ಹರಪನಹಳ್ಳಿ :
ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ಪರ್ಮನೆಂಟ್ ಭಂಡಾರದ ವಾರ್ಷಿಕ ಮಹಾಜನ ಸಭೆಯು ಶುಕ್ರವಾರ ಬ್ಯಾಂಕ್ನ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪರ್ಮನೆಂಟ್ ಭಂಡಾರದ ಅಧ್ಯಕ್ಷ ಲಕ್ಷ್ಮಣಭಟ್ ಸೂರ್ಯನಾರಾಯಣಭಟ್ ಅವರು ಮಾತನಾಡಿ, ಸಂಸ್ಥೆಯ ಏಳ್ಗೆಗೆ ಎಲ್ಲ ಸದಸ್ಯರು ಮತ್ತು ಷೇರುದಾರರು ಶ್ರಮಿಸಬೇಕು. ನಮ್ಮ ಸಂಸ್ಥೆಯಲ್ಲಿ ಪಡೆದಂತಹ ಸಾಲಗಳನ್ನು ಪ್ರತಿಯೊಬ್ಬರು ಸಮಯಕ್ಕೆ ಸರಿಯಾಗಿ ಮರುಪಾವತಿಸಿ, ಬ್ಯಾಂಕ್ನ ಅಭಿವೃದ್ದಿಗೆ ಸಹಕರಿಸಬೇಕು ಎಂದು ಕೋರಿದರು.
ಸಾಲವನ್ನು ಪಡೆದ ಗ್ರಾಹರಕು ಹಣವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಚೇತರಿಕೆ ಹೊಂದಿ. ಫರ್ಮನೆಂಟ್ ಭಂಡಾರ ತನ್ನದೇ ಆದ ಶತಮಾನದ ಇತಿಹಾಸ ಹೊಂದಿದೆ. ರಾಜ್ಯದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬ್ಯಾಂಕ್ನ ಇತಿಹಾಸ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಮಲ್ಲಿಸ್ವಾಮಿ, ಸಿ.ರಾಮಭಟ್, ಮಾಜಿ ನಿರ್ದೇಶಕರಾದ ತಟ್ಟಿ ವೆಂಕೋಬರಾವ್, ಎ.ಗಿರಿಧರ, ಟಿ.ಎಂ.ಚನ್ನವೀರಸ್ವಾಮಿ, ಬೆಂಗಳೂರು ಕೇಂಧ್ರ ಕಚೇರಿ ಕಾರ್ಯದರ್ಶಿ ಪ್ರದೀಪ ಬಿ.ಕುಲಕರ್ಣಿ ಮಾತನಾಡಿದರು.
ಮುದುಗಲ್ ಶ್ರೀಧರ ಶೆಟ್ಟಿ, ಕಟ್ಟಿ ಆನಂದಪ್ಪ, ಹಿಂದೂಪುರ ನಾಗರಾಜ್, ಹಾಲಿ ನಿರ್ದೇಶಕರಾದ ದಿವಾಕರ ಸೋಮಯಾಜಿ, ಬಿ.ಮಾಧವರಾವ್, ಗುಡಿಬಿಂದು ಮಾಧವ, ಪಿ.ವ್ಯಾಸರಾಜ್, ಎಲ್.ಬಸವರಾಜು, ಟಿ.ಎಂ.ಚಂದ್ರಧರ, ಪರ್ಮನೆಂಟ್ ಭಂಡಾರದ ಲೆಕ್ಕದ ವ್ಯವಸ್ಥಾಪಕ ಶಾಮಸುಂದರ ಭಟ್, ಎ.ಶ್ರೀನಿವಾಸಮೂರ್ತಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








