ಕೊರೋನಾ ಜಾಗೃತಿ ಮೂಡಿಸಲು ವಾಹನ ಜಾಥಾ

ಹಿರೇಕೆರೂರು

     ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್-೧೯ ಸೋಂಕಿನ ವಿರುದ್ಧ ಹೋರಾಡುತ್ತಿರುವ ಪೊಲೀಸರು ಕೊರೊನಾ ವಾರಿಯರ್ಸ್ ನಂತೆ ಹಗಲಿರುಳು ದುಡಿಯುತ್ತಿದ್ದಾರೆ. ಇಂತಹ ಕೊರೊನಾ ವಾರಿಯರ್ಸ್ ಪೊಲೀಸರು ಇಂದು ಹಿರೇಕೆರೂರು, ಹಂಸಬಾವಿ ಸೇರಿದಂತೆ ವಿವಿಧೆಡೆ ವಾಹನ ಸಂಚಲನ ಮೂಲಕ ರಾಲಿ ನಡೆಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು.

     ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಾರ್ವಜನಿಕರು ಪೊಲೀಸರಿಗೆ ಪುಷ್ಪವನ್ನು ಅರ್ಪಣೆ ಮಾಡುವ ಮೂಲಕ ರಾಷ್ಟ್ರ ಧ್ವಜವನ್ನು ಹಿಡಿದು ಕೈ ಮುಗಿಯುತ್ತಿರುವ ದೃಶ್ಯ ಕಂಡು ಬಂದಿತು.ಪೊಲೀಸರ ಈ ಅಮೋಘ ಸೇವೆಗೆ ಹಿರೇಕೆರೂರು ಮತಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು. ಬಿ. ಬಣಕಾರ ಅವರು ಪೊಲೀಸರಿಗೆ ವಂದನೆ‌ ಸಲ್ಲಿಸಿ ಪೊಲೀಸರ ಕರ್ತವ್ಯ ಸೇವೆಯನ್ನು ಶ್ಲಾಘಿಸಿದರು.

      ಯುವನಾಯಕಿ ಸೃಷ್ಟಿ ಪಾಟೀಲ್ ಕುಟುಂಬದ ವತಿಯಿಂದ ಪೊಲೀಸರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಆರತಿ‌ ಬೆಳಗಲಾಯಿತು. ಈ ಸಂದರ್ಭದಲ್ಲಿ ವನಜಾ ಪಾಟೀಲ್, ಸೌಮ್ಯಾ ಪಾಟೀಲ್ ಸುಜಯ್ ಬೇಲೂರು ಪಾಲ್ಗೊಂಡಿದ್ದರು.ಜಾಗೃತಿ ಜಾಥಾದಲ್ಲಿ ಡಿವೈಎಸ್‌ಪಿ ಟಿ.ಸುರೇಶ್,ಎಸ್ಪಿ ಕೆ.ಜೆ.ದೇವರಾಜ್ ಎ‌ಎಸ್ಪಿ ಮಲ್ಲಿಕಾರ್ಜುನ್ ಸೇರಿದಂತೆ ಪಿಎಸ್‌ಐ, ಎಮ್ ಟಿ ದೀಪು ಸಿಪಿಐ ,ಮಂಜುನಾಥ ಪಂಡಿತ್ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link