ಹಗರಿಬೊಮ್ಮನಹಳ್ಳಿ
ಭಾರತ ದೇಶದ ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮದಿನಾಚರಣೆಯನ್ನು ಬಿಜೆಪಿ ತಾಲೂಕು ಪದಾಧಿಕಾರಿಗಳು ಇಲ್ಲಿಯ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ರೋಗಿಗಳಿಗೆ ಬ್ರೇಡ್ ಹಣ್ಣುಗಳನ್ನು ವಿತರಿಸುವ ಮೂಲಕ ಆಚರಿಸಿದರು.
ನಂತರ ತಾಲೂಕು ಅಧ್ಯಕ್ಷ ನರೆಗಲ್ ಕೊಟ್ರೇಶ್ ಮಾತನಾಡಿ, ದೇಶಕಂಡ ಮಹಾನ್ ಧೀಮಂತ ನಾಯಕ, ದೇಶದ ನದಿಗಳ ಜೋಡಣೆಯ ಅತ್ಯದ್ಭುತ ಕನಸುಗಾರ, ರಸ್ತೆಗಳ ಸರದಾರ ಎಂತೆಲ್ಲ ಕರೆಯಬಹುದಾದ ವಾಜಪೇಯಿಯವರು ನಮ್ಮ ದೇಶದ ಪ್ರಧಾನಿಯಾಗಿದ್ದರು ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಅಂತಹ ಅಜಾತ ಶತೃ ನಾಯಕ ವಾಜಪೇಯಿ ಮತ್ತೊಮ್ಮೆ ಹುಟ್ಟಿಬರಲೆಂದು ಬಯಸಿದರು.
ಈ ಸಂದರ್ಭಲ್ಲಿ ಒಬಿಸಿ ತಾಲೂಕು ಘಟಕದ ಅಧ್ಯಕ್ಷ ಕಲ್ಲಳ್ಳಿ ನಿಂಗಪ್ಪ, ಮುಖಂಡ ಗಿರಿರಾಜರೆಡ್ಡಿ, ಉಮಾಪತಿ ಸ್ವಾಮಿ, ಕಂಪ್ಯೂಟರ್ ರಾಜು ಪಾಟೀಲ್, ಎಲ್.ಐ.ಸಿ ಮಲ್ಲಿಕಾರ್ಜುನ, ಹೋಟಲ್ ಸಿದ್ಧರಾಜು, ನಾಗಯ್ಯ, ಯುವ ಮುಖಂಡರಾದ ಹಂಪಾಪಟ್ಟಣ ಮಹೇಂದ್ರ, ಸಂದೀಪ್, ನೀಲಪ್ಪ ಮತ್ತು ವಟಮ್ಮನಹಳ್ಳಿ ಉದಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ