ಮೊಳಕಾಲ್ಮುರು
ಮೊಳಕಾಲ್ಮುರು ಕ್ಷೇತ್ರ ಹಿಂದುಳಿದ ಹಣೆಪಟ್ಟಿಯಲ್ಲಿದ್ದು , ಸರ್ವರೂ ಸಹ ತಾಲ್ಲೂಕಿನ ಅಭಿವೃದ್ದಿ ಕೆಲಸಗಳಿಗೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ , ನಾನು ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ ಬೆಂಬಲ ನೀಡುತ್ತೇನೆಂದು ಜಿ.ಪಂ.ಸದಸ್ಯ ಡಾ.ಬಿ.ಯೋಗೇಶ್ ಬಾಬು ತಿಳಿಸಿದರು.
ಇವರು ಬುಧವಾರ ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ಆಡಳಿತ , ತಾಲ್ಲೂಕು ಪಂಚಾಯಿತಿ , ತಾಲ್ಲೂಕು ಪತಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ , ಹಾಗೂ ಪಟ್ಟಣ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಶ್ರೀಶ್ರೀಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಅಗತ್ಯ ಇದೆ. ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳು ಪ್ರಗತಿಯ ಹಂತದಲ್ಲಿವೆ. ಸರ್ಕಾರ ಮಟ್ಟದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ತಂದು ಅನುಷ್ಟಾನಗೊಳಿಸಲು ಶ್ರಮ ವಹಿಸುತ್ತೇನೆ ಎಂದು ತಿಳಿಸಿದರು.
ಈಗಾಗಲೇ ಬರಗಾಲ ತಾಲ್ಲೂಕು ಎಂದು ಘೋಷಣೆಯಾಗಿದ್ದು , ನಾನು ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ , ಜಾನುವಾರುಗಳಿಗೆ ಗೋಶಾಲೆ ತೆರೆಯುವುದರ ಬಗ್ಗೆ ಚರ್ಚಿಸಿ ಮನವಿ ಸಹ ಸಲ್ಲಿಸಿದ್ದೇನೆ. ಅತಿ ತುರ್ತಾಗಿ ಈ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದರು.
76 ಸಾವಿರ ಸಂಸ್ಕøತ ಶ್ಲೋಕಗಳನ್ನೊಳಗೊಂಡ ಮಹಾ ಕೃತಿ ರಾಮಾಯಣ , ರಾಮರಾಜ್ಯದ ಕನಸಿನ ಪರಿಕಲ್ಪನೆಯನ್ನು ಸೃಷ್ಠಿಸಿದ ಮಹಾಕವಿ ಮಹರ್ಷಿ ವಾಲ್ಮೀಕಿ ಋಷಿಗಳು ಎಂದು ಬಣ್ಣಿಸಿದರು. ನಾಯಕ ಸಮುದಾಯವು ಅನೇಕ ಬುಡಕಟ್ಟು ಮತ್ತು ಸಂಸ್ಕøತಿಗಳನ್ನು ಇಂದಿಗೂ ಸಹ ಆಚರಣೆ ಮಾಡುತ್ತಾ ಬಂದಿರುತ್ತೇನೆ. ಇಂದಿನ ಆಧುನಿಕ ವಿದ್ಯಾಮಾನಗಳಲ್ಲಿ ನಾವು ಸಹ ನಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ನೀಡುವುದರ ಮೂಲಕ ಸಮುದಾಯದ ಅಭಿವೃದ್ದಿಗೆ ಎಲ್ಲಾರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ತಿಳಿಸಿದರು.
ನಿವೃತ್ತ ಕಾರ್ಮಿಕ ಅಧಿಕಾರಿ ಜಯಲಕ್ಷ್ಮಿ ಮಾತನಾಡಿ ದೇಶದಲ್ಲಿ ಶೋಷಿತ ಸಮಾಜವನ್ನು ಅತ್ತಿಕ್ಕಲು ಮೇಲ್ವರ್ಗದ ಜಾತಿಯು ಪ್ರಯತ್ನಿಸುತ್ತಿದೆ . ಇಂತಹ ಪರಿಸ್ಥಿತಿಯಲ್ಲಿಯೂ ಸಹ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದ ಇಂತಹ ವ್ಯವಸ್ಥೆಯನ್ನು ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ.
ಡಾ. ಬಾಬಸಾಹೇಬ್ ಅಂಬೇಡ್ಕರ್ ರವರು ಈ ದೇಶದ ಸರ್ವ ಜನರೂ ಸಮಾನತೆ , ಆರ್ಥಿಕ ಮತ್ತು ರಾಜಕೀಯ ಎಲ್ಲಾ ವ್ಯವಸ್ಥೆಗಳನ್ನು ಜಾರಿಗೆ ತರುವ ಮುಖೇನ ಸಂವಿಧಾನವನ್ನು ಕೊಟ್ಟಿದ್ದಾರೆ. ಸಂವಿಧಾನದ ಪ್ರತಿಯನ್ನು ಈ ದೇಶದ ಬ್ರಾಹ್ಮಣ ಶಾಹಿ ಪದ್ದತಿ ಸುಟ್ಟು ಹಾಕುತ್ತಿದೆ. ಇನ್ನು ಮುಂದಾದರೂ ನಾವುಗಳು ಜಾಗೃತಿಗೊಳ್ಳದಿದ್ದರೆ ನಮಗೆ ರಕ್ಷಣೆ ಇರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಕೆ.ಜಗಲೂರಯ್ಯ ಮಾತನಾಡಿದರು.
ಕಾರ್ಯಕ್ರಮ ಕುರಿತು ಪ್ರಾಸ್ತವಿಕವಾಗಿ ತಾಲ್ಲೂಕು ತಹಶೀಲ್ದಾರ್ ಜಿ.ಕೊಟ್ರೇಶ್ ಮಾತನಾಡಿದರೆ , ಡಾ.ಜಿ.ನಾಗೇಂದ್ರಪ್ಪ ಅವರು ಉಪನ್ಯಾಸ ನೀಡಿದರು.ನಾಯಕ ಸಮುದಾಯದಲ್ಲಿ ಶಿಕ್ಷಣ , ರಾಜಕೀಯ , ಕೃಷಿ , ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಆರಂಭಗೊಳ್ಳುವ ಮುಂಚೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳು, ವಾದ್ಯಮೇಳಗಳೊಂದಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಇಟ್ಟು ಸಾರೂಟಿನಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷೆಯನ್ನು ತಾ.ಪಂ.ಅಧ್ಯಕ್ಷೆ ಶ್ರೀಮತಿ ಲತಮ್ಮ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ.ಸಾಮಾಜಿ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ , ತಾ.ಪಂ.ಸದಸ್ಯ ಟಿ.ಜಿ.ಬಸಣ್ಣ , ಎ.ಕೆ.ಮಂಜುನಾಥ್ , ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ನಾಗರಾಜ ನಾಯಕ, ಸಿ.ಡಿ.ಪಿ.ಓ. ಹೊನ್ನಪ್ಪ , ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಟಿ.ಗುರುಮೂರ್ತಿ, ಪ.ಪಂ.ಮುಖ್ಯಾಧಿಕಾರಿ ರುಕ್ಮಿಣಿ , ಸಮುದಾಯದ ಮುಖಂಡರಾದ ಪಟೇಲ್ ಜಿ ಪಾಪನಾಯಕ, ವೈ.ಡಿ.ಬಸವರಾಜ , ಗುರುರಾಜ್, ಸಂಜೀವಪ್ಪ, ಸತ್ಯನಾರಾಯಣ , ಮುರಳೀಧರ ನಾಯಕ, ಎಂ.ಓ.ಮಂಜುನಾಥ ಸ್ವಾಮಿ ನಾಯಕ, ರಾಜಶೇಖರ ನಾಯಕ, ಸೂರಯ್ಯ , ಜಿ.ಪಿ.ಸುರೇಶ್, ಬಿ.ಜೆ.ಪಿ.ಮುಖಂಡ ಶ್ರೀರಾಮರೆಡ್ಡಿ , ದಲಿತ ಮುಖಂಡ ನಾಗರಾಜ ಕಟ್ಟೆ , ತಾ.ಪಂ. ಕೆ.ಡಿ.ಪಿ. ಸದಸ್ಯ ಬಿ.ವಿಜಯ್ , ಇನ್ನು ಅನೇಕ ಸಮುದಾಯದ ಮುಖಂಡರು ಹಾಜರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಸ್ವಾಗತಿಸಿದರೆ, ಬಿ.ಓಬಣ್ಣ ಕಾರ್ಯಕ್ರಮ ನಿರೂಪಿಸಿದರು, ರಾಜಣ್ಣ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ