ಚಿತ್ರದುರ್ಗ
ಜಿಲ್ಲಾ ಮಟ್ಟದ ಎ’ ವೃಂದದ ಅಧಿಕಾರಿಗಳು ವೈಯಕ್ತಿಕ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನು ವಿದ್ಯುನ್ಮಾನ ಇ-ಪೇರ್ ಮೂಲಕ ಆಫ್‍ಲೋಡ್ ಮಾಡಬೇಕೆಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.ನಗರದ ತ.ರಾ.ಸು ರಂಗಮಂದಿರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸಧಾರಣೆ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆಯ ಎ ವೃಂದದ ಅಧಿಕಾರಿಗಳಿಗೆ ಆಯೋಜಿಸಿದ್ದ ಇ-ಪೇರ್ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೆಲಸ ಮಾಡಿರುವ ಅಧಿಕಾರಿಗಳು ಬೇರೆಡೆಗೆ ವರ್ಗವಣೆಯಾಗಿ 4-5 ವರ್ಷಗಳಾಗಿ ಬಡ್ತಿ ಸಿಕ್ಕಾಗ ರಹಸ್ಯ (ಸಿ.ಆರ್) ವರದಿ ಬರೆಸಲು ಬರುತ್ತಾರೆ, ಅವರು ಯಾರೆಂದು ಮಾಹಿತಿ ಇರುವುದಿಲ್ಲ್ಲ, ಅಂತಹ ಸಮಸ್ಯೆಗಳನ್ನು ಬಗೆಹರಿಸಲು ಇ-ಪೇರ್ ಮೂಲಕ ಮಾಹಿತಿ ಆಫ್‍ಲೋಡ್ ಮಾಡಲು ರಾಜ್ಯ ಸರ್ಕಾರ ವ್ಯವಸ್ಥೆ ಕಲ್ಪಸಿದ್ದು ನೌಕರರಿಗೆ ಅನುಕೂಲವಾಗುತ್ತದೆ. ವರ್ಷದ ವರದಿಯನ್ನು ಈ ಮಾದರಿಯಲೇ ಪ್ರತಿ ಅಧಿಕಾರಿಯೂ ಸಲ್ಲಿಸಬೇಕೆಂದರು.
ಅಧಿಕಾರಿಗಳು ಕೆಲಸದ ಒತ್ತಡದಲ್ಲಿ ಆಯಾ ವರ್ಷದ ವರದಿ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ, ಇ-ಪೇರ್ ಮೂಲಕ ಅಧಿಕಾರಿಗಳ ವೈಯಕ್ತಿಕ ವಾರ್ಷಿಕ ಕಾರ್ಯ ನಿರ್ವಹಣಾ ವರದಿ ಆಫ್‍ಲೋಡ್ ಮಾಡುವುದರಿಂದ ಬಡ್ತಿ ಸಿಕ್ಕಾಗ ರಹಸ್ಯ (ಸಿ.ಆರ್) ವರದಿ ಬರೆಸಲು ಅನುಕೂಲವಾಗುತ್ತದೆ. ವೃಂದದ ಅಧಿಕಾರಿಗಳಿಗೆ ಹ್ಯಾಂಡ್‍ಸನ್ ತರಬೇತಿ ಮುಖ್ಯವಾಗಿದ್ದು ಎಲ್ಲರೂ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ ಅಧಿಕಾರಿಗಳು ಪ್ರತಿ ವರ್ಷದ ವೈಯಕ್ತಿಕ ಕಾರ್ಯ ನಿರ್ವಹಣಾ ಮಾಹಿತಿಯನ್ನು ವಿದ್ಯುನ್ಮಾನ ಇ-ಪೇರ್ ಮೂಲಕ ಆಫ್‍ಲೋಡ್ ಮಾಡಿದರೆ ಅಧಿಕಾರಿಗಳಿಗೆ ಪ್ರತಿ ವರ್ಷದ ಮಾಹಿತಿಯ ಪಡೆಯಲು ಅನುಕೂಲವಾಗುತ್ತದೆ. ಎಲ್ಲ ಅಧಿಕಾರಿಗಳು ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನು ಇ-ಪೇರ್ ಮೂಲಕ ಆಫ್‍ಲೋಡ್ ಮಾಡಿ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ ಮಾತನಾಡಿದರು. ಉಪವಿಭಾಗಧಿಕಾರಿ ವಿಜಯಕುಮಾರ್, ಚಳ್ಳಕೆರೆ ತಹಶೀಲ್ದಾರ್ ಮಲ್ಲಿಕಾರ್ಜುನ್, ಹೊಸದುರ್ಗ ತಹಶೀಲ್ದಾರ್ ವಿಜಯಕುಮಾರ್ ಹಾಗೂ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸವಿತಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎ ವೃಂದದ ಅಧಿಕಾರಿಗಳಿಗೆ ಜಿಲ್ಲಾ ಪ್ರಾಜೆಕ್ಟ್ ಅಧಿಕಾರಿ ಸಮರ್ಥ ಕಾರ್ಯಗಾರದಲ್ಲಿ ವಿವರ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ