ಗಮನ ಸೆಳೆದ ವಚನಗಾಯನ

ಕೊಟ್ಟೂರು
 
        ಪಟ್ಟಣದ 108 ಶಿವಲಿಂಗ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ವಚನಗಾಯನ ಕಾರ್ಯಕ್ರಮ ಜನಮನ ಸೆಳೆಯಿತು.
         ಪಟ್ಟಣದ 108 ಶಿವಲಿಂಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿ.ಸಿ.ಮಹಾಬಲ್ಲೇಶ್ವರಪ್ಪ ನಿವೃತ್ತ ಪ್ರಾಚಾರ್ಯರು ಮುಖ್ಯ ಅತಿಥಿಗಳು ಇವರ ಮಾತನಾಡಿ ಸಂಗೀತಕ್ಕೆ ಜಾತಿ ಬೇದವಿಲ್ಲ. ವರ್ಗ ಬೇದವಿಲ್ಲ, ಭಾಷೆ ಬೇದವಿಲ್ಲ ಅದ್ದರಿಂದ ಸಂಗೀತದಲ್ಲಿ ತೊಡಗಿಸಿ ಕೊಡವರ ಮುಖ ಯಾವಾಗಲು ಸಂತಸದಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವುಗಳು ಕೂಡ ಇದರಲ್ಲಿಯ ಆನಂದವನ್ನು ಅನುಭವಿಸಬೇಕು, ವಚನ ಸಾಹಿತ್ಯವನ್ನು ಸಂಗೀತದೊಂದಿಗೆ ಕೇಳಿದರೆ ದೊಡ್ಡ ಕಾಯಿಲೆಗಳು ಕೂಡ ವಾಸಿಯಾಗುತ್ತವೆ. ಸ್ಥಳೀಯ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕತ ಇಲಾಖೆಯವರು ಪ್ರಾಯೋಜಿತ ಕಾರ್ಯಕ್ರಮ ನೀಡಿ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ಕೊಡುವುದು ಶ್ಲಾಘನೀಯ ಎಂದು ಹೇಳಿದರು.
          ಅತಿಥಿ ಬಸವರೆಡ್ಡಿ ಇಂಜಿಯರ್ ಮಾತನಾಡಿ ನಾಡು ನುಡಿ ಸಂಸ್ಕತಿ ಪರಂಪರೆಗಳನ್ನು ಎತ್ತಿಹಿಡಿಯುವ ನಿಟ್ಟಿನಿಲ್ಲಿ ಸಾಂಸ್ಕತಿಕ ರಂಗ ಕೆಲಸ ಮಾಡಬೇಕಿದೆ ಎಂದರು.
 
          ಪತ್ರೆಯ್ಯ ನಿವೃತ್ತ ಶಿಕ್ಷಕರು ಮಾತನಾಡಿ ಸಂಘ ಸಂಸ್ಥೆಗಳನ್ನು ಸರ್ಕಾರವು ಪ್ರೋತ್ಸಾಹಿಸಿ ಸಹಾಯ ನೀಡಿ  ನಿರಂತರವಾಗಿ ಸಾಂಸ್ಕತಿಕ ಕಾರ್ಯಕ್ರಮ ನಡೆಯಲು ಅನುವುಮಾಡಿಕೊಡಬೇಕು ಎಂದರು.
          ರಾಮಮೂರ್ತಿಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಅವಕಾಶಗಳನ್ನು ಗ್ರಾಮೀಣ ಭಾಗದ ಪ್ರತಿಭಾವಂತರು ಬಳಸಿಕೊಂಡು ನಾಡಿನ ಸಾಂಸ್ಕತಿಕ ಶ್ರೀಮಂತಿಕೆಯನ್ನು ಉಳಿಸಿ ಬೆಳಸಬೇಕಿದೆ ಎಂದರು.
           ಕಲಾವಿದರಾದ ಜಂಬೂರು ಕುಮಾರ ಸ್ವಾಮಿಯವರು ಭೂಪರಾಗದಲ್ಲಿ ತೀನತಾಲದಲ್ಲಿ ಬಸವಣ್ಣವನರ ವಚನ, ಅಲ್ಲಮ ಪ್ರಭು ವಚನ ದುರ್ಗರಾಗದಲ್ಲಿ ಅಕ್ಕಮಹಾದೇವಿ ವಚನ ದರ್ಬಾರಿ ರಾಗದಲ್ಲಿ ಹಾಡಿ ಜನರ ಮೆಚ್ಚುಗೆಯನ್ನು ಪಡೆದರು ಕಾರ್ಯಕ್ರಮದಲ್ಲಿ ಪತ್ರೆಯ್ಯ ನಿವೃತ್ತ ಶಿಕ್ಷಕರು, ಡಿ.ಸಂಕಣ್ಣ, ಶಿಕ್ಷಕರು, ಮತ್ತಿತರರು ಇದ್ದರು, ಕಾರ್ಯಕ್ರಮದಲ್ಲಿ ಕಲಾವಿದರ ಬಳಗದಿಂದ ಉತ್ತಮವಾದ ಹಾಡುಗಾರಿಕೆ ಜನಮಸೂರೆಗೊಂಡಿತು.

 

Recent Articles

spot_img

Related Stories

Share via
Copy link