ಉತ್ತಮ ಸಮಾಜಕ್ಕೆ ಆಡಿಪಾಯ ಹಾಕಿಕೊಟ್ಟ ವ್ಯಕ್ತಿ ಮಹರ್ಷಿ ವಾಲ್ಮೀಕಿ: ಬಿ.ಸಿ ನಾಗೇಶ್

ತಿಪಟೂರು :

     ಸಹಸ್ರಾರು ವರ್ಷಗಳ ಹಿಂದೆಯೇ ಒಂದು ಆದರ್ಶ ಸಮಾಜಕ್ಕೆ ಆಡಿಪಾಯ ಹಾಕಿಕೊಟ್ಟ ವ್ಯಕ್ತಿ ಮಹರ್ಷಿ ವಾಲ್ಮಿಕಿ ಎಂದು ಶಾಸಕ ಬಿ.ಸಿ ನಾಗೇಶ್ ಹೇಳಿದರು.

     ಇಂದು ನಗರದ ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು ಓದು ಬರಹ ಬರದೆ ಇರುವವರಿಗೂ ಜ್ಞಾನಕೊಡುವಂತದು ನಮ್ಮ ಸಮಾಜದಲ್ಲಿ ಇದೆ, ಇಂದಿನ ಸಾಹಿತ್ಯ ಸಾಹಿತಿ ಮೃತರಾದ ನಂತರ ಅವರ ಹಿಂದೆಯೆ ನಶಿಸಿ ಹೊಗುತ್ತದೆ ಆದರೆ ಮಹರ್ಷಿಯವರ ಸಾಹಿತ್ಯ ಸಾವಿರಾರು ವರ್ಷಗಳಿಂದ ಎಲ್ಲಾರಿಗೂ ದಾರಿ ದೀಪವಾಗಿ ಎಲ್ಲಾ ಕಾಲಘಟ್ಟಗಳಲ್ಲಿಯು ಮೇಲಿನಸ್ಥಾನದಲ್ಲಿಯೇ ಇದೆ, ಭೂಮಿ ಇರುವವರೆಗೂ ಈ ಸಾಹಿತ್ಯವನ್ನು ಮೀರಿಸುವ ಬರಲಿಕ್ಕಿಲ್ಲಾ, ಇದೂ ಹಾಗೇಯೆ ನಡೆದುಕೊಂಡು ಬರುತ್ತಿದೆ ಎಂದರು.

        ಆಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಡಾ.ವಿ ಮಂಜುನಾಥ್ ಇಂದು ಜಾತಿಯ ನೆಪವೊಡ್ಡಿ, ತಮ್ಮ ಅಂಧಶ್ರದ್ಧೆಯಿಂದ ಸಾಹಿತ್ಯವನ್ನು ತೆಗಳುವ ಹಾಗೂ ಕಟ್ಟುಕಥೆ ಎಂದು ಸಾರಸಗಟಾಗಿ ತೊರೆದು ಪಾಶ್ಚಿಮಾತ್ಯ ಸಂಸ್ಕತಿಯನ್ನು ಚಪ್ಪರಿಸಿಕೊಂಡು ಅಪ್ಪಿಕೊಳ್ಳುತ್ತಿರುವ ಇಂದಿನ ಯುವ ಜನತೆ, ನಮ್ಮ ಸಂಸ್ಕತಿ ಒಣಗಿದ ರೊಟ್ಟಿ ಎಂದು ಇಂದಿನ ಯುವ ಜನತೆಯನ್ನು ಒಪ್ಪಿಕೊಳ್ಳುತ್ತಿಲ್ಲಾ, ಹಣಗಳಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಕತಿಯನ್ನು ಮೂಡ ನಂಬಿಕೆ ಎಂದು ಇಂತಹ ಭವ್ಯವಾದ ಸಂಸ್ಕತಿಯನ್ನು ಮರೆಯುತ್ತಿದ್ದೆವೆ, ಇದು ತೊಲಗಿ ಒಂದಲ್ಲ ಒಂದು ದಿನ ಮತ್ತೆ ನಮ್ಮ ಪುರಾತನ ಧರ್ಮ ಅನುಷ್ಟಾನಕ್ಕೆ ಬರುತ್ತದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ತಿಪಟೂರು ಮದಕರಿ ನಾಯಕ ಸಂಘದ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಜಯಸಿಂಹ, ಎ.ಪಿ.ಎಂ.ಸಿ ಉಪಾಧ್ಯಕ್ಷ ಮಂಜುನಾಥ್, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಡಾ.ಷಡಕ್ಷರಿ, ಸಮಾಜ ಕಲ್ಯಾಣಾಧಿಕಾರಿ ಜೆ. ದಿನೇಶ್, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಜಯಸಿಂಹ ಹಾಗೂ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap