ದಾಸಾಪುರದಲ್ಲಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ

ಸಿರಿಗೇರಿ:

         ವೃತ್ತಿಯಲ್ಲಿ ಬೇಟೆಗಾರನಾಗಿ, ಕಳ್ಳನೆಂಬ ಅಪಕೀರ್ತಿ ಗಳಿಸಿ ರಾಮಾಯಣವೆಂಬ ಮಹಾಗ್ರಂಥವನ್ನು ರಚಿಸಿ ಜಾಗತಿಕ ಮನ್ನಣೆಗೆ ಸ್ಫೂರ್ತಿಯಾದ ವಾಲ್ಮೀಕಿ ಮಹರ್ಷಿಯಂತಹ ಆದಿಕವಿಗಳ ಇತಿಹಾಸ ಮತ್ತೊಮ್ಮೆ ಚಿಮ್ಮಲಿ ಎಂದು ಪಾಲ್ತೂರು ಕಲ್ಲುಹೊಳೆ ಸಂಸ್ಥಾನ ಮಠದ ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

          ಅವರು ಸಮೀಪದ ದಾಸಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಉದ್ಘಾಟಿಸಿ ಗುರುವಾರ ಮಾತನಾಡಿದರು. ರಾಮಾಯಣ ಹಾಗೂ ರಾಮಾಯಣ ದರ್ಶನಂ ಗ್ರಂಥಗಳ ನಡುವೆ ಕೆಲ ವಿಭಿನ್ನತೆ ಇದೆ. ರಾಮಾಯಣ ಗ್ರಂಥ ಬೌತಿಕತೆಯ ವಸ್ತು ಸ್ಥಿತಿಯನ್ನು ಮಂಡಿಸಿದರೆ, ರಾಮಾಯಣ ದರ್ಶನಂ ಬೌಧ್ಧಿಕತೆಯನ್ನು ಸಾರುತ್ತದೆ.

         ಆದರೆ ಇದರಲ್ಲಿ ಮಾನವ ಪರಿಶುಧ್ಧ ಮನೋಭಾವನೆ ಹಾಗೂ ಉತ್ತಮ ಜ್ಞಾನ ಪಡೆದುಕೊಳ್ಳಬೇಕಾದರೆ ಬೌತಿಕತೆಯ ಗ್ರಂಥಗಳನ್ನು ರೂಢಿಸಿಕೊಳ್ಳುವುದು ಒಳಿತು ಎಂದರು. ತದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಡೊಳ್ಳ, ವಾಧ್ಯಮೇಳ ಕಳಸದೊಂದಿಗೆ ಅದ್ದೂರಿ ಮೆರವಣಿಗೆ ನಡೆದು ಸಮಾವೇಶಗೊಂಡಿತು.

         ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ “ವಾಲ್ಮೀಕಿ ಮಹರ್ಷಿ ರಾಮಾಯಣ ಗ್ರಂಥವನ್ನು ಬರೆಯುದರ ಮೂಲಕ ಖಡ್ಗಕ್ಕಿಂತ ಲೇಖನಿ ಹರಿತ ಎಂಬುದನ್ನು ಸಾಬೀತು ಪಡಿಸಿದ್ದಾರೆ.ಆ ಕಾರಣಕ್ಕಾಗಿ ಇಂದಿಗೂ ಸಹ ಲೇಖನಿಗೆ ಅಂತಹಾ ಮಹತ್ವ ಇದೆ ಎಂದರು. ಇಡೀ ಕಾರ್ಯಕ್ರಮದುದ್ದಕ್ಕೂ ವೇಶಭೂಷಣ ಧರಿಸಿದ ಚಿಣ್ಣರು ಪ್ರೇಕ್ಷಕರ ಗಮನ ಸೆಳೆದದ್ದು ವಿಶೇಷವಾಗಿತ್ತು. ಸಭೆಯಲ್ಲಿ ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಶಾನವಾಸಪುರ ಯರೆಪ್ಪ, ತಾಲೂಕು ಅಧ್ಯಕ್ಷ ಹೊನ್ನಪ್ಪ, ತಾಪಂ ಸದಸ್ಯ ಕರಿಯಪ್ಪ, ಗ್ರಾಪಂ ಅಧ್ಯಕ್ಷ ಬಸವರಾಜ, ನೆನೆಕ್ಕಿ ವಿರುಪಾಕ್ಷಪ್ಪ, ತಿರುಮಲ ಬಸಪ್ಪ ತಾತ, ಬಿ.ಎಂ.ಪ್ರಭುಸ್ವಾಮಿ, ಕಾರ್ಯಕ್ರಮ ಯೋಜನೆಕಾರರಾದ ತಿಮ್ಮಪ್ಪ, ಜಿಪಂ ಸದಸ್ಯೆ ರಾಧಾ ಧರಪ್ಪ ನಾಯ್ಕ, ವೇದಮೂರ್ತಿ ಶರಣಯ್ಯಸ್ವಾಮಿ, ಕಗ್ಗಲ್ ವೀರೇಶಪ್ಪ, ಹಳೇಕೋಟೆ ಶೇಷಪ್ಪ, ಬಗ್ಗೂರಪ್ಪ, ಬಲಕುಂದಿ ವೆಂಕಟೇಶ್, ಬಕಾಟೆ ಈರಯ್ಯ, ವಿಧ್ಯಾರ್ಥಿ ಕ್ಷೇಮಾಭಿವೃಧ್ಧ ಸಂಘದ ವೀರಭದ್ರನಾಯ್ಕ ಸೇರಿದಂತೆ ಸುಮಾರು ನೂರಾರು ಜನ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link