ಹರಿಹರ:
ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಹಾಲು ಉತ್ಪಾದಕರು ಹಾಗೂ ಸಂಘದ ಕಾರ್ಯದರ್ಶಿಗಳು ನನ್ನ ಎರಡು ಕಣ್ಣುಗಳಿದಂದತೆ, ಯಾವುದೇ ಕಣ್ಣಿಗೆ ಅನ್ಯಾಯವಾದರೂ ನೋವಾಗುವುದು ಈ ಹೃದಯಕ್ಕೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಗದೀಶಪ್ಪ ಬಣಕಾರ್ ಹೇಳಿದರು.
ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕ ಭವವನದಲ್ಲಿ ದಾವಣಗೆರೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 2017-18 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಅತ್ಯುತ್ತಮವಾಗಿ ನೆಡೆಯುತ್ತಿವೆ. ಸಂಘದಲ್ಲಿನ ಉತ್ಪಾದಕರು ಮತ್ತು ಕಾರ್ಯದರ್ಶಿಗಳು ನನ್ನ ಎರಡು ಕಣ್ಣುಗಳಿದ್ದಾಗೆ ಎಂದು ತಮ್ಮ ಮನದಾಳದ ಮಾತಗಳನ್ನು ಹಂಚಿಕೊಂಡರು.
ಶಿವಮೊಗ್ಗ ಹಾಲೂ ಒಕ್ಕೂಟ ರಚನೆಯಾಗಿ 35 ವರ್ಷಗಳಾದ ನಂತರ ಅಭಿವೃದ್ಧಿಯನ್ನು ಹೊಂದುತ್ತಿದೆ, ಆದರೆ ಹಾಲು ಉತ್ಪಾದಕರ ಸಹಕಾರ ಸಂಘ ರಚನೆಯಾಗಿ ಕೇವಲ 5 ವರ್ಷಗಳಾಗಿದೆ. ಕೆಲವೇ ವರ್ಷಗಳಲ್ಲಿ ಆಲದ ಮರದ ರೀತಿಯಲ್ಲಿ ಬೆಳೆದೆಕೊಂಡು, ತನ್ನ ಕಾರ್ಯವನ್ನು ಮುನ್ನೆಡೆಸುತ್ತಿದೆ. ಡೈರಿಗಳಲ್ಲಿ ಕಂಡುಬರುವ ಎಲ್ಲಾ ಸಮಸ್ಯೆಗಳನ್ನು ನಿಬಾಯಿಸಿಕೊಂಡು, ಸಂಘಕ್ಕೆ ಯಾವುದೇ ರೀತಿಯ ಚ್ಯುತಿ ಉಂಟಾಗದಂತೆ ನೂಡಿಕೊಂಡುಬಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷರಾದ ಶಿವನಾಗಪ್ಪ ಮೈಸೂರು ಮಾತನಾಡಿ, ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಕಾರ್ಯದರ್ಶಿಗಳು ಹಾಗೂ ಹಾಲು ಪರೀಕ್ಷರು ಪ್ರತಿನಿತ್ಯ ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಕೆಲಸಕ್ಕೆ ತಕ್ಕಂತೆ ಸಿಗಬೇಕಾದ ಪ್ರತಿಫಲ ಸಿಗುತ್ತಿಲ್ಲ. ಪ್ರಸ್ತುತ ದಿನದಲ್ಲಿ ಸರ್ಕಾರ ಮತ್ತು ಒಕ್ಕೂಟಗಳ ನೇತೃತ್ವದಲ್ಲಿ ಕೆಲವು ಸೌಲಭ್ಯಗಳು ಸಿಗುವ ಮುನ್ಸೂಚನೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಸಂಘದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವಿವಿಧ ಸೌಲಭ್ಯಗಳು ದೊರಕಲಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಂ ಭೋಜರಾಜ್, ಎಸ್.ಪಿ ಲೋಕೆಶ್, ಬಿ.ಎಚ್. ನಟರಾಜ್, ಪರಮೇಶ್ವರಪ್ಪ, ಎಂ ಪಾಲಾಕ್ಷಪ್ಪ, ಪಿ.ಎನ್. ಬಸವನಗೌಡ, ರೇಣುಕಮ್ಮ, ಡಿ.ವಿ.ಮಠದ್, ಶಶಿರೇಖಾ, ಸಂಜೀವ್ ಕುಮಾರ್, ಜಯದೇವಪ್ಪ, ಕೊಟ್ರಪ್ಪ, ಪಿ.ಬಿ ಮಹದೇವ್, ಎಸ್.ಜಿ ಮಹದೇವ್, ನಂದಿಗೌಡ, ಎಚ್.ಸಿದ್ದೇಶ್, ದೇವೇಂದ್ರಪ್ಪ ಬೆಳಕೇರಿ, ಸುಮಾ.ಬಿ ಹಾಗೂ ಮತ್ತಿತರರು ಹಾಜರಿದ್ದರು.