ವರಿಷ್ಠರ ಬಳಿ ಉಮೇಶ್ ಜಾದವ್ ಪರ ಲಾಬಿ ನಡೆಸಿದ ಬಿಜೆಪಿ ನಾಯಕರು..!!

ಬೆಂಗಳೂರು

     ರಾಷ್ಟ್ರೀಯ ಕಾಂಗ್ರೆಸ್‌ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆ ಯಲ್ಲಿ ಪರಾಭವಗೊಳಿಸಿದ ಉಮೇಶ್‌ ಜಾಧವ್‌ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವಂತೆ ರಾಜ್ಯದ ಬಹುತೇಕ ನಾಯಕರು ವರಿಷ್ಟರ ಬಳಿ ಲಾಬಿ ನಡೆಸಿರುವ ಅಂಶ ಬೆಳಕಿಗೆ ಬಂದಿದೆ.

      ೧೯೭೨ ರಿಂದ ನಿರಂತರವಾಗಿ ಶಾಸನಸಭೆಗೆ,ಲೋಕಸಭೆಗೆ ಆಯ್ಕೆಯಾಗಿ ಬರುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಸುಮಾರು ನಲವತ್ತೇಳು ವರ್ಷಗಳ ಕಾಲ ಸೋಲನ್ನು ಅನುಭವಿಸಿರಲಿಲ್ಲ.

      ಹೀಗೆ ಸೋಲರಿಯದ ಸರದಾರ ಎಂದು ಖ್ಯಾತರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಣದಲ್ಲಿ ಸೋಲಿಸಿದ ಉಮೇಶ್‌ ಜಾಧವ್‌ ಅವರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಬೇಕು.ಆ ಮೂಲಕ ದಲಿತರ ಕೋಟಾದಲ್ಲಿ ಉಮೇಶ್‌ ಜಾಧವ್‌ ಅವರನ್ನು ಮಂತ್ರಿ ಮಾಡಿದಂತೆಯೂ ಆಗುತ್ತದೆ.ರಾಜ್ಯದಲ್ಲಿ ಪಕ್ಷದ ಬಲ ಹೆಚ್ಚಳವಾಗಲೂ ನೆರವು ನೀಡಿದಂತಾಗುತ್ತದೆ.

        ಉಮೇಶ್‌ ಜಾಧವ್‌ ಅವರ ಗೆಲುವು ರಾಜ್ಯದಲ್ಲಿ ಕಾಂಗ್ರೆಸ್‌ ನ ಶಕ್ತಿಯನ್ನು ದಯನೀಯವಾಗಿ ಕುಗ್ಗಿಸಿರುವುದರಿಂದ ಈ ಅಂಶವನ್ನೂ ಗಮನದಲ್ಲಿಟ್ಟುಕೊಳ್ಳಬೇಕು.ಕಳೆದ ಬಾರಿ ದಲಿತರ ಕೋಟಾದಡಿ ಕೇಂದ್ರ ಸಚಿವರಾಗಿದ್ದ ರಮೇಶ್‌ ಜಿಗಜಿಣಗಿ ಅವರನ್ನು ಈ ಬಾರಿ ಮಂತ್ರಿ ಮಾಡುವ ಅಗತ್ಯವೇನಿಲ್ಲ ಎಂದೂ ಈ ನಾಯಕರು ವರಿಷ್ಟರಿಗೆ ವಿವರಿಸಿದ್ದಾರೆನ್ನಲಾಗಿದೆ.

       ಸಂಸದರಾಗಿ ರಮೇಶ್‌ ಜಿಗಜಿಣಗಿ ಯಶಸ್ವಿ ಜನಪ್ರತಿನಿಧಿ.ಆದರೆ ಕೇಂದ್ರ ಮಂತ್ರಿಯಾಗಿ ಅವರ ಸಾಧನೆ ಹೇಳಿಕೊಳ್ಳುವಂತದಲ್ಲ.ಹೀಗಾಗಿ ದಲಿತರ ಕೋಟಾದಡಿ ಉಮೇಶ್‌ ಜಾಧವ್‌ ಅವರನ್ನು ಮಂತ್ರಿ ಮಾಡಿದರೆ ರಾಜ್ಯ ಬಿಜೆಪಿಯ ಶಕ್ತಿ ಹೆಚ್ಚಳವಾಗುತ್ತದೆ.

       ಇನ್ನು ಮುಂದಿನ ಕೆಲ ಕಾಲದಲ್ಲಿ ರಾಜ್ಯ ಸರ್ಕಾರ ಉರುಳುವುದು ನಿಶ್ಚಿತವಾಗಿದ್ದು ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಎಡಗೈ ನಾಯಕರಿಗೆ ಹೆಚ್ಚಿನ ಅವಕಾಶ ನೀಡಲು ಸಾಧ್ಯವಿದೆ ಎಂದೂ ಈ ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link