸಣ್ಣ ಸಿದ್ದಪ್ಪ, ಬಿ.ಮಂಜುನಾಥ, ಕುಂಬಾರ ಸಮಾಜದ ಅಧ್ಯಕ್ಷ ಪಾಂಡುರಂಗ, ವಾಲ್ಮೀಕಿ ಸಮಾಜದ ಅಂಬಣ್ಣ, ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಮತ್ತಿತರರು ಇದ್ದರು. ತಾಲೂಕು ಕಚೇರಿ ಟೈಪಿಸ್ಟ್ ಸಿ.ಎಂ.ಗುರುಬಸವರಾಜ್ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link