ತರಕಾರಿ ಮಾರುಕಟ್ಟೆಯ ಸ್ಥಳ ಪರಿಶೀಲನೆ

ಚೇಳೂರು

      ಬೆಳ್ಳಾವಿಗೆ ಹೋಗುರವ ರಾಜ್ಯ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ಮಾರುಕಟ್ಟೆ ವಹಿವಾಟನ್ನು ನೂತನವಾಗಿ ರಸ್ತೆಯ ಬಲಭಾಗದಲ್ಲಿ ನಿರ್ಮಿಸಿರುವ ಕೃಷಿ ಉತ್ಪನ್ನ ತರಕಾರಿ ಮಾರುಕಟ್ಟೆಗೆ ದಿನಾಂಕ 23-8-2018 ಮತ್ತು 7-8-2018ರಂದು ಭಾರತೀಯ ಕೃಷಿಕ ಸಮಾಜದ ತುಮಕೂರು ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ಇವರ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಪಧಾದಿಕಾರಿಗಳು ನೂತನವಾಗಿ ನಿರ್ಮಿಸಿರುವ ಚೇಳೂರು ಕೃಷಿ ಉತ್ಪನ್ನ ತರಕಾರಿ ಮಾರುಕಟ್ಟೆಯ ಸ್ಥಳ ಪರಿಶೀಲನೆ ಮಾಡಿದ್ದು,

       ತಮ್ಮಲ್ಲಿ ವಿನಂತಿಸುವುದೇನೆಂದರೆ, ಈಗ ಚೇಳೂರಿನಲ್ಲಿ ಬೆಳ್ಳಾವಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಇದು ತುಂಬಾ ಇಕ್ಕಟ್ಟಾದ ಜಾಗವಾಗಿದ್ದು, ರಸ್ತೆಯ ಪಕ್ಕದಲ್ಲಿರುವುರುದರಿಂದ ಅತೀ ಹೆಚ್ಚು ಅಪಘಾತ ಸಂಭವವಾಗಿದ್ದು, ಹೊಸದಾಗಿ ಹೊಸದಾಗಿ ಚೇಳೂರಿನ ರಸ್ತೆಯ ಬಲಭಾಗದ ಪ್ರದೇಶದಲ್ಲಿ ಸುಮಾರು 3 ಎಕರೆ ವಿಶಾಲವಾದ ಪ್ರದೇಶದಲ್ಲಿ ಸುಮಾರು ಕೋಟ್ಯಾಂತರ ರೂ. ಕರ್ಚು ಮಾಡಿ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತವಾದ ಮಾರುಕಟ್ಟೆ ಪ್ರಾಂಗಣ ನಿರ್ಮಿಸಿದ್ದು, ಈ ಮಾರುಕಟ್ಟೆ ಇದುವರೆಗೂ ವಹಿವಾಟನ್ನು ಸ್ಥಳಾಂತರಿಸದೇ ಇರುವುದು ವಿಷಾದನೀಯ.

     ಚೇಳೂರಿನಲ್ಲಿ ಬೆಳ್ಳಾವಿಗೆ ಹೋಗುವ ರಸ್ತೆಯ ಇಕ್ಕೆಗಳಲ್ಲಿ ತರಕಾರಿ ಮಾರುಕಟ್ಟೆ ವಹಿವಾಟು ನಡೆಯುತ್ತಿದ್ದು, ಇಲ್ಲಿ ಭದ್ರತೆ ಮತ್ತು ಸ್ವಚ್ಚತೆ ಸಮರ್ಪಕವಾಗಿಲ್ಲದೇ ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿರುತ್ತದೆ. ಹಬ್ಬ ಹರಿದಿನಗಳಲ್ಲಿ ಇಕ್ಕಟ್ಟಾದ ಮಾರುಕಟ್ಟೆಯಲ್ಲಿ ಜನದಟ್ಟಣೆ ಉಂಟಾಗಿ ವಹಿವಾಟು ನಡೆಸಲು ತುಂಬಾ ಅನಾನುಕೂಲವಾಗಿ ರಸ್ತೆಯ ಪಕ್ಕದಲ್ಲೇ ತರಕಾರಿ ಮಾರುಕಟ್ಟೆ ವಹಿವಾಟು ನಡೆಸುವುದರಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅತೀ ಹೆಚ್ಚಾಗಿರುತ್ತದೆ. ಅತೀ ಹೆಚ್ಚು ಅಪಘಾತಗಳು ಈ ಹಿಂದೆ ಸಂಭವಿಸಿದ್ದು, ಈಗಲೂ ಅಪಘಾತಗಳು ಆಗುತ್ತಿವೆ ಹಾಗೂ ವಾಹನಗಳು ಚಲಿಸಲು ದುಸ್ತರವಾಗಿದೆ. ಸರಿಯಾದ ಭದ್ರತೆ ಇಲ್ಲದೆ. ಎಷ್ಟೋ ಜನ ರೈತರು/ಸಾರ್ವಜನಿಕರು ತಮ್ಮ ಹಣವನ್ನು ಹಾಗೂ ಸರಕುಗಳನ್ನು ಕಳೆದುಕೊಂಡು ನಷ್ಠ ಅನುಭವಿಸುತ್ತಿದ್ದಾರೆ.

      ಅಲ್ಲದೆ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಕೊಚ್ಚೆ ಉಂಟಾಗಿ ರೈತರು, ಸಾರ್ವಜನಿಕರು, ಸುತ್ತಮುತ್ತಾ ವಾಸಿಸುವ ಸ್ತ್ರೀಯರು, ಮಕ್ಕಳು, ಯುವಕರು ವಯೋವೃದ್ದರು ಗ್ರಾಹಕರಿಗೆ ಉಸಿರಾಟದ ರೋಗ. ಹೃದಯ ರೋಗ, ಗಂಟಲು ಬೇನೆ, ಎದೆ ನೋವು, ರಾಸಾನಿಕ ಸೋಂಕು ಉಂಟಾಗುವ ಸಂಭವ ಹೆಚ್ಚಾಗಿದ್ದು ಅವರ ಆರೋಗ್ಯಕ್ಕೆ ಮಾರಕವಾಗಿರುತ್ತದೆ ಹಾಗೂ ರಸ್ತೆಯ ಪಕ್ಕದಲ್ಲಿರುವುದರಿಂದ ರೈತರ ಉತ್ಪನ್ನಗಳನ್ನು ತರದೆ ಬೇರೆಡೆಗೆ ತೆಗೆದುಕೊಮಡುಹೋಗಬೇಕಾಗಿದೆ.

      ಮಾರುಕಟ್ಟೆಯಲ್ಲಿ ಜನದಟ್ಟಣೆಯಿಂದ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗಿ ರೈತರಿಗೆ ಮತ್ತು ಗ್ರಾಹಕರಿಗೆ ಆರ್ಥಿಕವಾಗಿ ಹೆಚ್ಚಿನ ನಷ್ಠ ಉಂಟಾಗಿರುತ್ತದೆ ಚೇಳೂರಿನ ಟೌನ್ ಪಂಚಾಯಿತಿ ಜನಸಂಖ್ಯೆಗೆ ಅನುಗುಣವಾಗಿ ದೊಡ್ಡ ಮಾರುಕಟ್ಟೆ ಅವಶ್ಯಕವಾಗಿರುತ್ತದೆ.

       ಚೇಳೂರಿನ 3 ಎಕರೆ ವಿಶಾಲವಾದ ಜಾಗದಲ್ಲಿ ನಿರ್ಮಿಸಿರುವ ಇಲ್ಲಿನ ಮಾರುಕಟ್ಟೆಯ ಪರಿಸರ ತುಂಬಾ ನಿರ್ಮಲವಾಗಿರುತ್ತದೆ. ಎಲ್ಲಾ ರೀತಿಯಲ್ಲಿ ಸೂಕ್ತವಾಗಿರುತ್ತದೆ ಹಾಗೂ ಭದ್ರತೆ ಮತ್ತು ಸ್ವಚ್ಚತೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ. ರೈತರು ದೊಡ್ಡ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಂದು ಹೆಚ್ಚಿನ ಪ್ರಮಾಣದ ಸಂಖ್ಯೆಯಲ್ಲಿರುವ ಅಂಗಡಿ ಮಳಿಗೆಗೆ ತಂದು ಸ್ಪರ್ದಾತ್ಮಕ ಬೆಲೆಗೆ ಮಾರಾಟ ಮಾಡಿ ಆರ್ಥಿಕ ಅನುಕೂಲ ಪಡೆಯಬಹುದಾಗಿರುತ್ತದೆ.

    ಮಾರುಕಟ್ಟೆ ಪ್ರಾಂಗಣವು ನೀರು, ಬೀದಿದೀಪ, ಅಂಗಡಿ ಮಳಿಗೆ, ರಸ್ತೆ, ಶೌಚಾಲಯ, ಕ್ಯಾಂಟೀನ್, ಬ್ಯಾಂಕ್ ಈ ಎಲ್ಲಾ ಮೂಲಭೂತ ಸೌಕರ್ಯಗಳಿಂದ ಕೂಡಿದ್ದು, ವಹಿವಾಟು ನಡೆಸಲು ಸುಸಜ್ಜಿತಗೊಳಿಸಲಾಗಿದೆ. ಈ ಬಗ್ಗೆ ನಾವು ಸ್ಥಳೀಯ ಕೃಷಿಕ ರೈತರನ್ನು (ತರಕಾರಿ ಬೇಳೆಯುವ ರೈತರನ್ನು) ಬೇಟಿ ಮಾಡಿ ಪರಿಶೀಲಿಸಿದ್ದು, ಸದರಿ ಮಾರುಕಟ್ಟೆಗೆ ವಹಿವಾಟು ಸ್ಥಳಾಂತರಿಸಲು ಎಲ್ಲಾ ರೀತಿಯಲ್ಲಿಯೂ ಯೋಗ್ಯವಾಗಿರುವುದು ಕಂಡುಬರುತ್ತದೆ.

       ಆದ್ದರಿಂದ ಈಗಾಗಲೇ ಸದರಿ ಮಾರುಕಟ್ಟೆ ನಿರ್ಮಿಸಲು 9 ರಿಂದ 10 ವರ್ಷಗಳ ಕಾಲ ತೆಗೆದುಕೊಂಡಿದ್ದು ಇನ್ನೂ ಹೆಚ್ಚಿನ ವಿಳಂಬ ಮಾಡದೆ ಶೀಗ್ರವಾಗಿ ವಹಿವಾಟನ್ನು ಸ್ಥಳಾಂತರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಬಗ್ಗೆ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರುತ್ತೇವೆ.

       ವಹಿವಾಟನ್ನು ಸ್ಥಳಾಂತರಿಸಲು ವಿಳಂಬವಾದಲ್ಲಿ, ಭಾರತೀಯ ಕೃಷಿಕ ಸಮಾಜವು ಅನಿವಾರ್ಯವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುವುದೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಲಾಗಿದೆ.

      ಮನವಿ ಸ್ವೀಕರಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜೆ.ಟಿ. ವೆಂಕಟೇಶ್(ರೇವಣ್ಣ) ಮಾತನಾಡಿ 10-10-2018ರಂದು ಈ ಸಬಂಧ ಮೀಟಿಂಗ್ ಕರೆದು ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ, ನಿರ್ದೇಶಕ ಆತ್ರಯ್ಯ, ಉಪಾಧ್ಯಕ್ಷ ಶ್ರೀನಿವಾಸ್, ಸಮಾಜದ ಪದಾಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link