ವಿಕಲಚೇತನ ಮತದಾರರನ್ನು ಮತಗಟ್ಟೆಗೆ ಕರೆದೊಯ್ದುಲು ವಾಹನ ಸೌಲಭ್ಯ

ಬೆಂಗಳೂರು

        ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ಭಾರತೀಯ ಚುನಾವಣಾ ಆಯೋಗವು ವಿಕಲಚೇತನರನ್ನು ಮತದಾನ ಮಾಡುವಂತೆ  ಪ್ರೋತ್ಸಾಹಿಸಲು ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯ ಸಂದರ್ಭದಲ್ಲಿ ಮತದಾನದ ದಿನವಾದ ನವೆಂಬರ್ 3 ರಂದು ವಿಕಲಚೇತನ ಮತದಾರರನ್ನು ಅವರ ಮನೆ ಬಾಗಿಲಿನಿಂದ ಮತಗಟ್ಟೆಗೆ ಕರೆದೊಯ್ದು ಮತ್ತೆ ಅವರ ಮನೆಗೆ ಕರೆತರಲು ವಾಹನ ಸೌಲಭ್ಯವನ್ನು ವ್ಯವಸ್ಥೆ ಮಾಡಿದೆ.

        ವಿಕಲಚೇತನ ಮತದಾರರು ಕೂಡಾ ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ಈ ಹೊಸ ಸೌಲಭ್ಯವನ್ನು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಜಾರಿಗೊಳಿಸುತ್ತಿದೆ. ಆಸಕ್ತರು ಚುನಾವಣಾ ಆಯೋಗದ ಚುನಾವಣಾ ಆ್ಯಪ್‍ನಲ್ಲಿ ಇಂದಿನಿಂದ ನವೆಂಬರ್ 1 ರ ರಾತ್ರಿ 11.59 ಗಂಟೆವರೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

        ಚುನಾವಣಾ ಆಯೋಗದ ಆ್ಯಪ್ ಗೂಗಲ್ ಸ್ಟೋರ್ನಿಂದ ಸ್ಮಾರ್ಟ್ ಫೋನ್‍ಗೆ ಡೌನ್‍ಲೋಡ್ ಮಾಡಿಕೊಳ್ಳಬಹುದು. ವಾಹನ ಸೇವೆಗಳ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿ ವಿಕಲಚೇತನರು ತಮ್ಮ ಚುನಾವಣಾ ಗುರುತಿನ ಚೀಟಿಯ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ ಅವರ ನೋಂದಾಯಿಸಿಕೊಂಡ ಮೊಬೈಲ್‍ಗೆ ಒ.ಟಿ.ಪಿ. ಸಂಖ್ಯೆ ಬರುತ್ತದೆ. ಈ ಸಂಖ್ಯೆಯನ್ನು ಪುನರ್ ನಮೂದಿಸುವ ಮೂಲಕ ನೋಂದಾಯಿಸಿಕೊಂಡು ವಾಹನ ಸೌಲಭ್ಯ ಪಡೆಯಬಹುದಾಗಿದೆ.

         ಚುನಾವಣಾ ಆಯೋಗ ಈಗಾಗಲೇ ರಾಜ್ಯದಲ್ಲಿರುವ ಮತದಾನದ ಹಕ್ಕನ್ನು ಹೊಂದಿರುವ ವಿಕಲಚೇತನರ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಂದ ಪಡೆದಿದೆ. ಪ್ರಸ್ತುತ ನಡೆಯಲಿರುವ ಉಪ ಚುನಾವಣೆಯ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ನೂತನ ಸೌಲಭ್ಯ ವಿಸ್ತರಿಸಲು ಆಯೋಗ ಕ್ರಮ ಕೈಗೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap