ಹುಳಿಯಾರು ಬೆಸ್ಕಾಂ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ

ಹುಳಿಯಾರು  

        ಹುಳಿಯಾರಿನ ಬೆಸ್ಕಾಂ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬುಧವಾರ ಸರಳವಾಗಿ ಆಚರಿಸಲಾಯಿತು.ಬೆಸ್ಕಾಂನ ಸೆಕ್ಷನ್ ಆಫೀಸರ್ ಉಮೇಶ್‍ನಾಯ್ಕ ಅವರು ಈ ಸಂದರ್ಭದಲ್ಲಿ ಮಾತನಾಡಿ ಒಂದು ಕಾಲದಲ್ಲಿ ಹಿಂಸೆ ಹಾಗೂ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ರತ್ನಾಕರ ಎಂಬ ಬೇಟೆಗಾರ ಇಡೀ ವಿಶ್ವವೇ ಮೆಚ್ಚುವಂತಹ ರಾಮಾಯಣ ಗ್ರಂಥವನ್ನು ರಚಿಸಿ ಮಹರ್ಷಿ ವಾಲ್ಮೀಕಿ ಎಂದು ಹೆಸರಾದರು. ವಾಲ್ಮೀಕಿಯವರು ಬದಲಾದಂತಹ ಆದರ್ಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಮತ್ತೋರ್ವ ಸೆಕ್ಷನ್ ಆಫೀಸರ್ ಎಚ್.ಜಿ.ಮೂರ್ತಿ ಅವರು ಮಾತನಾಡಿ ವಾಲ್ಮೀಕಿ, ಅಂಬೇಡ್ಕರ್, ಬಸವಣ್ಣ, ಕನಕ ಇವರನ್ನು ಜಾತಿಯಲ್ಲಿ ಬಂಧಿಸದೆ ಎಲ್ಲರೂ ನಮ್ಮವರೆಂದು ಭಾವಿಸಿ ಜಯಂತಿ ಆಚರಿಸುವ ಜೊತೆಗೆ ಅವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

       ನಗದು ಅಧಿಕಾರಿ ಕೆ.ಪಿ.ಮಂಜುನಾಥ್, ಲೈನ್‍ಮ್ಯಾನ್‍ಗಳಾದ ಗಂಗಯ್ಯ, ಜಗನ್ನಾಥ್, ಮಧು, ಫಕೃದ್ಧಿನ್, ಕೇಶವ್, ಪ್ರವೀಣ್, ದರ್ಶನ್, ಭರತ್, ಪುಟ್ಟರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link